ದಲಿತ ಸೇನೆ ಸಂಘಟನೆಯಿಂದ ಸ್ಪರ್ಧಾತ್ಮಕ ಪರೀಕ್ಷೆ

Mallikarjun
1 Min Read

Competitive exam conducted by Dalit Sena organization




ದಲಿತ ಸೇನೆ ಸಂಘಟನೆಯಿಂದ ಸ್ಪರ್ಧಾತ್ಮಕ ಪರೀಕ್ಷೆ

   ಗಂಗಾವತಿ:ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಡಾ.ಬಿ.ಆರ್.ಅಂಬೇಡ್ಕರ್‌ನವರ, ಡಾ.ಬಾಬು ಜಗಜೀವನ್ ರಾಮ್ ಅವರ ಜಯಂತಿಯ ಅಂಗವಾಗಿ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುವುದು ಎಂದು ದಲಿತ ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಉಡಮಪ್ಪ ಹೇಳಿದರು.

ಅವರುಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿ ದಲಿತ ಸೇನೆ ಸಂಘಟನೆಯ ಕಾರ್ಯಕರ್ತರು ಬುಧವಾರ ಹಮ್ಮಿಕೊಂಡ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.

ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು ಎನ್ನುವ ಉದ್ದೇಶದಿಂದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ, ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ನಗರದ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾರ್ಚ್ 05,2026 ರಂದು ಪರೀಕ್ಷೆಯನ್ನು ನಡೆಸಲಾಗುವುದು. ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಮುಂಚಿತವಾಗಿಯೇ ನೊಂದಾಣಿಯನ್ನು ಮಾಡಿಕೊಳ್ಳಬೇಕು. ನೊಂದಾಣಿ ಮಾಡಿಕೊಳ್ಳಲು ಮಾರ್ಚ್ 01,2026 ಕೊನೆಯ ದಿನವಾಗಿದ್ದು, ಮೊದಲ ನೊಂದಾಣಿ ಮಾಡಿಕೊಂಡಿರುವ 150 ಜನ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಪ್ರವೇಶ ಶುಲ್ಕವಾಗಿ 50 ರೂಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಪರೀಕ್ಷೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಪಿಯುಸಿಯಿಂದ ಸ್ನಾತಕೋತ್ತರ ಪದವಿಯವರೆಗಿನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಬಹುದು. ಇನ್ನೂ ಮೊದಲನೇ ಬಹುಮಾನವಾಗಿ 20,000 ರೂಗಳು, ದ್ವಿತೀಯ ಬಹುಮಾನವಾಗಿ 10,000 ರೂಗಳು, ತೃತೀಯ ಬಹುಮಾನವಾಗಿ 5000 ರೂಗಳನ್ನು ನೀಡಲಾಗುವುದು. ಆದಷ್ಟು ಬೇಗನೇ ವಿದ್ಯಾರ್ಥಿಗಳು ಈ ನಂಬರಗಳಿಗೆ 78997-31214, 97310-96754, 94835-88758 ಸಂಪರ್ಕಿಸಿ, ನೊಂದಾಣಿಯನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಸಂಘಟನೆಯ ಮುಖಂಡರಾದ ಮೌಲಾಲಿ.ಕೆ, ಪರಶುರಾಮ, ನೂಶಪ್ಪ, ಮಾಲಪ್ಪ, ಗಣೇಶ, ದುರುಗಪ್ಪ, ಶಿವಕುಮಾರ, ರಾಘವೇಂದ್ರ ಹಾಗೂ ಇತರರಿದ್ದರು.


ಗಂಗಾವತಿಯ ಪತ್ರಿಕಾ ಭವನದಲ್ಲಿ ದಲಿತ ಸೇನೆ ಸಂಘಟನೆಯ ಕಾರ್ಯಕರ್ತರು ಪತ್ರಿಕಾ ಗೋಷ್ಠಿಯನ್ನು ಬುಧವಾರ ನಡೆಸಿದರು.

Share This Article
Leave a Comment