
Kala Kusuma music program held in Gangavathi

ಗಂಗಾವತಿಯಲ್ಲಿ ಕಲಾ ಕುಸುಮ ಸಂಗೀತ ಕಾರ್ಯಕ್ರಮ ಜರಗಿತು

ಗಂಗಾವತಿ:ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಕೊಪ್ಪಳ ಬೆಂಗಳೂರು ಹಾಗೂ ಶ್ರೀ ಗುರು ಕುಮಾರೇಶ್ವರ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆ ಗಂಗಾವತಿ ಇವರ ಸಹಯೋಗದಲ್ಲಿ ಇಂದು ಗವಾಯಿ ಶ್ರೀ ಕುಮಾರ ಪಂಚಾಕ್ಷರ ಶ್ರೀ ಬೊಮ್ಮಲಾಪುರ ರವರ ಸ್ವರ ಶ್ರದ್ಧಾಂಜಲಿ ಪ್ರಯುಕ್ತ ಕಲಾ ಕುಸುಮ ಸಂಗೀತ ಕಾರ್ಯಕ್ರಮ ಇಂದು ಸ್ಥಳೀಯ ಪಿಎಂಶ್ರೀ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಗಂಗಾವತಿಯಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ರಾಜೇಶ್ವರಿ ಕುಮಾರ್ ಪಂಚಾಕ್ಷರ ಇವರು ವಹಿಸಿ ಮಾತನಾಡುತ್ತಾ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಮತ್ತೂ ಗಂಗಾವತಿ ಎಲ್ಲ ಸಹೋದರ ಸಹೋದರಿಯವರಿಂದ ಮತ್ತೂ ನಾಗರಿಕರಿಂದ ಈ ಕಾರ್ಯಕ್ರಮ ನಡೆದು ಬಂದಿದೆ. ಇಂದು ನನ್ನ ಪತಿ ಶ್ರೀಕುಮಾರ್ ಪಂಚಾಕ್ಷರವರ ಆತ್ಮಕ್ಕೆ ಶಾಂತಿ ದೊರಕಿದೆ. ಪ್ರತಿ ವರ್ಷ ತಮ್ಮೆಲ್ಲರ ಸೇವೆ ಇದಾಗಿರಲಿ ಎಂದು ಹೇಳಿದರು.ಬಿಸಿಲು ಗುದುರೆ ದಿನಪತ್ರಿಕೆಯ ಸಂಪಾದಕರು, ಹಿರಿಯ ಸಂಗೀತ ಕಲಾವಿದರು ಮಾತಾನಾಡುತ್ತಾ ಗಂಗಾವತಿಯು ಸಂಸ್ಕೃತಿಯ ನಾಡು, ಸಂಗೀತದ ಬೀಡಾಗಿದೆ. ಅದರಂತೆ ಇಂದು ಶ್ರೀ ಕುಮಾರ್ ಪಂಚಾಕ್ಷರವರ ಸ್ವರ ಶ್ರದ್ಧಾಂಜಲಿ ಉತ್ತಮವಾಗಿ ಸಂಗೀತ ಕಾರ್ಯಕ್ರಮ ಜರಗಿತು ಎಂದು ಶುಭ ಹಾರೈಸಿದರು. ಉದ್ಘಾಟಕರಾಗಿ ಆಗಮಿಸಿದ ಕಲ್ಯಾಣ ನಗರದ ಕ್ಷೇಮ ಅಭಿವೃದ್ದಿ ಸಂಘದ ಅಧ್ಯಕ್ಷರು ಶ್ರೀ ಬಸಪ್ಪ ನಾಗೋಲಿ ಅವರು ಕುಮಾರ್ ಪಂಚಾಕ್ಷರವರ ಬಗ್ಗೆ ಮಾತನಾಡುತ್ತಾ ಕುಮಾರ್ ಪಂಚಾಕ್ಷರವರ ಸಂಗೀತ ಜ್ಞಾನದಿಂದ ಎತ್ತರಕ್ಕೆ ಬೆಳೆದವರಾಗಿದ್ದರು. ಅವರ ಸಂಘಟನೆ ಚೆನ್ನಾಗಿತ್ತು. ಒಗ್ಗಟ್ಟಿನಿಂದ ಎಲ್ಲವೂ ಸಾಧ್ಯವಾಯಿತು. ಮುಂದಿನ ದಿನಮಾನಗಳಲ್ಲಿ ಇನ್ನೂ ಉತ್ತಮ ಕಾರ್ಯಗಳನ್ನು ಮಾಡಿಕೊಂಡು ಬರೋಣ ಎಂದು ಶುಭ ಹಾರೈಸಿದರು. ಹಿರಿಯ ಅತಿಥಿಗಳು ಶ್ರೀ ಯಂಕೋಬ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ನಾಗರಾಜ್ ಶ್ಯಾವಿ ಕೊಪ್ಪಳ. ರಾಘವೇಂದ್ರ ಗಂಗಾವತಿ ಹಾಗೂ ಶ್ರೀಮತಿ ವಿಜಯಲಕ್ಷ್ಮಿ ನಾಗರಾಜ್. ಪ್ರಕಾಶ್ ಪಾಟೀಲ ಶಿಕ್ಷಕರುಗಂಗಾವತಿ . ಶ್ರೀ ಶಿವಕುಮಾರ್ ಗೆಜ್ಜೆ ಶಿಕ್ಷಕರು ಗಂಗಾವತಿ. ವೈಷ್ಣವಿ ಹಾಗೂ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲಾ ತಂಡದಿಂದ ಪ್ರಾರ್ಥನೆ ಜರುಗಿತು ಶ್ರೀ ಬಿನ್ನಾಳರವರು ಪ್ರಾಸ್ತಾವಿಕ ಮಾತನಾಡಿದರು ಕಲ್ಯಾಣ ನಗರದ ನಾಗರಿಕರು ಅನೇಕ ಕಲಾವಿದರು ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
