
Kerehalli Adi Hanumappa needs rejuvenation


ಕೆರೆಹಳ್ಳಿ ಆದಿ ಹನುಮಪ್ಪನಿಗೆ ಬೇಕಿದೆ ಕಾಯಕಲ್ಪ

ಕೊಪ್ಪಳ: ಜಿಲ್ಲೆಯ ಗುಡ್ಡದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಕೆರೆಹಳ್ಳಿ ಸೀಮೆ ಐತಿಹಾಸಿಕವಾಗಿ ತುಂಬಾ ಮಹತ್ವ ಪಡೆದಿದೆ. ವಿಶ್ವ ಪಾರಂಪರಿಕ ತಾಣವಾದ ಹಂಪಿಯ ಪಶ್ಚಿಮ ದಿಕ್ಕಿನಲ್ಲಿರುವ ಕೆರೆಹಳ್ಳಿ ಈ ಹಿಂದೆ ದಿಂದಿರಿಗಿ ಪಟ್ಟಣವೆಂದು ಪ್ರಚಲಿತದಲ್ಲಿತ್ತು. ಆಧುನಿಕ ಕಾಲಘಟ್ಟದಲ್ಲಿ ಈ ಗ್ರಾಮವನ್ನು ಕೆರೆಹಳ್ಳಿ ಎಂದು ಕರೆಯಲಾಗುತ್ತಿದೆ. ಈ ಭಾಗದಲ್ಲಿ ಅನೇಕ ಐತಿಹಾಸಿಕ ಕೋಟೆ ಕೊತ್ತಲಗಳು, ಕೆರೆಗಳು, ಮಂಟಪಗಳು, ಆದಿವಾಸಿಗಳು ನೆಲೆಸಿರುವ ಕುರುಹುಗಳು ಸೇರಿದಂತೆ ಹಲವು ಪ್ರಾಣದೇವರ ಮಂದಿರಗಳು ಇವೆ. ಇವುಗಳನ್ನು ಸಂರಕ್ಷಿಸಲು ಕೊಪ್ಪಳ ಜಿಲ್ಲಾಡಳಿತ ಮುಂದಾಗಬೇಕಿದೆ.
ಕೆರೆಹಳ್ಳಿ ಸೀಮೆಯಲ್ಲಿರುವ ಐತಿಹಾಸಿಕ ತಿರುಗಲ್ ತಿಮ್ಮಪ್ಪ ಬೆಟ್ಟದ ದಕ್ಷಿಣ ಭಾಗದಲ್ಲಿ ಆ(ಹಾ)ದಿ(ಬಿದ್ದ) ಹನುಮಪ್ಪ ದೇವರ ಮಂದಿರ ಇದೆ. ಐತಿಹಾಸಿಕ ತಿರುಗಲ್ ತಿಮ್ಮಪ್ಪ ಬೆಟ್ಟದಲ್ಲಿ ಜನವಸತಿ ಇತ್ತು ಎನ್ನುವುದಕ್ಕೆ ಅನೇಕ ಕುರುಹುಗಳು ಇವೆ. ಆದಿ ಹನುಮಪ್ಪ, ಹಾದಿ ಹನುಮಪ್ಪ ಮತ್ತು ಬಿದ್ದ ಹನುಮಪ್ಪ ಎಂದು ಕರೆಯಲ್ಪಡುವ ಇಲ್ಲಿನ ಪ್ರಾಣದೇವರು ಭಕ್ತರ ಕೈವಲ್ಯ ದೀವಿಗೆಯಾಗಿದ್ದಾನೆ. ಈ ಮಂದಿರವು ಶಿಥಿಲಾವಸ್ಥೆ ತಲುಪಿದ್ದು ಭಕ್ತರು ಇತ್ತೀಚೆಗೆ ದುರಸ್ತಿಗೊಳಿಸಿ ಪೂಜಿಸುತ್ತಿದ್ದಾರೆ.
