
Teacher Sharanappa Hakkandi selected for 'Kishkindha Siri' award

‘ಕಿಷ್ಕಿಂಧ ಸಿರಿ’ ಪ್ರಶಸ್ತಿಗೆ
ಶಿಕ್ಷಕ ಶರಣಪ್ಪ ಹಕ್ಕಂಡಿ ಆಯ್ಕೆ

ಗಂಗಾವತಿ : ರಾಜ್ಯ ಮಟ್ಟದ ‘ಕಿಷ್ಕಿಂಧ ಸಿರಿ’ ಪ್ರಶಸ್ತಿಗೆ ನಗರದ ವಿರುಪಾಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಶರಣಪ್ಪ ಹಕ್ಕಂಡಿ ಆಯ್ಕೆಯಾಗಿದ್ದಾರೆ.
ಇಲ್ಲಿನ ಪರಿಸರ ಸೇವಾ ಟ್ರಸ್ಟ್ ಅನೇಕ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಶಿಕ್ಷಣ ಕ್ಷೇತ್ರದಿಂದ ಶರಣಪ್ಪ ಹಕ್ಕಂಡಿ ಆಯ್ಕೆಗೊಂಡಿದ್ದಾರೆ.
ಮೇ.31ರಂದು ಭಾನುವಾರ ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನದ ವೇದಿಕೆಯಲ್ಲಿ ನಡೆಯುವ ‘ಹಿರೇಬೆಣಕಲ್ ಮೋರೇರ ಸಾಂಸ್ಕೃತಿಕ ಸಂಭ್ರಮ’ ಸಮಾರಂಭದಲ್ಲಿ ರಾಜ್ಯ ಮಟ್ಟದ ‘ಸಿರಿಗನ್ನಡ ಮತ್ತು ‘ಕಿಷ್ಕಿಂಧ ಸಿರಿ’ ಪ್ರಶಸ್ತಿ ಪ್ರದಾನ ನಡೆಯಲಿದೆ.
ಅಭಿನಂದನೆ : ಕಿಷ್ಕಿಂಧ ಸಿರಿ ಪ್ರಶಸ್ತಿಗೆ ಆಯ್ಕೆಯಾದ ಶರಣಪ್ಪ ಹಕ್ಕಂಡಿ ಅವರಿಗೆ ಕಾವ್ಯಲೋಕ ಅಧ್ಯಕ್ಷ ಎಂ.ಪರಶುರಾಮ ಪ್ರಿಯ, ಕಲಾವಿದರಾದ ಹನುಮಂತಪ್ಪ ಗೂಗಿಬಂಡಿ, ಶಾಮೀದ್ ಲಾಠಿ, ಹನುಮಂತಪ್ಪ ನಾಯಕ, ಸಂಘಟಕ ಡಿ.ಆಂಜನೇಯ, ಕವಿ ಚಿದಾನಂದ ಕೀರ್ತಿ ಮತ್ತಿತರರು ಅಭಿನಂದಿಸಿದ್ದಾರೆ.
