ಅಕ್ರಮ ಮರಳು ಸಂಗ್ರಹ: ಜಿಲ್ಲಾಧಿಕಾರಿಗಳಿಗೆ ಜಿಲ್ಲಾಧ್ಯಕ್ಷ ದೂರು.

Mallikarjun
1 Min Read

Illegal sand collection: District President complains to the District Collector.




ಅಕ್ರಮ ಮರಳು ಸಂಗ್ರಹ: ಜಿಲ್ಲಾಧಿಕಾರಿಗಳಿಗೆ ಜಿಲ್ಲಾಧ್ಯಕ್ಷ ದೂರು.

ಕೊಪ್ಪಳ: ಗಂಗಾವತಿ ನಗರದಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಹಾಗೂ ಸಾಗಾಟ ನಡೆಯುತ್ತಿರುವ ಕುರಿತು “ಭಾರತೀಯ ಪ್ರಜಾ ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ನಬಿರಸೂಲ್ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಜಿಲ್ಲಾಧ್ಯಕ್ಷ ನಬಿರಸೂಲ್ ಅವರ ಮಾಹಿತಿಯ ಪ್ರಕಾರ, ನಗರದ ಐಸ್ ಲ್ಯಾಂಡ್ ಹೋಟೆಲ್ ಹಿಂಬದಿಯಲ್ಲಿರುವ ಸ್ಟಾಕ್ ಪಾಯಿಂಟ್ ನಲ್ಲಿ ರಾತ್ರಿ ವೇಳೆ ಅನಧಿಕೃತವಾಗಿ ಮರಳು ಸಂಗ್ರಹ (ಸ್ಟಾಕ್) ಮಾಡಲಾಗುತ್ತಿದ್ದು, ನಂತರ ಟ್ಯಾಕ್ಟರ್‌ಗಳ ಮೂಲಕ ಸಾಗಾಟ ನಡೆಸಲಾಗುತ್ತಿದೆ ಎಂದು ಜಿಲ್ಲಾಧ್ಯಕ್ಷ ನಬಿರಸೂಲ್ ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಟಾಕ್ ಪಾಯಿಂಟ್ ಸ್ಥಳದಲ್ಲಿ ಯಾವುದೇ ಸರಕಾರಿ ಅನುಮತಿ ಇಲ್ಲದೆ ಅಕ್ರಮ ಚಟುವಟಿಕೆ ನಡೆಯುತ್ತಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಕ್ರಮ ಮರಳು ದಂಧೆಯಿಂದ ಸರ್ಕಾರಕ್ಕೆ ಆದಾಯ ನಷ್ಟವಾಗುವುದರ ಜೊತೆಗೆ ಪರಿಸರಕ್ಕೂ ಹಾನಿಯಾಗುತ್ತಿದೆ. ಅಲ್ಲದೆ, ರಾತ್ರಿ ಸಮಯದಲ್ಲಿ ನಡೆಯುತ್ತಿರುವ ಈ ಅಕ್ರಮ ಚಟುವಟಿಕೆಯಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಭಾರತೀಯ ಪ್ರಜಾ ಸೇನೆಯ ಜಿಲ್ಲಾಧ್ಯಕ್ಷ ನಬಿ ರಸೂಲ್ ಆರೋಪಿಸಿದ್ದಾರೆ.

ಈ ಹಿನ್ನೆಲೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಅಕ್ರಮವಾಗಿ ಮರಳು ಸಂಗ್ರಹ ಮಾಡಿ ಮತ್ತು ಸಾಗಾಟದಲ್ಲಿ ತೊಡಗಿದ್ದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಭಾರತೀಯ ಪ್ರಜಾ ಸೇನೆಯ ಜಿಲ್ಲಾಧ್ಯಕ್ಷ ನಬಿ ರಸೂಲ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಅಕ್ರಮ ದಂಧೆ ಕೋರರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಕಾನೂನುಬದ್ಧ ಹೋರಾಟ ಕೈಗೊಳ್ಳುವುದಾಗಿ ಜಿಲ್ಲಾಧ್ಯಕ್ಷ ನಬೀರಸೂಲ್ ಎಚ್ಚರಿಕೆ ನೀಡಿದ್ದಾರೆ.

Total Views: 0
Share This Article