ಗಂಡುಗಲಿ ಕುಮಾರರಾಮನ ಅವಧಿ:
ಕ್ರಿ.ಶ.೧೨ನೇ ಶತಮಾನದ ಹಿನ್ನೆಲೆ ಹೊಂದಿರುವ ಆ(ಹಾ)ದಿ(ಬಿದ್ದ) ಹನುಮಪ್ಪ ಮಂದಿರದಲ್ಲಿ ಬಿಲ್ಲು, ಬಾಣ ಹಿಡಿದುಕೊಂಡ ರಾಮನ ವಿಶೇಷ ಮೂರ್ತಿ ಇದೆ. ಈ ಮೂರ್ತಿಯನ್ನು ಗಂಡುಗಲಿ ಕುಮಾರರಾಮನದ್ದು ಇರಬಹುದು ಎಂದು ಭಕ್ತರು ನಂಬಿದ್ದಾರೆ. ಇದೇ ಮಂದಿರದೊಳಗೆ ಕಲ್ಲಿನಲ್ಲಿ ಶ್ರೀ ಹನುಮಪ್ಪ ದೇವರ ವಿಗ್ರಹವನ್ನು ಕೆತ್ತಲಾಗಿದ್ದು, ಹಲವು ಶತಮಾನಗಳಿಂದ ಗುಡ್ಡದಹಳ್ಳಿ, ಕೆರೆಹಳ್ಳಿ, ಶಹಪುರ ಮತ್ತು ಅಗಳಕೇರಿ ಭಾಗದ ಕೃಷಿಕರು ಈ ಆದಿ ಹನುಮಪ್ಪನಿಗೆ ಪೂಜಿಸಿ ಆರಾಧಿಸುತ್ತಿದ್ದಾರೆ. ಪ್ರತಿ ವರ್ಷ ಮುಂಗಾರು ಬಿತ್ತನೆಗೆ ಮುನ್ನ ಆದಿ ಹನುಮಪ್ಪನಿಗೆ ಪೂಜಿಸಿ, ಕೃಷಿ ಚಟುವಟಿಕೆಗಳಲ್ಲಿ ರೈತರು ತೊಡಗಿಸಿಕೊಳ್ಳುವುದು ವಾಡಿಕೆಯಾಗಿದೆ. ಕೆರೆಹಳ್ಳಿ ಸೀಮೆಯುದ್ದಕ್ಕೂ ಇಂತಹ ಅನೇಕ ಐತಿಹಾಸಿಕ ಮಂದಿರಗಳು, ಸ್ಮಾರಕಗಳು ಇದ್ದು ಕೇಂದ್ರ ಪುರಾತತ್ವ ಹಾಗೂ ಪ್ರಾಚ್ಯವಸ್ತು ಇಲಾಖೆ ಇವುಗಳನ್ನು ಯತಾವತ್ತಾಗಿ ಕಾಪಾಡಬೇಕಾಗಿದೆ. ಕರ್ನಾಟಕ ಸರ್ಕಾರ, ಕೊಪ್ಪಳ ಜಿಲ್ಲಾಡಳಿತ ಮುಂದಿನ ಪೀಳಿಗೆ ಹಿತದೃಷ್ಟಿಯಿಂದ ಇವುಗಳನ್ನು ದುರಸ್ತಿಗೊಳಿಸಿ ಮೂಲ ಪರಂಪರೆಯAತೆ ಪೂಜಿಸಿ, ಆರಾಧಿಸಲು ಭಕ್ತರಿಗೆ ಅನುವು ಮಾಡಿಕೊಡಬೇಕಾಗಿದೆ.
ಆ(ಹಾ)ದಿ (ಬಿದ್ದ) ಹನುಮಪ್ಪ:
ಕೆರೆಹಳ್ಳಿ ಗ್ರಾಮ ಸೀಮೆಯ ಅಧಿದೇವತೆ ಶ್ರೀ ಲಕ್ಕಮ್ಮ(ಲಕ್ಷಿ್ಮಿದೇವಿ)ನ ಪವಾಡ ಜಿಲ್ಲೆಯ ಜನತೆಗೆ ಗೊತ್ತಿದೆ. ರಾಷ್ಟ್ರೀಯ ಯ ಹೆದ್ದಾರಿ-೫೦ ನಿರ್ಮಾಣದ ಅವಧಿಯಲ್ಲಿ ಲಕ್ಷ್ಮಿದೇವಿ ತಾಣವನ್ನು ಜೆಸಿಬಿ ಯಂತ್ರದಿಂದ ತೆರವುಗೊಳಿಸುವಾಗ ನಡೆದ ಕೆಲ ಪವಾಡಗಳನ್ನು ಪ್ರತ್ಯಕ್ಷ ಕಂಡು ಇಂಜಿನಿಯರುಗಳೇ ಹೌಹಾರಿದ್ದಾರೆ. ಆದಿ ಹನುಮಪ್ಪನೂ ಕೂಡ ಗುಡ್ಡದ ದಕ್ಷಿಣ ಭಾಗದಲ್ಲಿ ಪವಾಡಗಳನ್ನು ನಡೆಸುತ್ತಿರುವುದು ಜನಜನಿತ. ಗುಡಿ ವ್ಯಾಪ್ತಿಯ ರೈತರ ಹೊಲದಲ್ಲಿ ಯಾರಾದರೂ ಆಹಾರ ಧಾನ್ಯಗಳನ್ನು ಕದಿಯುವುದಾಗಲಿ, ರೈತರಿಗೆ ಸಂಬAಧಿಸಿದ ಯಾವುದೇ ವಸ್ತುಗಳನ್ನು ಕಳ್ಳತನ ಮಾಡುವ ಹಾಗಿಲ್ಲ. ಕನಿಷ್ಟ ಆ ಭಾಗದ ಸೌದೆಗಳನ್ನೂ ಕೊಂಡೊಯ್ಯುವAತಿಲ್ಲ. ಹಾಗೇನಾದರೂ ಮತಿಗೆಟ್ಟು ಮಾಡಿದರೆ ಅವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಈ ರೀತಿ ಕಳ್ಳತನ ಮಾಡಿದ ಅನೇಕರಿಗೆ ಅನೇಕ ರೀತಿಯ ತೊಂದರೆಗಳಾಗಿವೆ. ಕದ್ದ ವಸ್ತುಗಳನ್ನು ಮರಳಿ ಆ ಭಾಗದಲ್ಲಿ ಒಪ್ಪಿಸಿ, ಕ್ಷಮೆ ಕೋರಿರುವ ಅನೇಕ ಉದಾಹರಣೆಗಳು ಇವೆ. ಜೀವನದ ಸಮಸ್ಯೆಗಳಲ್ಲಿ ಸೋತು ಸುಣ್ಣವಾಗಿರುವವರು, ಬದುಕಿನ ಹೋರಾಟದಲ್ಲಿ ಸೋತು ಬಿದ್ದವರು ಈ ಆದಿ ಹನುಮಪ್ಪನ ದರ್ಶನ ಪಡೆದು, ಸಂಕಲ್ಪ ಮಾಡಿಕೊಂಡರೆ ಅವರ ಸಂಕಲ್ಪ ಸಿದ್ಧಿಸುತ್ತದೆ. ಬಿದ್ದವರು ಮತ್ತೆ ಮೇಲೇಳುತ್ತಾರೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಈ ಕಾರಣದಿಂದ ಇಲ್ಲಿ ಪ್ರತಿ ಶನಿವಾರ, ಅಮಾವಾಸ್ಯೆ ಭಕ್ತರ ದಂಡು ನೆರೆದಿರುತ್ತದೆ.
ತಿರುಗಲ್ ತಿಮ್ಮಪ್ಪನ ಪಲ್ಲಕ್ಕಿ:
ಪ್ರತಿ ವರ್ಷ ಶ್ರಾವಣ ಮಾಸದ ಕೊನೆ ಶನಿವಾರ ತಿರುಗಲ್ ತಿಮ್ಮಪ್ಪನ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ ಜರುಗತ್ತದೆ. ಕೆರೆಹಳ್ಳಿ ಗ್ರಾಮದಿಂದ ಬರುವ ಪಲ್ಲಕ್ಕಿಯಲ್ಲಿ ಪ್ರಾಣದೇವರು ವಿರಾಜಮಾನನಾಗಿರುತ್ತಾನೆ. ತಿರುಗಲ್ ತಿಮ್ಮಪ್ಪ ದೇವಸ್ಥಾನ, ಲಕ್ಷಿö್ಮÃದೇವಿ ಮತ್ತು ತೇರಿನ ಹನುಮಪ್ಪನ ಮಂದಿರಗಳಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿದ ಬಳಿಕ ಪಲ್ಲಕ್ಕಿ ಆದಿ ಹನುಮಪ್ಪನ ಸನ್ನಿಧಿಗೂ ಆಗಮಿಸುತ್ತದೆ. ನಂತರ ಇಲ್ಲಿ ಭಕ್ತರಿಗೆ ಅನ್ನದಾಸೋಹ ನಡೆಯುತ್ತದೆ. ಕಳೆದ ಹಲವಾರು ದಶಕಗಳಿಂದ ಈ ಸಂಪ್ರದಾಯ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಇಂದಿಗೂ ಈ ಭಾಗದ ಭಕ್ತರು ಪರಂಪರೆಯನ್ನು ಮುಂದುವರಿಸಿಕೊAಡು ಬರುತ್ತಿದ್ದಾರೆ. ತಿರುಗಲ್ ತಿಮ್ಮಪ್ಪ, ಲಕ್ಷಿö್ಮÃದೇವಿ, ತೇರಿನ ಹನುಮಪ್ಪ ದೇವಸ್ಥಾನಗಳಲ್ಲಿ ಇಂದಿಗೂ ಪೂಜೆಗಳು ನಡೆಯುತ್ತಿವೆ. ಅದರಂತೆ ಆ(ಹಾ)ದಿ(ಬಿದ್ದ) ಹನುಮಪ್ಪ ದೇವರಿಗೂ ಈ ಭಾಗದ ಭಕ್ತರು ಪ್ರತಿ ಶನಿವಾರ, ಅಮಾವಾಸ್ಯೆಯಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಹರಕೆ ಸಲ್ಲಿಸಿ, ಪೂಜಿಸುತ್ತಿದ್ದಾರೆ.
