ತೀರ್ವ ವಿರೋಧದ ನಡುವೆ ಶಾಲೆ ಮುಚ್ಚಲು ಮುಂದಾಗಿರುವ ಸರ್ಕಾರದ ವಿರುದ್ಧ ನಮ್ಮೂರ ಶಾಲೆ ನಮ್ಮಯ ಕಣ್ಮಣಿ – ಪ್ರತಿರೋಧ ಚಳುವಳಿಗೆ ಮುಂದಾದ ಗಡ್ಡಿ-ಬಂಡ್ರಾಳ್ ನ ಪೋಷಕರು ಮತ್ತು ಗ್ರಾಮಸ್ಥರು

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Parents and villagers of Gaddi-Bandral launch a protest movement against the government's move to close the school amid fierce opposition.




ತೀರ್ವ ವಿರೋಧದ ನಡುವೆ ಶಾಲೆ ಮುಚ್ಚಲು ಮುಂದಾಗಿರುವ ಸರ್ಕಾರದ ವಿರುದ್ಧ ನಮ್ಮೂರ ಶಾಲೆ ನಮ್ಮಯ ಕಣ್ಮಣಿ – ಪ್ರತಿರೋಧ ಚಳುವಳಿಗೆ ಮುಂದಾದ ಗಡ್ಡಿ-ಬಂಡ್ರಾಳ್ ನ ಪೋಷಕರು ಮತ್ತು ಗ್ರಾಮಸ್ಥರು.

