
Police Department puts brakes on Sunday sales of two-wheelers


ದ್ವಿಚಕ್ರ ವಾಹನಗಳ ಸಂಡೇ ಮಾರಾಟಕ್ಕೆ ಬ್ರೇಕ್ ಹಾಕಿದ ಪೊಲೀಸ್ ಇಲಾಖೆ
ದ್ವಿಚಕ್ರ ವಾಹನಗಳ ಮಾರಾಟಕ್ಕೆ ಬ್ರೇಕ್ ಹಾಕಿದ ಪೊಲೀಸ್ ಇಲಾಖೆ

ಗಾಡಿ ಕರೀಸುವವರೆ ಮೋಸ ಹೋಗಬೇಡಿ?
ಬ್ರೋಕರ್ ಗಳಿಂದ ಅಮಾಯಕ ಗ್ರಾಹಕರಿಗೆ ಮೋಸನಡೆಯುತ್ತದೆ.?
ತಾಲೂಕಿ ಶ್ರೀ ರಾಮನಗರ (ದೇಸೇಕ್ಯಾಂಪ್) ನಲ್ಲಿ ದನಗಳನ್ನು ಮಾರಾಟಕ್ಕೆ ಅಸು,ಎಮ್ಮಿ ಗಳು ಇನ್ನು ನಾಲ್ಕು ಡಿಲೆವರಿ ಆಗುವುದನ್ನು ಕೆಚ್ಚಲಕ್ಕೆ ತುರಕಿ ತಪ್ಪಲ ಹಚ್ಚಿ ಕೊಂಡು ಬಂದು ಎಂಟು ದಿನದಲ್ಲಿ ಡಿಲೆವರಿ ಹಾಗುವ ಹಾಗೆ ತೋರಿಸಿ ವ್ಯಾಪಾರ ಮಾಡುತ್ತಾರೆ.
ಹಾಗೆ ಸಂಡೇ ಮಾರ್ಕೆಟ್ ನಲ್ಲಿ ಬೇರೆಬೆರೆ ಜಿಲ್ಲೆಗಳಿಂದ ತಂದು ಎರಡು ಮೂರುದಿನ ನಡೆಯುವಂತೆ ಗಾಡಿಗಳನ್ನು ಸಿಂಗಾರ ಮಾಡಿ ಗ್ರಾಹಕರಿಗೆ ಮರಳು ಮಾಡಿ ಅವರ ತಲೆಗೆ ಕಟ್ಟುತ್ತಾರೆ.
ಅಲ್ಲದೆ ಗಾಡಿಯ ಮೇಲೆ ಲೋನು ಗಳಿದ್ದರೆ ಎರಡು ಮೂರು ದಿನಗಳಲ್ಲಿ ಕ್ಲೀಯರ್ ಮಾಡಿ ಕೊಡುತ್ತೆನೆಂದು ಹಣ ಪೂರ್ತಿ ಕೀಳುತ್ತಾರೆ. ಆಟೋಕನ್ಸಲ್ಟೆಂಟ್ ಸಂಘದ ವರು 500/-ವಸೂಲಿಮಾಡುತ್ತಾರೆ. ಯಾವ ರಿಸ್ಕ್ ಮಾತ್ರ

ತೆಗೆಡುಕೊಳ್ಳುವದಿಲ್ಲ. ಅಲ್ಲದೆ ಬ್ರೋಕರ್ ಗಳಿಗೆ 500/- ಕೊಡಬೇಕು.
ಇವರಾರು ಟ್ಯಾಕ್ಸ್ ಕಟ್ಟುವದಿಲ್ಲ. ಗಾಡಿ ಗ್ಯಾರಂಟಿ ತೆಗೆದುಕೊಳ್ಳುವದಿಲ್ಲ.
ಸಂಡೇಮಾರ್ಕೆಟ್ ಲ್ಲಿ ಗಾಡಿ ಖರಿದಿ ಮಾಡಿದ ಮೂರು ನಾಲ್ಕು ದಿನಗಳಲ್ಲಿ ರಿಪೇರಿಗೆ 10,15 ಸಾವಿರ ರೆಡಿ ಇರಬೇಕು ಗಾಡಿ ಸಾಕು ಮೆಂಟ್ ಕೊಡಲು ಎರಡು ಮೂರು ತಿಂಗಳ ಸತಾಯಿಸುತ್ತಾರೆ.
ಇದರ ಬಗ್ಗೆ ಜಿಲ್ಲಾಧಿಕಾರಿ ಗಳು ಗಮನಹರಿಸಿ ಗ್ರಾಹಕರಿಗೆ ಮೋಸ ಹಾಗುವದನ್ನು ತಪ್ಪಿಸು ಕ್ರಮ ಕೈಗೊಳ್ಳಲಿ ಎಂದು ನೊಂದ ಗ್ರಾಹಕರು ಅಳಲು. ಇಲ್ಲಿಯ ಸಮಸ್ಯೆ ಗಳ ಬಗ್ಗೆ ಸ್ಥಳಿಯ ಅಧಿಕಾರಿಗಳಿಗೆ ಗಳಿಗೆ ಗೊತ್ತಿದೆ.

ಗಂಗಾವತಿ,26:ನಗರದ, ಸಂಡೇ ಮಾರ್ಕೆಟ್‌ನ ಹಳೆಯ ವಾಹನಗಳ ಮಾರಾಟಕ್ಕೂ ರಾಜ್ಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. “ಗಂಗಾವತಿ” ಎಂದರೆ ಸಾಕು, ಭತ್ತದ ನಾಡು ಹಾಗೂ ಸಂಡೇ ಮಾರ್ಕೆಟ್ ಎಂಬ ಹೆಸರು ಸಹಜವಾಗಿ ನೆನಪಾಗುತ್ತದೆ.
ಆದರೆ ಇತ್ತೀಚಿನ ದಿನಗಳಲ್ಲಿ ಸಂಡೇ ಮಾರ್ಕೆಟ್‌ನಲ್ಲಿ ಮಾರಾಟವಾಗುತ್ತಿರುವ ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದಂತೆ ಗಂಭೀರ ಅಕ್ರಮಗಳು ಬೆಳಕಿಗೆ ಬಂದಿವೆ. ವಾಹನಗಳನ್ನು ಖರೀದಿ ಮಾಡಿದ ಗ್ರಾಹಕರಿಗೆ ಅಗತ್ಯವಾದ ಕಾನೂನುಬದ್ಧ ದಾಖಲೆಗಳನ್ನು ನೀಡದೇ ಮಾರಾಟಗಾರರು ಸತಾಯಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಹಾಗೂ ಗ್ರಾಮೀಣ ಪ್ರದೇಶಗಳಿಂದ ಜನರು ಗಂಗಾವತಿಯ ಸಂಡೇ ಮಾರ್ಕೆಟ್‌ಗೆ ಆಗಮಿಸಿ ಹಳೆಯ ವಾಹನಗಳನ್ನು ಖರೀದಿಸುತ್ತಾರೆ. ಆದರೆ ಖರೀದಿಯ ನಂತರ ವಾಹನಗಳ RC, ಇನ್ಸುರನ್ಸ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ನೀಡದೇ ಇರುವುದರಿಂದ ಗ್ರಾಹಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಈ ಸಂಬಂಧ ಗಂಗಾವತಿ ನಗರ ಪೊಲೀಸ್ ಠಾಣೆಗೆ ಅನೇಕ ದೂರುಗಳು ದಾಖಲಾಗಿವೆ. ದಾಖಲೆಗಳಿಲ್ಲದ ವಾಹನ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ದೂರುಗಳ ಪರಿಶೀಲನೆ ನಡೆಸಿದ ಪೊಲೀಸ್ ಇಲಾಖೆ ಅಧಿಕಾರಿಗಳು, ನಿಯಮ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಸಂಡೇ ಮಾರ್ಕೆಟ್‌ನಲ್ಲಿ ನಡೆಯುತ್ತಿದ್ದ ದ್ವಿಚಕ್ರ ವಾಹನಗಳ ಮಾರಾಟಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ. ಜೊತೆಗೆ, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ.
ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಗ್ರಾಹಕರ ಹಿತಕ್ಕಾಗಿ ಈ ಕ್ರಮ ಅಗತ್ಯ ಎಂದು ಅಭಿಪ್ರಾಯಪಟ್ಟರೆ, ಮತ್ತೊಂದೆಡೆ ವ್ಯಾಪಾರಿಗಳಿಗೆ ತೊಂದರೆ ಉಂಟಾಗಿದೆ ಎಂದು ಕೆಲವರು ಹೇಳಿದ್ದಾರೆ.
