
Parashuram Kerehalli demands that R, Dharmasena be made an MLC or Rajya Sabha member

ಆರ್,ಧರ್ಮಸೇನಾರನ್ನು ಎಂ ಎಲ್ ಸಿ ಅಥವಾ ರಾಜ್ಯಸಭೆ ಸದಸ್ಯರನ್ನಾಗಿ ಮಾಡುವಂತೆ ಪರಶುರಾಮ್ ಕೆರೆಹಳ್ಳಿ ಆಗ್ರಹ

ಕೊಪ್ಪಳ : ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ರಾಜ್ಯದ ನೂತನ ಸಚಿವ ಸಂಪುಟ ರಚನೆ ವೇಳೆ ಮಾಜಿ ಎಂ ಎಲ್ ಸಿ ಹಾಗೂ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಅಧ್ಯಕ್ಷರಾದ ಶ್ರೀ ಆರ್.ಧರ್ಮ ಸೇನಾ ಅವರನ್ನು ಎಂಎಲ್‌ಸಿ ಅಥವಾ ರಾಜ್ಯಸಭೆ ಸದಸ್ಯರನ್ನಾಗಿ ಮಾಡುವ ಮೂಲಕ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಪರಿಶಿಷ್ಟ ಜಾತಿ ವಿಭಾಗದ ಕೆಪಿಸಿಸಿ ಮಾಧ್ಯಮ ವಕ್ತಾರರು ಹಾಗೂ ಎಸ್ ಸಿ ಘಟಕದ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಪರಶುರಾಮ ಕೆರೆಹಳ್ಳಿ ಕಾಂಗ್ರೆಸ್ ಹೈಕಮಾಂಡ್ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.
ಶ್ರೀ ಆರ್.ಧರ್ಮಸೇನಾ ಟಿ.ನರಸೀಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿಯಾಗಿ, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸುಮಾರು 11 ವರ್ಷ ಸೇವೆ ಸಲ್ಲಿಸಿದ್ದಾರೆ. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿಯೂ ಜನಸೇವೆ ಮಾಡಿದ್ದಾರೆ. ದಲಿತ ಸಮುದಾಯದಲ್ಲಿ ಅತ್ಯಂತ ಅಧಿಕ ಹಾಗೂ ತಳಸಮುದಾ ಯವಾದ ಆದಿ ಜಾಂಬವ ಎಡಗೈ ಸಮಾಜದ ಸರಳ ಸಜ್ಜನಿಕೆಯ ವ್ಯಕ್ತಿತ್ವ, ಪ್ರಾಮಾಣಿಕ ರಾಜಕಾರಣಿ, ಕ್ರಿಯಾಶೀಲ, ಸಂಘಟನೆಗಳ ಚತುರ, ಶ್ರೀ ಆರ್ ಧರ್ಮ ಸೇನಾ ಅವರನ್ನು ಎಂಎಲ್‌ಸಿ ಅಥವಾ ರಾಜ್ಯಸಭೆ ಸದಸ್ಯರನ್ನಾಗಿ ಮಾಡಿ ನೂತನ ಸಚಿವ ಸಂಪುಟ ದರ್ಜೆಯಲ್ಲಿ ಸಚಿವರನ್ನಾಗಿ ಮಾಡುವ ಮೂಲಕ ಇನ್ನಷ್ಟು ಎಸ್ ಸಿ ವರ್ಗದ ತಳಸಮುದಾಯದ ಜನರ ಸೇವೆ ಮಾಡಲು ಶಕ್ತಿ ತುಂಬಬೇಕು ಎಂದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸನ್ಮಾನ್ಯ ರಾಹುಲ್ ಗಾಂಧೀಜಿ ಅವರಲ್ಲಿ, ಶ್ರೀ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಜಿ ಅವರಲ್ಲಿ, ಡಿ.ಕೆ ಶಿವಕುಮಾರ್ ಸಾಹೇಬರಲ್ಲಿ ಮನವಿ ಮಾಡಿದ ಎಸ್ ಸಿ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀ ಗಾಳೆಪ್ಪ ಎಚ ಪೂಜಾರ್ ಅವರು ಹಾಗೂ ಎಸ್ ಸಿ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಪರಶುರಾಮ್ ಕೆರೆಹಳ್ಳಿ ರವರು ಹಾಗೂ ಕೊಪ್ಪಳ ಜಿಲ್ಲಾ ಎಸ್ ಸಿ ಘಟಕದ ಎಲ್ಲಾ ಪದಾಧಿಕಾರಿಗಳು ಪತ್ರಿಕ ಪ್ರಕಟಣೆಯಲ್ಲಿ ಒತ್ತಾಯ ಮಾಡಿದ್ದಾರೆ.
