ಹನೂರಿನಲ್ಲಿ ಕೆಂಪೇಗೌಡ ಜಯಂತಿಯನ್ನು ಸಮುದಾಯದ ಆಸೆಯಂತೆ ಅದ್ದೂರಿಯಾಗಿ ಮಾಡೋಣ ಶಾಸಕ ಎಮ್ ಆರ್ ಮಂಜುನಾಥ್.

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
Let's celebrate Kempegowda Jayanti in Hanur in a grand manner as per the wishes of the community, says MLA MR Manjunath.




ಹನೂರಿನಲ್ಲಿ ಕೆಂಪೇಗೌಡ ಜಯಂತಿಯನ್ನು ಸಮುದಾಯದ ಆಸೆಯಂತೆ ಅದ್ದೂರಿಯಾಗಿ ಮಾಡೋಣ ಶಾಸಕ ಎಮ್ ಆರ್ ಮಂಜುನಾಥ್.

ಜಾಹೀರಾತು


ವರದಿ: ಬಂಗಾರಪ್ಪ .ಸಿ.
ಹನೂರು:ಪಟ್ಟಣದಲ್ಲಿ ನಿಗದಿ ಮಾಡಿರುವಂತೆ
ವೃತ್ತದ ವಿಚಾರವಾಗಿ ನಾನು ಸರ್ಕಾರದ ಮಟ್ಟದಲ್ಲಿ ಸಕಲ ರೀತಿಯಲ್ಲಿಯು ಪ್ರಯತ್ನಿಸಲಾಗುವುದು ,ಮುಂದಿನ ದಿನಗಳಲ್ಲಿ ಅದನ್ನು ದೊಡ್ಡ ವೃತ್ತವಾಗಿ ಮಾಡಲು ಸರ್ವೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ
ಖಾಸಗಿಯಾಗಿ ವಸಪಡಿಸಿಕೊಂಡಿರುವ ಜಾಗವನನ್ನು ಒತ್ತುವರಿ ತೆರವುಗೊಳಿಸಿ, ಸರ್ವೆ ಕಛೇರಿಯ ಅಧಿಕಾರಿಗಳು ಆಗಮಿಸುವ ವೇಳೆಯಲ್ಲಿ ಸಮುದಾಯದ ಎಲ್ಲಾ ಮುಕಂಡರು ಹಾಜರಿರತಕ್ಕದ್ದು ಎಂದು ಶಾಸಕ ಎಮ್ ಆರ್ ಮಂಜುನಾಥ್ ತಿಳಿಸಿದರು.

ಹನೂರು ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶಾಸಕರು ಸರ್ಕಾರಿ ನಿಯಮದಂತೆ ಕೆಂಪೇಗೌಡ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಗುವುದು. ನಂತರ ತಾಲ್ಲೋಕಿನ ಜನರನ್ನೆಲ್ಲ ಸೇರಿಸಿ ಪಟ್ಟಣದ ಸಮುದಾಯದ ಜನರು ಒಗ್ಗೂಡಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಿದ ನಿಗದಿಪಡಿಸಿದ ದಿನದಂದು ಅದ್ಧೂರಿಯಾಗಿ ಆಚರಣೆ ಮಾಡಲು ತೀರ್ಮಾನಿಸಿದರೆ ನಾನು ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಪಟ್ಟಣದ ಮಹದೇಶ್ವರಬೆಟ್ಟ ಮುಖ್ಯ ರಸ್ತೆಯಲ್ಲಿ ಕೆಂಪೇಗೌಡ ವೃತ್ತ ಮಾಡಲು ಹಲವು ಬಾರಿ ಚರ್ಚಿಸಿದ್ದು ಜಿಲ್ಲಾಡಳಿತ ಮಟ್ಟದಲ್ಲಿ ವೃತ್ತ ನಿರ್ಮಾಣ ಪ್ರಕ್ರಿಯೆ ನಡೆಯುತ್ತಿದ್ದು ಅದಾದಮೇಲೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು. ಮಹನೀಯರ ಜಯಂತಿ ಆಚರಣೆ ಸಂಬಂಧ ನಡೆಯುವ ಪೂರ್ವಭಾವಿ ಸಭೆಗೆ ಹಲವು ಇಲಾಖೆಗಳ ಅಧಿಕಾರಿಗಳು ಗೈರಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು . ಕೂಡಲೇ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಹಶಿಲ್ದಾರರ್ರವರಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಚೈತ್ರಾ, ಬಿಇಒ ಪ್ರತಿಭಾ, ಪಪಂ ಮುಖ್ಯಾಧಿಕಾರಿ ರೇಖಾ, ನೋದಣಾಧಿಕಾರಿ ಉಷಾ ,ಅಧಿಕಾರಿಗಳಾದ ಅಂಬಿಕ , ಚಿನ್ನಣ್ಣ ,ರಂಗಸ್ವಾಮಿ ,ರಾಜೇಶ್, ಹಾಗೂ ಮುಖಂಡರುಗಳಾದ ಮಂಜೇಶ್‌ಗೌಡ, ರಾಜೂಗೌಡ, ಆನಂದ್‌ಕುಮಾರ್, , ನಟರಾಜು ನಾಗೇಂದ್ರ, ಚೇತನ್ ,ಸ್ವಾಮಿ, ಹರೀಶ್‌ಗೌಡ,ಬಂಗಾರಪ್ಪ ಸಿ .ಮಂಜೇಶ್ ,ಶಂಕರ್ ,ಸಂತೋಷ್ , ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Total Views: 0
Share This Article