ಒಳಮೀಸಲಾತಿ ಅನ್ವಯಿಸದೇ ಹೊರಡಿಸಿರುವ ನೇಮಕಾತಿ ಅಧಿಸೂಚನೆಗಳನ್ನು ತಕ್ಷಣವೇ ಹಿಂಪಡೆಯಿರಿ: ಎಸ್. ಸಂಗಮೇಶ್

H.Mallikarjun
H.Mallikarjun - Kalyanasiri
2 Min Read
ಜಾಹೀರಾತು





Immediately withdraw recruitment notifications issued without applying internal reservation: S. Sangamesh

ಒಳಮೀಸಲಾತಿ ಅನ್ವಯಿಸದೇ ಹೊರಡಿಸಿರುವ ನೇಮಕಾತಿ ಅಧಿಸೂಚನೆಗಳನ್ನು ತಕ್ಷಣವೇ ಹಿಂಪಡೆಯಿರಿ: ಎಸ್. ಸಂಗಮೇಶ್

ಜಾಹೀರಾತು

ಬೆಂಗಳೂರು,: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಅನ್ವಯಿಸದೇ ಹೊರಡಿಸಿರುವ ನೇಮಕಾತಿ ಅಧಿಸೂಚನೆಗಳನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಹಾಗೂ ಒಳ ಮೀಸಲಾತಿ ಜಾರಿಗೊಳಿಸಲು ನಿರ್ದೇಶನ ನೀಡಬೇಕೆಂದು ಕರ್ನಾಟಕ ರಾಜ್ಯ ಯುವ ಸಮೂಹ ರಾಜ್ಯಪಾಲರನ್ನು ಒತ್ತಾಯಿಸಿದೆ. 

ಈ ಸಂಬಂಧ ಸಂಬಂಧ ಸಂಘದ ರಾಜ್ಯಾಧ್ಯಕ್ಷ ಎಸ್. ಸಂಗಮೇಶ್ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಅಜಿತ್ ಅವರು ರಾಜ್ಯಪಾಲರಿಗೆ ಮನವಿ ಬರೆದಿದ್ದು, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಯ ಹೊಣೆಗಾರಿಕೆಯನ್ನು ಮನಗಂಡು ತಮಗೆ ಮನವಿ ಸಲ್ಲಿಸುತ್ತಿದ್ದೇವೆ. ರಾಜ್ಯ ಸರ್ಕಾರ 2023ರ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ವಿಧೇಯಕ ಮಂಡಿಸಿ, ಅನುಮೋದನೆ ಪಡೆದೆ. ಜೊತೆಗೆ ರಾಜ್ಯಪಾಲರ ಅಂಕಿತ ಕೂಡ ದೊರೆತಿದೆ. ಆದಾಗ್ಯೂ, ಇಂದಿನವರೆಗೆ ಈ ವಿಧೇಯಕವನ್ನು ಗೆಜೆಟ್ನಲ್ಲಿ ಪ್ರಕಟಿಸದೇ ಸಂವಿಧಾನಬದ್ಧ ಪ್ರಕ್ರಿಯೆಯ ಉಲ್ಲಂಘನೆ ಮಾಡಿದೆ. ಇದು ಸಾಮಾಜಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಎಂದಿದ್ದಾರೆ. 

ಇನ್ನೊಂದೆಡೆ, ಯಾವುದೇ ನ್ಯಾಯಾಲಯವು ಒಳ ಮೀಸಲಾತಿಯನ್ನು ಸ್ಥಗಿತಗೊಳಿಸುವ ಅಥವಾ ರದ್ದುಪಡಿಸುವ ಆದೇಶ ನೀಡದಿದ್ದರೂ ಸಹ, ಇದೇ ಫೆಬ್ರವರಿ 27 ರಂದು ಹೊರಡಿಸಿರುವ ಸರ್ಕಾರದ ಆದೇಶದ ಮೂಲಕ ಒಳ ಮೀಸಲಾತಿಯನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿ ನೇಮಕಾತಿ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ.

ಈ ಕ್ರಮದಿಂದ ಪರಿಶಿಷ್ಟ ಜಾತಿಗಳ, ವಿಶೇಷವಾಗಿ ಮಾದಿಗ ಸಮುದಾಯದ, ಸಂವಿಧಾನಬದ್ಧ ಹಕ್ಕುಗಳನ್ನು ಕಳಪೆಗೊಳಿಸುವ ಪ್ರಯತ್ನ ನಡೆಯುತ್ತಿದೆ. ಈ ಸಮುದಾಯ ಸುಮಾರು 3500ಕ್ಕೂ ಹೆಚ್ಚು ಹುದ್ದೆಗಳು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಇದಲ್ಲದೇ, 2022ರ ಕಾಯ್ದೆ ಜಾರಿಯಲ್ಲಿರುವ ಸಂದರ್ಭದಲ್ಲೇ 1995ರ ಸರ್ಕಾರದ ಆದೇಶವನ್ನು ಆಧರಿಸಿ 56,432 ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿರುವುದು ಕಾನೂನುಬಾಹಿರವಾಗಿದೆ. ಅನ್ಯಾಯ ಮತ್ತು ಉದ್ದೇಶಪೂರ್ವಕ ಆಡಳಿತಾತ್ಮಕ ದುರುಪಯೋಗ ಆಗಿದೆ ಎಂದು ಅವರು ಗಂಭೀರವಾಗಿ ಆಪಾದಿಸಿದ್ದಾರೆ. 

ರಾಜ್ಯಪಾಲರಿಂದ ಅಂಗೀಕಾರ ಪಡೆದ ವಿಧೇಯಕವನ್ನು ತಕ್ಷಣ ಗೆಜೆಟ್ನಲ್ಲಿ ಪ್ರಕಟಿಸಬೇಕು. ನೇಮಕಾತಿ ಆದೇಶಗಳನ್ನು ತಕ್ಷಣವೇ ರದ್ದುಪಡಿಸಬೇಕು. ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಎಲ್ಲಾ ನೇಮಕಾತಿಗಳನ್ನು ಒಳ ಮೀಸಲಾತಿಯೊಂದಿಗೆ ಮಾತ್ರ ನಡೆಸಬೇಕು. ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಕಡ್ಡಾಯಗೊಳಿಸುವ ನಿರ್ಧಾರ ಕೈಗೊಳ್ಳಬೇಕು.

ಪರಿಶಿಷ್ಟ ಜಾತಿಗಳ ಎಲ್ಲಾ ಕ್ಷೇತ್ರಗಳಲ್ಲಿ ಒಳ ಮೀಸಲಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಮೀಸಲಾತಿಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಶಿಕ್ಷಣ ಹಾಗೂ ಉದ್ಯೋಗದ ಎಲ್ಲಾ ಹಂತಗಳಲ್ಲಿ ಒಳ ಮೀಸಲಾತಿ ಕಡ್ಡಾಯಗೊಳಿಸಬೇಕು.2001ರಿಂದ ಬಾಕಿ ಇರುವ ಬ್ಯಾಕ್ಲಾಗ್ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಲು ವಿಶೇಷ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸರ್ಕಾರದ ತೀರ್ಮಾನದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು   ಅಜಿತ್, ನಿಂಗರಾಜ್  ಗುಳೆ,  ದೇವರಾಜ್ ಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು  ಎಚ್ಚರಿಕೆ ನೀಡಿದ್ದಾರೆ.

Total Views: 0
Share This Article