ಮಕ್ಕಳ ದಾಖಲಾತಿ ಹೆಚ್ಚಳಕ್ಕೆ, ಶಿಕ್ಷಕ ಮೈಲಾರಪ್ಪ ಬೂದಿಹಾಳ ವಿಶಿಷ್ಟ ಠೇವಣಿ, ಕಲಿಕಾ ಕಿಟ್ ಕೊಡುಗೆ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
To increase the enrollment of children, teacher Mailarappa Boodihala donates special deposits and learning kits




ಮಕ್ಕಳ ದಾಖಲಾತಿ ಹೆಚ್ಚಳಕ್ಕೆ, ಶಿಕ್ಷಕ ಮೈಲಾರಪ್ಪ ಬೂದಿಹಾಳ ವಿಶಿಷ್ಟ ಠೇವಣಿ, ಕಲಿಕಾ ಕಿಟ್ ಕೊಡುಗೆ

ಜಾಹೀರಾತು

ಗಂಗಾವತಿ (ಜೂ. 4): ಖಾಸಗಿ ಶಾಲೆಗಳ ಪ್ರತಿಷ್ಠೆ, ವಾತಾವರಣಕ್ಕೆ ಮರುಳಾಗಿ ಮಕ್ಕಳನ್ನು ದಾಖಲಿಸುವ ಪೋಷಕರಿಗೊಂದು ಪಾಠವೆಂಬಂತೆ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಣವಾಳ ಶಾಲೆಯ ಶಿಕ್ಷಕರಾದ ಮೈಲಾರಪ್ಪ ಬೂದಿಹಾಳ ಸರಕಾರಿ ಶಾಲೆಗೆ ದಾಖಲಾಗುವ ಮಕ್ಕಳಿಗೆ ವಿಶಿಷ್ಟ ಪ್ರೋತ್ಸಾಹ ನೀಡುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ.

ಶಿಕ್ಷಣ, ಸಾಹಿತ್ಯ, ಪರಿಸರ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಮೈಲಾರಪ್ಪ ಬೂದಿಹಾಳ ಅವರು ತಾವು ಕಾರ್ಯನಿರ್ವಹಿಸುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಣವಾಳ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಳೇ ಜೀರಾಳ ಕಲ್ಗುಡಿಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಅನನ್ಯ ಕ್ರಮ ಕೈಗೊಂಡಿದ್ದಾರೆ.

ಸರಕಾರಿ ಶಾಲೆಗಳತ್ತ ಪೋಷಕರು ಮುಖ ತಿರುಗಿಸುತ್ತಿರುವ ಈ ಹೊತ್ತಿನಲ್ಲಿ ದಾಖಲಾತಿ ಇಳಿಕೆ ತಡೆಯಲು ಹಾಗೂ ಗುಣಾತ್ಮಕ ಶಿಕ್ಷಣದ ಭರವಸೆಯೊಂದಿಗೆ ವಿದ್ಯಾರ್ಥಿಗಳ ಗಮನ ಸೆಳೆಯಲು ಮೈಲಾರಪ್ಪ ಅವರು ಈ ಕೆಳಕಂಡ ಪ್ರೋತ್ಸಾಹ ನೀಡಲು ಮುಂದಾಗಿದ್ದಾರೆ:

· ₹1,000 ಠೇವಣಿ: 1ನೇ ತರಗತಿಗೆ ದಾಖಲಾಗುವ ಅಥವಾ ಇತರೆ ಶಾಲೆಗಳಿಂದ ಟಿ.ಸಿ. ತೆಗೆದುಕೊಂಡು ಬರುವ ಪ್ರತಿ ಮಗುವಿನ ಹೆಸರಿನಲ್ಲಿ ವಿದ್ಯಾರ್ಥಿ-ಪೋಷಕರ ಜಂಟಿ ಖಾತೆ ತೆರೆದು ₹1,000 ಠೇವಣಿ ಇಡಲಾಗುವುದು.
· ಕಲಿಕಾ ಕಿಟ್: ಒಂದು ವರ್ಷಕ್ಕೆ ಅಗತ್ಯವಿರುವ ಲೇಖನಿ, ನೋಟ್ಬುಕ್, ಪೆನ್, ಪೆನ್ಸಿಲ್, ರಬ್ಬರ್ ಸೇರಿದಂತೆ ಎಲ್ಲ ಕಲಿಕಾ ಸಾಮಗ್ರಿಗಳ ಕಿಟ್ ವಿತರಣೆ.

ಈ ಯತ್ನದ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕರಾದ ಚಂದ್ರಶೇಖರ ಕೆ.ಎಂ., ಸಿಬ್ಬಂದಿಗಳಾದ ರತ್ನಾ ಕೊಟ್ರಶೆಟ್ಟಿ, ಮೇನಕಾ, ಶರಣಪ್ಪ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಅಭಿಪ್ರಾಯ
ಮೈಲಾರಪ್ಪ ಬೂದಿಹಾಳ ಶಿಕ್ಷಕರ ಎರಡು ಕೊಡುಗೆಗಳಿಂದ ಮಕ್ಕಳಿಗೂ ಕೂಡ ಪ್ರೋತ್ಸಾಹ ದೊರೆತಂತಾಗುತ್ತದೆ ಪಾಲಕರಿಗೂ ಹಣದ ಹೊರೆ ಕಡಿಮೆಯಾದಂತೆ ಆಗುತ್ತದೆ ಮಕ್ಕಳು ಕಲಿಕೆಯಲ್ಲಿ ಮುಂದಾಗಲು ಮತ್ತು ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳು ದಾಖಲಾಗಲು ಇದು ಒಂದು
ಹೆಮ್ಮೆಯ ಕೊಡುಗೆ


ಚಂದ್ರಶೇಖರ್ ಕೆ ಎಂ ಮುಖ್ಯೋಪಾಧ್ಯಾಯರು ಹಣವಾಳ
……..

Total Views: 0
Share This Article