ಚಾ.ನಗರ ವಕೀಲ ಉಮ್ಮತ್ತೂರು ಇಂದುಶೇಖರ್‌ಗೆ ನ್ಯಾಷನಲ್ ಜಸ್ಟಿಸ್ ಅವಾರ್ಡ್ .

Mallikarjun
1 Min Read
ಜಾಹೀರಾತು
National Justice Award for Cha. Nagar lawyer Ummattur Indusekhar.




ಚಾ.ನಗರ ವಕೀಲ ಉಮ್ಮತ್ತೂರು ಇಂದುಶೇಖರ್‌ಗೆ ನ್ಯಾಷನಲ್ ಜಸ್ಟಿಸ್ ಅವಾರ್ಡ್ .

ಜಾಹೀರಾತು


ವರದಿ: ಬಂಗಾರಪ್ಪ .ಸಿ.
ಚಾಮರಾಜನಗರ/ಹನೂರು : ವಕೀಲ ವೃತ್ತಿಯಲ್ಲಿನ ಸೇವೆ ಹಾಗು ಸಮಾಜ ಸೇವೆಯನ್ನು ತಮ್ಮನ್ನು ತೊಡಗಿಸಿಕೊಂಡಿರುವ ಚಾ.ನಗರ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಉಮ್ಮತ್ತೂರು ಇಂದು ಶೇಖರ್ ಅವರಿಗೆ ರಾಯಚೂರು ಬೆಳಕು ಟ್ರಸ್ಟ್ ಪ್ರತಿಷ್ಠಿತ ಇಂಟರ್‌ನ್ಯಾಷನಲ್ ಜಸ್ಟಿಸ್ ಅವಾರ್ಡ್ ಘೋಷಣೆ ಮಾಡಿದೆ ಮೇ. 9 ರಂದು ಪ್ರಧಾನ ಮಾಡಲಿದೆ.
ಬೆಳಕು ಸಂಸ್ಥೆಯ ವತಿಯಿಂದ ಮೇ 9 ರಂದು ಗಣಿನಾಡು ಬಳ್ಳಾರಿಯ ಡಾ. ಜೋಳದರಾಶಿ ದೊಡ್ಡನಗೌಡ ರಂಗಮAದಿರದಲ್ಲಿ ಅದ್ದೂರಿಯಾಗಿ ನಡೆಯುವ ಸಮ್ಮೇಳನದಲ್ಲಿ ಉಮ್ಮತ್ತೂರು ಇಂದುಶೇಖರ್ ಅವರಿಗೆ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಜಸ್ಟಿಸ್ ಅವಾರ್ಡ್ ನೀಡಿ ಸನ್ಮಾನಿಸಲಾಗುವುದು ಎಂದು ಬೆಳಕು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಅಣ್ಣಪ್ಪ ಮೇಟಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯಾಯಾಂಗ ಕ್ಷೇತ್ರದಲ್ಲಿ ವಕೀಲರಾಗಿ ದೀರ್ಘಕಾಲ ಸೇವೆ ಸಲ್ಲಿಸಿ, ನ್ಯಾಯಸೇವೆಯ ಮೂಲಕ ಸಮಾಜಕ್ಕೆ ಬಡವರಿಗೆ ನ್ಯಾಯ ಕೊಡಿಸುವಂತಹ ಕೊಡುಗೆ ನೀಡಿರುವುದು ಹಾಗೂ ವಕೀಲರ ಸಂಘದಲ್ಲಿ ಒಂದು ಬಾರಿ ಪ್ರಧಾನ ಕಾರ್ಯದರ್ಶಿಯಾಗಿ , ನಾಲ್ಕು ಬಾರಿ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಮೇ 9 ರಂದು ನಡೆಯುವ ಸಮ್ಮೇಳನದಲ್ಲಿ ಗÀಣ್ಯರ ಸಮ್ಮುಖದಲ್ಲಿ ಅವರಿಗೆ ಗೌರವಪೂರ್ವಕವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮೇಟಿಗೌಡ ತಿಳಿಸಿದ್ದಾರೆ.
ಪ್ರತಿಷ್ಠಿತ ಇಂಟರ್‌ನ್ಯಾಷನಲ್ ಜಸ್ಟಿಸ್ ಅವಾರ್ಡ್ ಪುರಸ್ಕೃತರವಾದ ಹಿರಿಯ ವಕೀಲರಾದ ಉಮ್ಮತ್ತೂರು ಇಂದುಶೇಖರ್ ಅವರನ್ನು ವಕೀಲ ಸ್ನೇಹಿತರಾದ ಶಿವಲಿಂಗೆಗೌಡರು ಸೇರಿದಂತೆ ಇನ್ನಿತರರು ಅಭಿನಂದಿಸಿದರು.

Total Views: 0
Share This Article