ಹನೂರು ಕ್ಷೇತ್ರಕ್ಕೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ಸುತ್ತುರು ಶ್ರೀಗಳ ಬೇಟಿ : ಡಾ. ದತ್ತೇಶ್ ಕುಮಾರ್ .

H.Mallikarjun
H.Mallikarjun - Kalyanasiri
2 Min Read
ಜಾಹೀರಾತು





ಹನೂರು ಕ್ಷೇತ್ರಕ್ಕೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ಸುತ್ತುರು ಶ್ರೀಗಳ ಬೇಟಿ : ಡಾ. ದತ್ತೇಶ್ ಕುಮಾರ್ .

ಜಾಹೀರಾತು
Dr. Dattatreya Kumar: The visit of the Sutturu Sri who solved the drinking water problem in Hanur constituency.

ವರದಿ: ಬಂಗಾರಪ್ಪ .ಸಿ.
ಹನೂರು :ವಿಧಾನಸಭಾಕ್ಷೇತ್ರದ,ರಾಮಾಪುರ ,ಮಾರ್ಟಳ್ಳಿ,ಅಜ್ಜಿಪುರ ಭಾಗದ ಮುಖಂಡರಿಂದ ಇಂದು ಸುತ್ತುರು ಶ್ರೀ ಗಳ ಬೇಟಿ ಮಾಡಿ ಕೃತಜ್ಞತೆಯನ್ನು ಸಲ್ಲಿಸಲಾಯಿತು , ನಮ್ಮ ಭಾಗದ ನೀರಿನ ಸಮಸ್ಯೆಗಳನ್ನು ಬಗಹರಿಸಲು ಪ್ರಯತ್ನ ಮಾಡಿದ ಶ್ರೀ ಗಳಿಗೆ ನಾನು ಕ್ಷೇತ್ರದ ಜನತೆಯ ಪರವಾಗಿ ಅಬಾರಿಯಾಗಿದ್ದೇನೆ ಎಂದು ಡಾಕ್ಟರ್ ದತ್ತೇಶ್ ಕುಮಾರ್ ತಿಳಿಸಿದರು.

ನಂತರ ಮಾತನಾಡಿದ ಅವರು ಸುತ್ತುರು ಶ್ರೀ ಮಠದಲ್ಲಿ
ನಮ್ಮ ಭಾಗದ ಭಾಗದ ಹಲವು ಮುಖಂಡರು ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ದೇಶಿಕೇಂದ್ರ ಸ್ವಾಮೀಜಿಗಳನ್ನು ಭಕ್ತಿಪೂರ್ವಕವಾಗಿ ಭೇಟಿ ಮಾಡಿ ಗೌರವ ಸಲ್ಲಿಸಿದರು.
ಪರಮ ಪೂಜ್ಯರ ಆಶೀರ್ವಾದ ಹಾಗೂ ಅವರ ಮಾರ್ಗ ದರ್ಶನದಿಂದ
ಈ ಸಾಲಿನ ಬಜೆಟ್ ನಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ಹನೂರು ವಿಧಾನಸಭಾ ಕ್ಷೇತ್ರಕ್ಕೆ ನೀರಿನ ಅಭಾವವಾಗದಂತೆ ಮಾಡಲು ಉಡುತೊeರೆ ಹಳ್ಳ ಕುಡಿಯುವ ನೀರಿನ ಯೋಜನೆ ಹಾಗು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 490 ಕೋಟಿ ರೂಗಳನ್ನು ಅನುದಾನ ಘೋಷಿಸಿರುವುದಕ್ಕೆ ಕಾರಣಕರ್ತರಾಗಿದ್ದರೆ , ಇದೇ ಸಮಯದಲ್ಲಿ ಶ್ರೀಗಳಿಗೆ ,ಹಾಗೂ ಮಾನ್ಯ ಮುಖ್ಯ ಮಂತ್ರಿ ಗಳಿಗೆ,ಮಾನ್ಯ ಮಂತ್ರಿ ಗಳಿಗೆ ,ಹನೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಜನಪ್ರತಿನಿಧಿಗಳಿಗೆ, ಮುಖಂಡರುಗಳು ಧನ್ಯವಾದ ಸಲ್ಲಿಸಿದರು .

ನಮ್ಮ ಪ್ರದೇಶದ ಜನರ ಹಿತಕ್ಕಾಗಿ ಕೈಗೊಂಡಿರುವ ಈ ಮಹತ್ವದ ಯೋಜನೆಗೆ ಸ್ವಾಮೀಜಿಗಳು ಸದಾ ಆಶೀರ್ವಾದ ಹಾಗೂ ಸಂಪೂರ್ಣ ಬೆಂಬಲ ನೀಡುತ್ತಿರುವುದು ನಮಗೆ ಅಪಾರ ಸಂತೋಷ ಮತ್ತು ಧೈರ್ಯವನ್ನು ನೀಡುತ್ತದೆ.
ಪರಮ ಪೂಜ್ಯ ಜಗದ್ಗುರುಗಳ ಆಶೀರ್ವಾದದಿಂದ ಈ ಯೋಜನೆ ಯಶಸ್ವಿಯಾಗಿ ನೆರವೇರಿಸಿ ಸಮಾಜಕ್ಕೆ ಉಪಯೋಗವಾಗಲಿ ಎಂದು ರಾಮಾಪುರ ಹೋಬಳಿ ಹಾಗೂ ಹನೂರು ವಿಧಾನ ಸಭಾ ಕ್ಷೇತ್ರ ದ ಸಮಸ್ಥ ಜನರ ಪರವಾಗಿ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ದೇಶಿಕೇಂದ್ರ ಸ್ವಾಮೀಜಿಗಳಿಗೆ ನನ್ನ ಕೋಟಿಕೋಟಿ ಪ್ರಣಾಮಗಳು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಮುಖಂಡರಾದ ಡಾ. ಎಸ್. ದತ್ತೇಶ್ ಕುಮಾರ್ ರವರು ಉಪಸ್ಥಿತರಿದ್ದರು.

Total Views: 0
Share This Article