ತುಳಿತಕ್ಕೊಳಗಾದ ಸಮಾಜಗಳ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ನಾಯಕ ಬಾಬು ಜಗಜೀವನ್ ರಾಂ – ಶಾಸಕಬಾಲಚಂದ್ರ ಜಾರಕಿಹೊಳಿ

Mallikarjun
2 Min Read




Babu Jagjivan Ram was a great leader who fought for the just rights of oppressed societies - MLA Balachandra Jarkiholi

ತುಳಿತಕ್ಕೊಳಗಾದ ಸಮಾಜಗಳ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ನಾಯಕ ಬಾಬು ಜಗಜೀವನ್ ರಾಂ – ಶಾಸಕಬಾಲಚಂದ್ರ ಜಾರಕಿಹೊಳಿ

ಮೂಡಲಗಿ:ತುಳಿತಕ್ಕೊಳಗಾದ ಸಮಾಜಗಳ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ನಾಯಕ ಬಾಬು ಜಗಜೀವನ್ ರಾಂ ಎಂದು ಶಾಸಕ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ರವಿವಾರ, ತಾಲ್ಲೂಕಿನ ಅರಭಾವಿ ಪಟ್ಟಣ ಪಂಚಾಯತದಿಂದ ಹಮ್ಮಿಕೊಂಡ ಡಾ. ಬಾಬು ಜಗ ಜೀವನರಾಂ ಅವರ ಜಯಂತಿ
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಗ ಜೀವನರಾಂ ಅವರು ಸುಮಾರು ಮೂರು ದಶಕಗಳ ಕಾಲ ಕೇಂದ್ರದಲ್ಲಿ ಸಚಿವರಾಗಿ, ಉಪ- ಪ್ರಧಾನಿಯಾಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದರೆಂದು ಅವರು ತಿಳಿಸಿದರು.
ಬಾಬು ಜಗ ಜೀವನ ರಾಂ ಅವರು ಸಾಮಾಜಿಕ ಸಮಾನತೆ, ಸಾಮಾಜಿಕ ನ್ಯಾಯದ ಕುರಿತು ಜನ ಜಾಗೃತಿ ಮೂಡಿಸಿದ್ದರು. ಕೇಂದ್ರದ ಕೃಷಿ ಸಚಿವರಾಗಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ನಮ ದೇಶವು ಸ್ವಾವಲಂಬಿ ದೇಶವಾಗಲು ಅಪಾರವಾಗಿ ಶ್ರಮಿಸಿದ್ದರು. ಇದಕ್ಕಾಗಿಯೇ ಇವರನ್ನು ಹಸಿರು ಕ್ರಾಂತಿಯ ಹರಿಕಾರರು ಎಂದು ಕರೆಯಲಾಗುತ್ತಿದೆ ಎಂದು ಅವರು ಹೇಳಿದರು.
ಭಾರತಕ್ಕೆ ಸಂವಿಧಾನದ ಕೊಡುಗೆ ಕೊಟ್ಟ ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಶೋಷಿತರ ಧ್ವನಿಯಾಗಿದ್ದ ಬಾಬು ಜಗಜೀವನ ರಾಂ ಅವರು ಭಾರತವು ಪ್ರಜ್ವಲಿಸಲು ಅನನ್ಯ ಕೊಡುಗೆ ನೀಡಿದ್ದರು ಎಂದು ಅವರುಗಳ ಹೋರಾಟಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಮೆಲುಕು ಹಾಕಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಡಾ. ಬಾಬು ಜಗಜೀವನ ರಾಂ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು.
ಬೆಳಗಾವಿ ಜಿಲ್ಲಾ (ಗ್ರಾ) ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ, ಬೆಮುಲ್ ನಿರ್ದೇಶಕ ಬಸವರಾಜ ಮಾಳೆದವರ, ಪ್ರಮುಖರಾದ ಶಂಕರ ಬಿಲಕುಂದಿ, ನಿಂಗಪ್ಪ ಇಳಿಗೇರ, ಮುತ್ತೆಪ್ಪ ಜಲ್ಲಿ, ಭೀಮಶಿ ಮಾಳೆದವರ, ರಮೇಶ ಮಾದರ, ರಮೇಶ ಸಂಪಗಾಂವಿ, ಅಡಿವೆಪ್ಪ ಬಿಲಕುಂದಿ, ಸುರೇಶ ದೊಡ್ಡಲಿಂಗನ್ನವರ, ಹಣಮಂತ ಕಂದಾರಿ, ಮೋಹನ ಬಂಡಿವಡ್ಡರ, ಇಕಬಾಲ ಸರ್ಕಾವಸ, ಸಿದ್ದು ಕಂಕಣವಾಡಿ, ಕೃಷ್ಣಾ ಬಂಡಿವಡ್ಡರ, ಪ.ಪಂ. ಮುಖ್ಯಾಧಿಕಾರಿ ವಿನಾಯಕ ಬಬಲೇಶ್ವರ, ಶಿವು ದೊಡಗೋಣಿ ಮುಂತಾದವರು ಉಪಸ್ಥಿತರಿದ್ದರು.

Total Views: 0
Share This Article