ವನಜಭಾವಿ ಗ್ರಾಮದಲ್ಲಿ 893 ನೇ ಬಸವ ಜಯಂತಿಬಸವಣ್ಣನವರು ನಾಲ್ಕು ಕಾಲಿನ ಎತ್ತಲ್ಲ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು

893rd Basava Jayanti celebrated in Vanajbhavi villageBasavanna was not a four-legged bull

ವನಜಭಾವಿ ಗ್ರಾಮದಲ್ಲಿ 893 ನೇ ಬಸವ ಜಯಂತಿ
ಬಸವಣ್ಣನವರು ನಾಲ್ಕು ಕಾಲಿನ ಎತ್ತಲ್ಲ ಮಾನವಕುಲವನ್ನು ಸಮಾನತೆಯಿಂದ ಹೆತ್ತಿ ಹಿಡಿದ ಮಹಾಮಾನವತಾವಾದಿ : ಪೂಜ್ಯ ವಿರತೀಶಾನಂದ ಸ್ವಾಮಿ ಗಳು ಸಲಹೆ

ಜಾಹೀರಾತು

ಯಲಬುರ್ಗಾ ತಾಲೂಕಿನ ವನಜಭಾವಿ ಗ್ರಾಮದಲ್ಲಿ ಇಂದು ರಾಷ್ಟ್ರೀಯ ಬಸವದಳದ ವತಿಯಿಂದ 893ನೇ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಪ್ರಾಸ್ತಾವಿಕ ಮಾತನಾಡದ ಶರಣ ದೇವಪ್ಪ ಕೋಳೂರು ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷ ವನಜಭಾವಿ ಇವರು ಮಾತನಾಡಿ, ಬಸವಣ್ಣನವರು ನಾಲ್ಕು ಕಾಲಿನ ಎತ್ತಲ್ಲ ಮಾನವಕುಲವನ್ನು ಸಮಾನತೆಯಿಂದ ಹೆತ್ತಿ ಇಡಿದ ಮಹಾಮಾನವತಾವಾದಿ. ಗುರು ಬಸವಣ್ಣನವರು ಎರಡು ಕೊಂಬು ಒಂದು ಬಾಲ ಇರುವ ಎತ್ತಲ್ಲ. ಜನ ಸಮುದಾಯವು ಭಾವಿಸಿರುವಂತೆ ಅವರು ನಾಲ್ಕುಕಾಲಿನ ಎತ್ತಲ್ಲ, ಅದರ ಬದಲಾಗಿ ಸಮಾಜದ ಜನರನ್ನ ಅಜ್ಞಾನ, ಮೌಢ್ಯ ಮತ್ತು ಅನಾಚಾರಗಳಿಂದ ಬಳಲುತ್ತಿರುವವರನ್ನ ಮೇಲೆತ್ತಿದವರು ಗುರು ಬಸವಣ್ಣನವರು.
ಅಂತವರನ್ನ ಸನ್ಮಾರ್ಗದತ್ತ ಕರೆದೊಯ್ಯುವ ಕಾಯಕ ಮಾಡಿದವರು, ವಚನ ಸಾಹಿತ್ಯದ ತತ್ವಾದರ್ಶಗಳಂತೆ ನಡೆಯುವವರು ಮಾತ್ರ ವ್ಯಕ್ತಿಗತ ದೊಷಗಳನ್ನ ನಿವಾರಿಸಿಕೊಂಡು ನೆಮ್ಮದಿಯಿಂದ ಬದುಕಲು ಸಾಧ್ಯವಿದೆ ಅದಕ್ಕಾಗಿ ನಾವುಗಳು ಇಂದು ನಮ್ಮ ಗ್ರಾಮದಲ್ಲಿ ಸಮಾನತೆಯ ತತ್ವ ಸಾರಿದ ಮಹಾತ್ಮ ಬಸವೇಶ್ವರನ ಜಯಂತಿ ಯನ್ನ ಅವರ ಆದರ್ಶ ಗಳನ್ನ ಮೈಗೂಡಿಸಿಕೊಂಡು ಬದುಕುವುದರ ಮೂಲಕ ಜನ್ಮ ದಿನವನ್ನ ಆಚರಿಸುತ್ತಿದ್ದೇವೆ ಎಂದು ನುಡಿದರು. ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದ ಪರಮ ಪೂಜ್ಯ ವಿರತೀಶಾನಂದ ಸ್ವಾಮಿಗಳು ವಿರಕ್ತ ಮಠ ಮನಗುಳಿ ಇವರು ಮಾತನಾಡಿ
ಗುರು ಬಸವಣ್ಣನವರು ಸಮಾಜಕ್ಕೆ ಕಲ್ಪಿಸಿಕೊಟ್ಟಂತ ಮೂರು ಮಹತ್ವದ ತತ್ವಗಳೆಂದರೆ ಕಾಯಕ, ದಾಸೋಹ, ಮತ್ತು ಇಷ್ಟಲಿಂಗ ಪೂಜೆ. ಇವುಗಳನ್ನ ಪ್ರತಿಯೊಬ್ಬ ಮಾನವ ಜೀವಿಗಳು ಅರಿತುಕೊಂಡು ಆಚರಣೆಯಲ್ಲಿ ತಂದರೆ, ಜಗತ್ತಿನ ಎಲ್ಲಾ ಮೌಢ್ಯತೆಯ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗುತ್ತದೆ.
ಸಮಾಜಿಕತೆಯಲ್ಲಿ ಜಾತಿಪದ್ಧತಿ ತುಂಬಿ ತುಳುಕುತ್ತಿದೆ, ಲಿಂಗತಾರತಮ್ಯ ಇದೆ, ಅಜ್ಞಾನ ಇದೆ, ಮೌಢ್ಯತೆ ಇದೆ, ಭ್ರಷ್ಟಾಚಾರ ಇದೆ, ಸುಲಿಗೆ ಇದೆ, ಬಡವ – ಶ್ರೀಮಂತ ಎನ್ನುವ ಬೇದ ಭಾವವಿದೆ, ಇಂತಹ ಅನೇಕ ಸಾಮಾಜಿಕ ಮೌಢ್ಯಗಳು ಇಂದಿಗು ಇವೆ. ಇಂತಹ ಮೌಢ್ಯಗಳ ನಿವಾರಣೆಗೆ ನಿಜವಾದ ಮದ್ದು ಗುರು ಬಸವಣ್ಣನವರು ಹೇಳಿದ ಕಾಯಕ, ದಾಸೋಹ, ಮತ್ತು ಲಿಂಗಪೂಜೆ.
ಪರಮ ಪೂಜ್ಯ ಡಾ।। ಲಿಂಗಾನಂದ ಸ್ವಾಮಿಗಳು ಮತ್ತು ಹರ್ಡೇಕರ ಮಂಜಪ್ಪನವರದು ಅನುಕರಣೀಯ ಜೀವನ. ಅಪ್ರತಿಮ ರಾಷ್ಟ್ರ ಭಕ್ತರಾಗಿದ್ದ ಅವರು ಸಮಾಜ ಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟವರು. ಜನ ಸಮುದಾಯ ಒಂದುಗೂಡಬೇಕೆಂದು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ
‘ರಾಷ್ಟ್ರೀಯ ಬಸವ ದಳ ಸ್ಥಾಪಿಸಿದರು. ಮತ್ತು ಹರ್ಡೆಕರ್ ಮಂಜಪ್ಪನವರು ಬಸವ ಜಯಂತಿಯನ್ನ ಆಚರಣೆಗೆ ತಂದರು. ಸಂಸ್ಕೃತ, ಕನ್ನಡ, ಮರಾಠಿ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದರು. ಅವರ ತತ್ವಾದರ್ಶಗಳನ್ನು ನಾವೆಲ್ಲ ಪಾಲಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣ ಬಸವರಾಜಪ್ಪ ಇಂಗಳದಾಳ ಸಾ ಕೋಳಿಹಾಳ ಇವರು ಮಾತನಾಡಿ , ಗುರು ಬಸವಣ್ಣನವರ ತತ್ವಾದರ್ಶಗಳನ್ನ ಜನ ಮನಕ್ಕೆ ಬಿತ್ತರಿಸಬೇಕಾದರೆ ಶರಣರ ಸತ್ಸಂಗ ಮತ್ತು ಮಹಾತ್ಮರ ಜಯಂತಿಯ ನೆಪ ಮಾಡಿಕೊಂಡು ಶಿವಾನುಭವ ಕಾರ್ಯಕ್ರಮ ಹಮ್ಮಿಕೊಳ್ಳುವದರ ಮೂಲಕ ನಮ್ಮ ಮನ ಪರಿವರ್ತನೆಗೊಳ್ಳಲು ಸಾಧ್ಯವಿದೆ ಎಂದರು. ಕಾರ್ಯಕ್ರಮಲ್ಲಿ ಷಟಸ್ಥಲ ಧ್ವಜಾರೋಹಣವನ್ನು ಶರಣ ರುದ್ರಪ್ಪ ಮರಕಟ್ ಇವರು ನೆರವೇರಿಸಿದರು.
ಬಸವನಗೌಡ ಪೋಲಿಸ್ ಪಾಟೀಲ್, ಹನಮಂತಪ್ಪ ದಳಪತಿ, ಮಹಾದೇವಪ್ಪ ಚನ್ನಳ್ಳಿ, ಶರಣ ಅಮರೇಶಪ್ಪ ಗಡಿಹಳ್ಳಿ, ಗಡಿಹಳ್ಳಿ, ಕೃಷ್ಣ ಪತ್ತಾರು ಶಿಕ್ಷಕರು ವನಜಭಾವಿ, ಹನಮಗೌಡ ಡಿ.ಗೌಡ್ರ, ವೇದಿಕೆ ಹಂಚಿಕೊಂಡು ಮಾತನಾಡಿದರು. ಕಾರ್ಯಕ್ರಮದ ಬಸವರಾಜ್ ಹೂಗಾರ, ಶರಣಪ್ಪ ಹೊಸಳ್ಳಿ, ಗಿರಿಮಲ್ಲಪ್ಪ ಪರಂಗಿ, ಚಿದಾನಂದಗೌಡ ಗೊಂದಿ, ನಿಂಗಪ್ಪ ಪರಂಗಿ, ವಿರುಪಾಕ್ಷಪ್ಪ ಮೇಟಿ, ಪರಮೇಶ್ವರ ಉಚ್ಚಲಕುಂಟಿ, ಹನಮಂತಪ್ಪ ಮೇಟಿ, ಹನಮಂತಪ್ಪ ಹೊರಪೇಟಿ, ಭೀಮನಗೌಡ ಗೌಡ್ರ, ಮಹಾಂತಗೌಡ ಪೋಲಿಸ್ ಪಾಟೀಲ್, ಅಮರೇಶ್ ನಿಡಶೇಸಿ, ಶರಣಪ್ಪ ಗೊಂದಿ, ಯಲ್ಲಪ್ಪ ಅತ್ತಿಗುಡ್ಡದ ಮತ್ತು ಗ್ರಾಮದ ಗುರು ಹಿರಿಯರು ಪಾಲ್ಗೊಂಡ ಕಾರ್ಯಕ್ರಮ ಯಶಸ್ವಿಗೆ ಸುತ್ತ ಮುತ್ತಲಿನ ಗ್ರಾಮದಿಂದ ಅನೇಕ ಬಸವಾಭಿಮಾನಿಗಳು ಆಗಮಿಸಿ ಈ ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಅಕ್ಕ ನಾಗಲಾಂಬಿಕ ಮಹಿಳಾ ಗಣದ ಶರಣೆಯರಾದ ಸಾವಿತ್ರಮ್ಮ ಆವಾರಿ ಮತ್ತು ಬಸಮ್ಮ ಹೂಗಾರ ಇವರನ್ನು ಸ್ಥಾಪಿಸಲಾಯಿತು.
✍️ ಬಸವರಾಜ ಎಸ್ ಹೂಗಾರ ರಾಷ್ಟ್ರೀಯ ಬಸವ ದಳ ಶರಣಗ್ರಾಮ ಗುಳೆ

Total Views: 0
Share This Article