ವ್ಯಾಸರಾಜ ತೀರ್ಥರ ಪ್ರಭಾವಳಿ:
ವಿಜಯನಗರ ಆಳರಸರ ರಾಜಗುರುಗಳು, ಕನಕ-ಪುರಂದರ ದಾಸಕೂಟ ಸ್ಥಾಪನಾಚಾರ್ಯರಾದ ಶ್ರೀ ವ್ಯಾಸತೀರ್ಥರು ತಮ್ಮ ಅವಧಿಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ಭಾಗದಲ್ಲಿ ಒಟ್ಟು ೭೩೨ ಪ್ರಾಣದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದರು. ಅವರ ಪ್ರಭಾವಳಿ ಇಂದು ಇಡೀ ದೇಶಾದ್ಯಂತ ವ್ಯಾಪಿಸಿದೆ. ಪರಂಪರಾಗತ ಐತಿಹ್ಯದಂತೆ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನೆ ಸಂಭವಿಸಿದ್ದು ಶಾಲಿವಾಹನ ಶಕೆ ಕ್ರಿ.ಶ.೧೨೫೮, ಧಾತೃನಾಮ ಸಂವತ್ಸರ, ವೈಶಾಖ ಶುದ್ಧ ಸಪ್ತಮಿ, ೧೩೩೬ ರ ಏಪ್ರಿಲ್ ೧೭ರ ಸ್ಮರಣೆಗಾಗಿ ಎಲ್ಲೆಡೆ ಶ್ರೀ ವ್ಯಾಸರಾಜರನ್ನು ಇದೀಗ ಸ್ಮರಿಸಲಾಗುತ್ತಿದೆ. ಸಮಾಜದ ಎಲ್ಲ ಸ್ತರದ ಜನಸಮುದಾಯದವರು ಶ್ರೀ ಹನುಮಪ್ಪನನ್ನು ಪೂಜಿಸಿ, ಆರಾಧಿಸಲು ಅನುವು ಮಾಡಿಕೊಟ್ಟವರೇ ವ್ಯಾಸರಾಯರು ಎನ್ನುವ ಐತಿಹ್ಯವಿದೆ. ಆ ಸಮಯಲ್ಲಿಯೇ ಪ್ರತಿಯೊಂದು ಹಳ್ಳಿಗಳಲ್ಲಿ ಧಾರ್ಮಿಕ ಸಂಘಟನೆ, ಒಗ್ಗಟ್ಟು ಮತ್ತು ಐಕ್ಯತೆ ಮೂಡಿಸಿದ್ದರು. ಜನರಲ್ಲಿ ಭಕ್ತಿ ಭಾವನೆಗಳನ್ನು ಬಿತ್ತಿದ್ದರು. ಅದರ ಸೆಳೆತವೇ ಕೆರೆಹಳ್ಳಿ ಸೀಮೆಯುದ್ದಕ್ಕೂ ಅನೇಕ ಹನುಮಂತ ದೇವರ ಮೂರ್ತಿಗಳೂ ಇವೆ. ಅವುಗಳಲ್ಲಿ ಈ ಬಿದ್ದ ಹನುಮಪ್ಪ ದೇವರ ಮಂದಿರವೂ ಒಂದಾಗಿದೆ.
