
Ideas can be transformed into discoveries only through the proper use of technology - Prof. Kariguli.

ತಂತ್ರಜ್ಞಾನದ ಸದ್ಬಳಕೆಯಿಂದ ಮಾತ್ರ ಆಲೋಚನೆಗಳನ್ನು ಅನ್ವೇಷಣೆಗಳಾಗಿ ಪರಿವರ್ತಿಸಬಹುದು- ಪ್ರೊ. ಕರಿಗೂಳಿ.

ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ ಆಚರಿಸಲಾಯಿತು.
ಈ ದಿನಾಚರಣೆಯ ಅಂಗವಾಗಿ,ಶಾಲೆ ಅoಗಳದಲ್ಲೇ ತಾರಾಲಯ ಆಕಾಶದ ತಾರೆಗಳನ್ನು ಗ್ರಾಮೀಣ ವಿದ್ಯಾರ್ಥಿಗಳಿಗೆ ಪರಿಚಯಿಸಲು,ಸಂಚಾರಿ ತಾರಾಲಯದ ಮೂಲಕ ತಾರಾಲಯ ವೀಕ್ಷಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳನ್ನು ತಂಡ ತಂಡಗಳನ್ನಾಗಿ ರಚಿಸಿ ತಾರಾಲಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ವಿದ್ಯಾರ್ಥಿಗಳು ತುಂಬಾ ಉತ್ಸುಕತೆಯಿಂದ ತಾರಾಲಯ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ.ಕರಿಗೂಳಿ ಯವರು ಮಾತನಾಡಿ, ಜಗತ್ತಿನಲ್ಲಿ ವೈಜ್ಞಾನಿಕ ಚಿಂತನೆ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಮೂಲ ವಿಜ್ಞಾನದಲ್ಲಿ ಹೆಚ್ಚು ಆಸಕ್ತಿ ತೋರುತ್ತಾ ತಂತ್ರಜ್ಞಾನ ಬಳಸಿಕೊಳ್ಳಬೇಕು ಹಾಗೂ ನಮ್ಮ ಆಲೋಚನೆಗಳನ್ನು ಅನ್ವೇಷಣೆಗಳಾಗಿ ಪರಿವರ್ತಿಸಲು ತಂತ್ರಜ್ಞಾನವನ್ನು ಸಾಧನವಾಗಿ ಬಳಸಿಕೊಳ್ಳಬೇಕು, ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ. ಸಹಸಂಚಾಲಕರಾದ ಡಾ. ವಿರುಪಾಕ್ಷ ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಮಹಾನಗರಗಳಲ್ಲಿ ಮಾತ್ರ ಲಭ್ಯವಿರುವ ತಾರಾಲಯ ವೀಕ್ಷಣೆಯನ್ನು ಸಾಧ್ಯವಾಗಿಸಿದ ನಮ್ಮ ಪ್ರಾಂಶುಪಾಲರು ಆಲೋಚನೆ ಶ್ಲಾಘನೀಯ ಎಂದರು. ಸಂಚಾರಿ ತಾರಾಲಯದ ಸಿಬ್ಬಂದಿಗೆ ಧನ್ಯವಾದಗಳನ್ನು ತಿಳಿಸಿದರು.
ನಂತರ ಸಂಚಾರಿ ತಾರಾಲಯದ ಸಿಬ್ಬಂದಿಯಾದ ಚರಂತಯ್ಯ ಬೂಸನೂರುಮಠ ಅವರು ಈ ಯೋಜನೆ ವಿಶೇಷವಾಗಿ ಹಳ್ಳಿಗಳಲ್ಲಿರುವ ಶಾಲಾ ವಿದ್ಯಾರ್ಥಿಗಳಿಗಾಗಿಯೇ ರೂಪಿಸಿದ ಕಾರ್ಯಕ್ರಮವಾಗಿದ್ದು ಇದರ ಉಪಯೋಗ ಪಡೆದುಕೊಂಡು ಮೂಲ ವಿಜ್ಞಾನ ಅಧ್ಯಯನಕ್ಕೆ ಆಸಕ್ತಿ ತೋರಬೇಕೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಕಾಲೇಜಿನವರೆಗೂ ತಮ್ಮ ತಾರಾಲಯ ಉಪಕರಣದೊಂದಿಗೆ ಬಂದು ಇಂತಹ ಅಪರೂಪದ ಕಾರ್ಯಕ್ರಮ ಸಾಧ್ಯ ಮಾಡಿದ್ದಕ್ಕೆ ಸಂಚಾರಿ ತಾರಾಲಯದ ಸಿಬ್ಬಂದಿಯಾದ ಚರಂತಯ್ಯ ಬೂಸನೂರು ಮಠ ಮತ್ತು ಮಂಜುನಾಥ ಅವರನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕರಿಗೂಳಿ ಅವರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಶಂಕ್ರಪ್ಪ,ರವಿಕುಮಾರ್,ಶಶಿಕುಮಾರ್, ಹಾಗೂ ಉಪನ್ಯಾಸಕರಾದ,ಮಲ್ಲಯ್ಯ, ವೆಂಕಟರಾಜು, ಬಾಲಚಂದ್ರ, ದೇವರಾಜ ಸಾಯಿಕುಮಾರ್,ಪೆನಜಾ ಹಾಗೂ ಆಡಳಿತ ಸಿಬ್ಬಂದಿಯವರಾದ ಜಬೀನಾ ಬೇಗಂ, ವಿನಾಯಕ ಮತ್ತು ಸಹಾಯಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
