ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನರಿಗೆ ಅನುಕೂಲ

Mallikarjun
1 Min Read
ಜಾಹೀರಾತು
Sri Kshetra Dharmasthala Rural Development Project benefits people

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನರಿಗೆ ಅನುಕೂಲ

ಜಾಹೀರಾತು

ಗಂಗಾವತಿ: ತಾಲೂಕಿನ ಬೂದುಗುಂಪ ವಲಯದ ಇಂದರಿಗಿ ಗ್ರಾಮದ ಸಿ.ಎಸ್.ಸಿ ಕೇಂದ್ರದಲ್ಲಿ ಡಿಜೆ ಪ್ಲೇ ಹೊಸ ಯೋಜನೆಯನ್ನು ಒಕ್ಕೂಟದ ಅಧ್ಯಕ್ಷರಾದ ಅಮರೇಶ ಕುಂಬಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಈಗಾಗಲೇ ಜನಸಾಮಾನ್ಯರಿಗಾಗಿ ಅನೇಕ ಸೌಲಭ್ಯಗಳನ್ನು ಒದಗಿಸುತ್ತಾ ಬರುತ್ತಿದೆ. ಅದರಲ್ಲೂ ಹಳ್ಳಿ ಭಾಗದ ಜನರಿಗೆ ಬ್ಯಾಂಕಿಗ್ ಸೇವೆಗಳ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಸೇವೆಗಳನ್ನು ಒದಗಿಸುತ್ತಿದೆ.
CSC ಕೇಂದ್ರಗಳನ್ನು ಹಳ್ಳಿ ಹಳ್ಳಿಗೂ ವಿಸ್ತರಿಸಿ ಸರ್ಕಾರದ ಸೌಲಭ್ಯ ಗಳನ್ನೂ ತ್ವರಿತವಾಗಿ ಮತ್ತು ಫಲಾನುಭವಿಗಳಿಗೆ ಅತ್ಯಂತ ಹತ್ತಿರದಲ್ಲಿದ್ದುಕೊಂಡು ಸೇವೆಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ.ಈವರೆಗೆ ಪಾನ್ ಕಾರ್ಡ್, ಈ ಶ್ರಮ ಕಾರ್ಡ್, ಬೆಳೆವಿಮೆ, ಪ್ರಧಾನ ಮಂತ್ರಿ ಕಿಸಾನ್ ಯೋಜನೆ, ಎನ್.ಪಿ.ಎಸ್, ಎಲ್ಐಸಿ ಭೀಮಾ ಜ್ಯೋತಿ ಯಂತಹ ಪ್ರಮುಖ ವಿಷಯದ ಜೊತೆಗೆ ಹಳ್ಳಿ ಜನರಲ್ಲಿ ವೈಯಕ್ತಿಕ ಖಾತೆ ತೆರೆಸಿ ಹಣಕಾಸು ಶಿಸ್ತು ಹಾಗೂ ಉಳಿತಾಯದ ಮಹತ್ವವನ್ನು ತಿಳಿಸಲಾಗುತ್ತಿದೆ.
ಹಳ್ಳಿ ಜನರು ತಮ್ಮ ಖಾತೆಯಲ್ಲಿನ ಹಣವನ್ನು ದೈನಂದಿನ ಬಳಕೆಗೆ ಡ್ರಾ ಮಾಡಲು ಪಟ್ಟಣಕ್ಕೆ ಹೋಗುವ ಮತ್ತು ಅದಕ್ಕಾಗಿ ಪ್ರಯಾಣಿಸಿ ಅದಕ್ಕೆ ಖರ್ಚು ಮಾಡುವ ಅನಿವಾರ್ಯತೆ ಕಂಡುಕೊಂಡು ಹಳ್ಳಿಗಳಲ್ಲಿಯೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಎಸ್.ಸಿ. ಡಿಜೆ ಪ್ಲೇ ಎಂಬ ವಿಶೇಷ ಕಾರ್ಯಕ್ರಮ ಜಾರಿಗೊಳಿಸಿದೆ. ಇದರಲ್ಲಿ ಹಣ ಸಂಗ್ರಹಣೆ ದಿನದಂದು ಜನರು ತಮ್ಮ ಬಳಕೆ ಮಾಡಿಕೊಂಡು ಗರಿಷ್ಠ 10000/- ವರೆಗೆ ನಗದು ಪಡೆದುಕೊಳ್ಳುವ ವಿಶೇಷ
ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾಲೂಕ ನೋಡಲ್ ಅಧಿಕಾರಿ ಮಲ್ಲಿಕಾರ್ಜುನ, ವಲಯ ಮೇಲ್ವಾಚಾರಕರು, ಆಶಾ ಕಾರ್ಯಕರ್ತರಾದ ಭಾಗ್ಯಶ್ರೀ, ಮಂಜುಳಾ ಎಮ್ಮಿ, ಸೇವಾ ಪ್ರತಿನಿಧಿಗಳು, ಸಂಘದ ಸದಸ್ಯರು, ಗ್ರಾಮದ ಜನರು ಉಪಸ್ಥಿತರಿದ್ದರು.

Total Views: 0
Share This Article