ರಿಯಾಕ್ಷನ್ಸ್:
೧) ಗಂಡುಗಲಿ ಕುಮಾರರಾಮನ ಅವಧಿಯಲ್ಲಿ ನಿರ್ಮಾಣಗೊಂಡಿರುವ ಅನೇಕ ಮಂಟಪಗಳು, ಮಂದಿರಗಳು, ಕೋಟೆ, ಕೊತ್ತಲಗಳು ಇಂದು ಪಾಳು ಬಿದ್ದಿವೆ. ನಿಧಿಚೋರರು ಅಮೂಲ್ಯ ಸ್ಮಾರಕಗಳನ್ನು ಹಾಳುಗೆಡಹಿದ್ದಾರೆ. ಕರ್ನಾಟಕ ಸರ್ಕಾರ, ಪ್ರವಾಸೋದ್ಯಮ ಇಲಾಖೆ, ರಾಜ್ಯ ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ ಇವುಗಳ ರಕ್ಷಣೆಗೆ ಮುಂದಾಗಬೇಕು. ಕೆರೆಹಳ್ಳಿ ಸೀಮೆಯಲ್ಲಿರುವ ಎಲ್ಲ ಐತಿಹಾಸಿಕ ಸ್ಥಳಗಳನ್ನು ಉಳಿಸಿಕೊಳ್ಳಬೇಕು. ಬಿದ್ದ ಹನುಮಪ್ಪ ದೇವರ ಮಂದಿರಕ್ಕೆ ಭಕ್ತರ ಹಿತದೃಷ್ಟಿಯಿಂದ ಕಾಯಕಲ್ಪ ನೀಡಬೇಕು.
– ಹುಲ್ಲೇಶ್ ಸಿಂದೋಗಿ
ಅಧ್ಯಕ್ಷರು,
ಎಸ್ಡಿಎಂಸಿ, ಶಹಪುರ.
೨) ಆದಿ ಹನುಮಪ್ಪನಿಗೆ ಬಿದ್ದ ಹನುಮಪ್ಪ ಎಂತಲೂ ಕರೆಯುತ್ತಾರೆ. ಇಲ್ಲಿಗೆ ಬರಲು ಭಕ್ತರು ಹಾತೊರೆಯುತ್ತಿದ್ದಾರೆ. ರಾಷ್ಟಿçÃಯ ಹೆದ್ದಾರಿ-೫೦ಕ್ಕೆ ಹತ್ತಿರದಲ್ಲಿಯೇ ಇರುವ ಈ ದೇವಸ್ಥಾನಕ್ಕೆ ಬರಲು ಮಾರ್ಗಸೂಚಿಗಳನ್ನು ಅಳವಡಿಸಬೇಕು. ರಸ್ತೆ, ಬೀದಿ ದೀಪ ಮತ್ತು ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ದೇವಸ್ಥಾನದ ಮುಂಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಗೊಳಿಸಿ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
– ಹುಲ್ಲೇಶ್ ಕುರಿ
ಭಕ್ತರು, ಶಹಪುರ.
೩) ಇದೊಂದು ಐತಿಹಾಸಿಕ ದೇವಸ್ಥಾನ. ಕೆರೆಹಳ್ಳಿ ಸೀಮೆಯಲ್ಲಿದ್ದರೂ ಶಹಪುರ ಗ್ರಾಮಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಹೊಲಗಳನ್ನು ಹೊಂದಿದ್ದಾರೆ. ಹೀಗಾಗಿ ಬಿದ್ದ ಹನುಮಪ್ಪ ನಮಗೆಲ್ಲ ಆರಾಧ್ಯದೇವರು. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಇಲ್ಲಿ ಹೆಚ್ಚುತ್ತಿದೆ. ಇಲ್ಲಿಗೆ ಬರುವ ಭಕ್ತರಿಗೆ, ಪ್ರವಾಸಿಗರಿಗೆ ಸರಿಯಾದ ಮಾಹಿತಿ ಇಲ್ಲ. ಅಂಜನಾದ್ರಿಗೆ ತೆರಳುವ ಮಾರ್ಗ ಹತ್ತಿರದಲ್ಲಿಯೇ ಇದ್ದು, ಇಲ್ಲಿ ಆರ್ಚ್ ನಿರ್ಮಾಣ ಮಾಡಬೇಕು. ಧ್ವಜಸ್ತಂಭ ಸ್ಥಾಪಿಸಿ ಮೂಲ ಧಾರ್ಮಿಕ ಆಚರಣೆಗಳಿಗೆ ಒತ್ತು ನೀಡಬೇಕು. ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಭಕ್ತರ ಹಿತದೃಷ್ಟಿಯಿಂದ ಇಲ್ಲಿ ಧಾರ್ಮಿಕ ಆಚರಣೆಗಳನ್ನು ಪ್ರತಿನಿತ್ಯ ನಡೆಯುವ ವ್ಯವಸ್ಥೆ ಮಾಡಬೇಕು.
– ರಾಮಾಲೆಪ್ಪ ಕುರಿ
ಭಕ್ತರು
ಶಹಪುರ.
——-
M V Joshi,
Reporter
Kolaravani, Ballari.
