
The tragic death of sheep due to urea in lake water is a cause for concern for the sheep and cow.

ಕೆರೆ ನೀರಿಗೆ ಯುರಿಯಾ ಕುರಿಗಳ ದಾರುಣ ಸಾವು ಕುರಿಗಾಯಿಯ ಕಣ್ಣಿರು.

ವರದಿ: ಬಂಗಾರಪ್ಪ .ಸಿ.
ಹನೂರು: ಕುರಿ ಮೆಯಿಸಿ ಜೀವನ ನಡೆಸುತ್ತಿದ್ದ
ಮುತ್ತೆಗೌಡ ಬಿನ್ ಕರಗೆಗೌಡ ರವರಿಗೆ ಸೇರಿದ ಕುರಿಗಳನ್ನು ಅಪರಿಚಿತರು ಕುಡಿಯುವ ನೀರಿಗೆ ಯುರಿಯ ಹಾಕುವುದರ ಮೂಲಕ ಕುರಿಗಳ ಮಾರಣಹೋಮವೆ ನಡೆದಿದೆ,ಇದರಿಂದ ಬಡವನ ಹೊಟ್ಟೆಯ ಮೇಲೆ ಹೊಡೆದಂತಾಗಿದೆ ,ಎಂದು ರೈತ ಮುತ್ತೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಹನೂರು ತಾಲ್ಲೂಕಿನ 75 ಅರಬಗೆರೆ ಗ್ರಾಮದ ನಿವಾಸಿ ಮುತ್ತೇಗೌಡ ಎಂಬುವವರು ದಿನ ನಿತ್ಯದಂತೆ ಇಂದು ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುರಿ ಮೇಯಿಸಿಕೊಂಡು ಬರುವಾಗ ನೀರಿಗೆ ಹೋಗಿದಾಗ ಡಿ ವಿಲೆಜ್ ನ ಬೂದಿಕೆರೆ ನೀರಿನಲ್ಲಿ ನೀರು ಸೇವಿಸಿದ ಕುರಿಗಳು ಅಸ್ವಸ್ಥತೆ ಮಾಡಿದಾಗ ತಕ್ಷಣ ಊರಿಗೆ ವಿಷಯ ತಿಳಿಸಿ ನಂತರ ವೈದ್ಯಕೀಯ ಚಿಕಿತ್ಸೆ ನೀಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲ ಸ್ಥಳದಲ್ಲೆ ಒಟ್ಟು ಏಳು ಕುರಿಗಳು ಸಾವನ್ನಪ್ಪಿದ್ದವು ,ಸ್ಥಳಕ್ಕೆ ವೈಧ್ಯಾಧಿಕಾರಿ ಬೇಟಿ ನೀಡಿ ಪರಿಸಿಲಿಸಿದರು .
ಇದೇ ಸಮಯದಲ್ಲಿ ವೈದ್ಯಾಧಿಕಾರಿ ಸಿದ್ದರಾಜು . ಗ್ರಾಮಸ್ಥರಾದ ಶಿವಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು
