ಗ್ಯಾಸ್ ಸಿಲಿಂಡರ್ ನೆಪ : ವಿದ್ಯಾರ್ಥಿಗಳ ಊಟಕ್ಕೆ ಕತ್ತರಿಎಸ್ ಎಫ್ ಐ ಖಂಡನೆ
SFI condemns cutting students' meals under the pretext of gas cylinder

ಗ್ಯಾಸ್ ಸಿಲಿಂಡರ್ ನೆಪ : ವಿದ್ಯಾರ್ಥಿಗಳ ಊಟಕ್ಕೆ ಕತ್ತರಿಎಸ್ ಎಫ್ ಐ ಖಂಡನೆ

ಜಾಹೀರಾತು

ಗಂಗಾವತಿ :ವಿರೂಪಾಪುರ ನಗರದ ಬಿ.ಸಿ.ಎಂ. ಬಾಲಕರ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಗ್ಯಾಸ್ ಸಿಲಿಂಡರ್ ನೆಪ ಹೇಳಿ ವಿದ್ಯಾರ್ಥಿಗಳ ಊಟಕ್ಕೆ ಕತ್ತರಿ ಹಾಕಿರುವ ಘಟನೆಗೆ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದೆ ಎಂದರು.

ಈ ಕುರಿತು ಜಿಲ್ಲಾ ಸಮಿತಿ ಸದಸ್ಯ ಶರಣಬಸವ ಬಾದ್ನಟ್ಟಿ ಮಾತನಾಡಿ, ವಸತಿ ನಿಲಯದ ನಿಲಯ ಪಾಲಕರ ಬೇಜವಾಬ್ದಾರಿಯಿಂದ ವಿದ್ಯಾರ್ಥಿಗಳು ಮಧ್ಯಾಹ್ನ 4 ಗಂಟೆಯವರೆಗೆ ಉಪವಾಸ ಕೂತು ಪ್ರತಿಭಟನೆ ನಡೆಸಿದರು ಎಂದು ತಿಳಿಸಿದರು. ವಿದ್ಯಾರ್ಥಿಗಳು ತಾಲೂಕು ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆಯನ್ನು ತಿಳಿಸಿದಾಗ, “ಉಡಾಫೆಯಿಂದ ಮಾಡಿದ್ದನ್ನು ತಿನ್ನಿ” ಎಂದು ಹಾರಕೆಯ ಉತ್ತರ ನೀಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಸತಿ ನಿಲಯದಲ್ಲಿ ದಿನನಿತ್ಯ ಹಲವು ಸಮಸ್ಯೆಗಳು ಎದುರಾಗುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಯೇ ಎಂದು ಪ್ರಶ್ನಿಸಿದರು ವಿದ್ಯಾರ್ಥಿಗಳ ಗೋಳು ಕೇಳದ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕೆಂದು ಒತ್ತಾಯಿಸಿದರು.

ವಿದ್ಯಾರ್ಥಿಗಳ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಕಾರ್ಯನಿರ್ವಹಣಾಧಿಕಾರಿಗಳು ಕರೆ ಮಾಡಿ ಮಾತನಾಡಿ, ಸಿಇಒ ಅವರ ಗಮನಕ್ಕೆ ವಿಷಯವನ್ನು ತಂದು ಕೂಡಲೇ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಗೆ ಸಂದ ಜಯ
ನಂತರ ಪ್ರತಿಭಟನಾ ಸ್ಥಳಕ್ಕೆ ಊಟವನ್ನು ತಂದು ವಿದ್ಯಾರ್ಥಿಗಳಿಗೆ ನೀಡಲಾಯಿತು. ವಿದ್ಯಾರ್ಥಿಗಳು ಎಸ್‌ಎಫ್‌ಐ ನೇತೃತ್ವದಲ್ಲಿ ನಡೆದ ಹೋರಾಟವನ್ನು ಶ್ಲಾಘಿಸಿದರು.
ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದು ಕಾರ್ಯ ನಿರ್ವಹಕ ಕಚೇರಿಯ ಮ್ಯಾನೇಜರ್ ಆದ ನಿಜಮುದ್ಧಿನ್ ಮತ್ತು ಬಿಸಿಎಂ ಇಲಾಖೆಯ ಹಿರಿಯ ನಿಲಯ ಪಾಲಕರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಬಸಯ್ಯ ಹಿರೇಮಠ್ ಜಿಲ್ಲಾ ಸಮಿತಿ ಸದಸ್ಯರಾದ ಶರಣಬಸವ ಬಿ. ಮೌನೇಶ್ ವಿದ್ಯಾರ್ಥಿಗಳದ ಮಲ್ಲಿ ಉತ್ನೂರ್, ಕೌಸಿಕ್ ಮಂಜು ಚಿಕ್ಕಮದೀನಾಳ್ ಮತ್ತು ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.