ಜಾಹೀರಾತು

ಗಂಗಾವತಿ : ತಾಲ್ಲೂಕಿನ ಬಂಡ್ರಾಳ್ ಮತ್ತು ಗಡ್ಡಿ ಗ್ರಾಮಗಳಲ್ಲಿ “ನಮ್ಮೂರ ಶಾಲೆ ನಮ್ಮಯ ಕಣ್ಮಣಿ” ಎಂಬ ಬ್ಯಾನರ್ ಅನ್ನು ಎಸ್ ಡಿ ಎಮ್ ಸಿ ಪದಾಧಿಕಾರಿಗಳು, ಪೋಷಕರು, ಗ್ರಾಮಸ್ಥರು ಹಾಗೂ ಶಿಕ್ಷಣ ಉಳಿಸಿ ಸಮಿತಿ ಸದಸ್ಯರು ಊರಿನ ಶಾಲಾ ಮುಂಭಾಗದಲ್ಲಿ ಕಟ್ಟುವ ಮೂಲಕ ಎಲ್ಲ ಮಕ್ಕಳಿಗೂ ಮುಂದಿನ ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸುತ್ತಾ, ನಮ್ಮೂರ ಶಾಲೆ ಮುಚ್ಚಲು ನಾವು ಎಂದಿಗೂ ಬಿಡುವುದಿಲ್ಲ ಎಂದು ಘೋಷಣೆ ತೆಗೆದುಕೊಂಡು, ಪ್ರತಿರೋಧ ಚಳುವಳಿಗೆ ಚಾಲನೆ ನೀಡಿದರು. ನಮ್ಮೂರ ಶಾಲೆ ಉಳಿಯಬೇಕು ಮತ್ತು ಕೆಪಿಎಸ್ ಯೋಜನೆ ರದ್ದಾಗಬೇಕೆಂದು ಆಗ್ರಹಿಸಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಿಕೊಂಡು ಕಳೆದ 5 ತಿಂಗಳಿಂದ ಗ್ರಾಮಸ್ಥರು ಹಾಗೂ ಪೋಷಕರು ಹೋರಾಟ ನಡೆಸಿದ್ದೇವೆ. ಗ್ರಾಮ ಮಟ್ಟದಿಂದ ಆರಂಭಿಸಿ ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ವರೆಗೂ ಪ್ರತಿಭಟನೆ ಹಾಗೂ ಸಮಾವೇಶಗಳನ್ನು ನಡೆಸಿದ್ದೇವೆ. ನಾಡಿನ ಹೆಸರಾಂತ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರು ನಮ್ಮೊಂದಿಗೆ ಧ್ವನಿಗೂಡಿಸಿದ್ದಾರೆ.
ಇಷ್ಟೆಲ್ಲ ಹೋರಾಟ, ಪ್ರತಿಭಟನೆ ನಡೆದರೂ ರಾಜ್ಯ ಸರ್ಕಾರ ನಾಡಿನ ಪೋಷಕರ, ಶಿಕ್ಷಣ ತಜ್ಞರ, ಸಾಹಿತಿಗಳ ಮಾತನ್ನು ಕೇಳದೆ ಹಠಮಾರಿತನ ಧೋರಣೆ ತಾಳುತ್ತಿದೆ. ಬಡವರ ರೈತ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾದರೂ ಪರವಾಗಿಲ್ಲ, ಕೆಪಿಎಸ್ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಬಜೆಟ್ ನಲ್ಲಿ ಘೋಷಿಸಿರುವಂತೆ ಜೂನ್ ನಿಂದಲೇ ಹೊಸ ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಇಲ್ಲಿ 3 ರಿಂದ 5 ಕಿ. ಮೀ ವ್ಯಾಪ್ತಿಯ ಶಾಲೆಗಳನ್ನು ವಿಲೀನಗೊಳಿಸಲಾಗುವುದೆಂದು 15 ಅಕ್ಟೋಬರ್ 2025ರ ಆದೇಶವು ತಿಳಿಸುತ್ತದೆ. ಈ ಕುರಿತು ಪಟ್ಟಿ ಕೂಡ ದೊರೆತಿದೆ ಹಾಗೂ ಮುಂದುವರೆದು ರಾಜ್ಯ ಸರ್ಕಾರವು ಮೂರು ವರ್ಷಗಳಲ್ಲಿ ದೇಶದಲ್ಲೇ ಅತ್ಯುತ್ತಮ ಸರ್ಕಾರಿ ಶಾಲೆ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ನೆಪ ಹೇಳುತ್ತಾ. ಎಂಟು ಶಿಕ್ಷಣದ ಗ್ಯಾರಂಟಿಗಳನ್ನು ಘೋಷಿಸುತ್ತಾ ರಾಜ್ಯದ ಜನತೆಗೆ ವಿಶ್ವಾಸದ್ರೋಹ
ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇವಲ ಕೆಪಿಎಸ್ ಶಾಲೆಗಳನ್ನು ಮಾತ್ರ ಅಭಿವೃದ್ಧಿಪಡಿಸಿ, ನಮ್ಮೂರ ಶಾಲೆಗಳನ್ನು ತಾವಾಗಿಯೇ ಮುಚ್ಚುವಂತೆ ಮಾಡಲು ಹೊರಟಿದ್ದಾರೆಯೇ ಎಂದು ಪ್ರಶ್ನೆ ಕೇಳುತ್ತಾ ನಮ್ಮೂರ ಶಾಲೆಗಳನ್ನು ಉಳಿಸಿಕೊಳ್ಳಲು ಪ್ರತಿರೋಧ ಚಳುವಳಿಗೆ ಮುಂದಾದರು.
ಸಭೆಯಲ್ಲಿ,ಎಐಡಿಎಸ್ಓ ರಾಜ್ಯ ಸಮಿತಿ ಸದಸ್ಯೆ ಸಿಂಧು ಕೌದಿ, ಎಐಡಿವೈಓ ಮುಖಂಡರಾದ ಶರಣು ಪಾಟೀಲ್, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಪದಾಧಿಕಾರಿಗಳಾದ ಲಕ್ಶ್ಮಣ್ ಯಾದವ್, ದೇವರಾಜ ಬಂಡ್ರಾಳ್, ಬೆಟ್ಟಪ್ಪ ಜಲ್ಲಿ, ಮಲ್ಲೇಶ್ ಪೊಲೀಸ್ ಪಾಟೀಲ್,
ಕನಕ ಬಿಂಗಿ,ದುರುಗೇಶ್ ಜಲ್ಲಿ,ಭಾಷಾ ಸಾಬ್ ಆನೆಗುಂದಿ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Total Views: 0
Share This Article