ಉರಿ ಬಿಸಿಲು ನಿಂದ ತತ್ತರಿಸಿದ ಜನತೆಗೆ ತಂಪಾದ ಮಜ್ಜಿಗೆ ವಿತರಣೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Distribution of cool buttermilk to people suffering from the scorching sun

ಉರಿ ಬಿಸಿಲು ನಿಂದ ತತ್ತರಿಸಿದ ಜನತೆಗೆ ತಂಪಾದ ಮಜ್ಜಿಗೆ ವಿತರಣೆ

ಜಾಹೀರಾತು

ಗಂಗಾವತಿ. ರೋಟರಿ ವುಮೆನ್ಸ್ ಕ್ಲಬ್ ಅಫ್ ರೈಸ್ ಬೌ ಲ್ ಗಂಗಾವತಿ ssp ಲೈಫ್ ಮಿಷನ್ ಇವರ ಆಶ್ರಯದಲ್ಲಿ ಮಜ್ಜಿಗೆ ವಿತರಣೆ ಕಾರ್ಯಕ್ರಮ ನಡೆಯಿತು ರೋಟರಿ ವುಮೆನ್ಸ್ ಕ್ಲಬ್ ಆಫ್ ರೈಸ್ ಬಾಲ್ ಅಧ್ಯಕ್ಷರಾಗಿರುವ ಗೀತಾ ಚೌದರಿ ಕಾರ್ಯಕ್ರಮ ಕುರಿತು ಮಾತನಾಡಿ ಸೊ ಸೇವ್ ಪ್ರಾಜೆಕ್ಟ್ ಅವರ ಸಂಪೂರ್ಣ ಸಹಕಾರದ ಮೇರೆಗೆ ಉರಿ ಬಿಸಿಲಿನಿಂದ ತತ್ತರಿಸಿದ ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಉಚಿತವಾಗಿ ಮಜ್ಜಿಗೆ ವಿತರಿಸುವುದರ ಮೂಲಕ ಸಾಮಾಜಿಕ ಸೇವಾ ಚಟುವಟಿಕೆಯನ್ನು ನಡೆಸಲಾಗಿದೆ. ಬೆಳಗ್ಗೆ ಒಂಬತ್ತು ಗಂಟೆಯಿಂದ 12:30 ಗಂಟೆಯವರೆಗೆ ಒಂದು ಸಾವಿರಕ್ಕೂ ಅಧಿಕ ಜನರಿಗೆ ಮಜ್ಜಿಗೆ ವಿತರಿಸಲಾಗಿದ್ದು ಈ ಕಾರ್ಯಕ್ರಮದಿಂದ ತಮಗೆ ತೃಪ್ತಿ ತಂದಿದೆ ಎಂದು ತಿಳಿಸಿದರು. ಕಾರ್ಯದರ್ಶಿ ಶ್ರೀದೇವಿ ಬಂಡಾರಿ,,, ಎಸ್ ಎಸ್ ಪಿ ಲೈಫ್ ಮಿಷನ್ ಮ್ಯಾನೇಜಿಂಗ್ ಡೈರೆಕ್ಟರ್ ಸೋಫಿಯಾ ರಾಣಿ ಜಂಗಮರ ಮಾತನಾಡಿ ಬಿಸಿಲಿನ ಪ್ರಖರತೆಗೆ ಜನ ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ತಮ್ಮ ಎಸ್ ಎಸ್ ಪಿ ಸಂಸ್ಥೆಯಿಂದ ಉಚಿತ ಮಜ್ಜಿಗೆಯನ್ನು ವಿತರಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಪಶು ಪಕ್ಷಿಗಳಿಗೆ ಶುದ್ಧವಾದ ನೀರಿನ ಅರವಟ್ಟಿಗೆಗಳನ್ನು ಸ್ಥಾಪಿಸುವ ಉದ್ದೇಶವಿದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಕಲ್ಗುಡಿ ಪ್ರಮುಖ ರಾಗಿರುವ ಶಾಹಿನ್ ಕೌಸರ್ ಲಲಿತ ನಾಗರಾಜ್ ರೋಟರಿ ಕ್ಲಬ್ ಅಧ್ಯಕ್ಷರಾಗಿರುವ ವಿಜಯ್ ಕುಮಾರ್ ಗದ್ದಿ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಕಲಾವತಿ ಹಾಗೂ ರೋಟರಿ ಕ್ಲಬ್ ನ ಎಲ್ಲಾ ಸದಸ್ಯರುಗಳು ಮಜ್ಜಿಗೆ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

Total Views: 1
Share This Article