ತುಂಗಭದ್ರಾ ನದಿಯಲ್ಲಿ ಕಾಲುಜಾರಿ ಇಬ್ಬರು ಯುವಕರು ಸಾವು,

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Two youths die after falling into Tungabhadra river

ತುಂಗಭದ್ರಾ ನದಿಯಲ್ಲಿ ಕಾಲುಜಾರಿ ಇಬ್ಬರು ಯುವಕರು ಸಾವು,

ಜಾಹೀರಾತು


ಗಂಗಾವತಿ ಮಾ.04: ಹೋಳಿ ಹಬ್ಬದ ಸಂದರ್ಭದಲ್ಲಿ ನದಿ ಸ್ನಾನಕ್ಕೆಂದು ಹೋಗಿದ್ದ ಮೂವ್ವರು ಯುವಕರು ಆಕಸ್ಮಿಕವಾಗಿ ಕಾಲುಜಾರಿ ತುಂಗಭದ್ರಾ ನದಿ ಪಾಲಾದ ಘಟನೆ ಬುಧವಾರ ಸಂಜೆ ನಡೆದಿದೆ.

ಈ ಪೈಕಿ ಒಬ್ಬ ಯುವಕ ಈಜಿ ದಡಸೇರಿದ್ದು ಇಬ್ಬರು ಯುವಕರು ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ.
ಮೃತ ಯುವಕರನ್ನು ಗಂಗಾವತಿಯ ಗಾಂಧಿನಗರದ ನಿವಾಸಿಗಳಾದ ಸೂರ್ಯ ಮತ್ತು ಅಭಿಷೇಕ ಇಬ್ಬರು 17 ವಯಸ್ಸು ಇದ್ದು ಎಂದು ಗುರುತಿಸಲಾಗಿದೆ. ಹೋಳಿ ಹಬ್ಬದ ಬಳಿಕ ಸ್ನೇಹಿತರೊಂದಿಗೆ ಊಟ ಮಾಡಿ ಸ್ನಾನಕ್ಕೆಂದು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಗೊತ್ತಾಗಿದೆ.

Total Views: 0
Share This Article