
ಸಾವಿರಾರು ಸಂಖ್ಯೆಯ ರೋಡ ಹಂಪ್ಸಗಳ ತೆರುವುಗೊಳಿಸುವ ನಿಟ್ಟಿನ್ನಲ್ಲಿ ಮುಖ್ಯಮಂತ್ರಿ ಪತ್ರ.

Chief Minister's letter in Nitin to clear thousands of roadblocks.

ಗಂಗಾವತಿ: ಗಂಗಾವತಿ-ಕುಷ್ಟಗಿ ರಸ್ತೆ ನಿರ್ಮಾಣದ ನ್ಯೂನ್ಯತೆ ಮತ್ತು ಅವೈಜ್ಞಾನಿಕ ರಸ್ತೆ ಉಬ್ಬುಗಳ ದೂರಿನ ಕುರಿತು ಮತ್ತು ತಾವರಗೇರಾ ಕಲ್ಬುರ್ಗಿ ರಸ್ತೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿರ್ಮಿಸಿರುವ ದೂರಿನ ಬಗ್ಗೆ ರಾಜ್ಯದ ಲೋಕೋಪಯೋಗಿ ಇಲಾಖೆಯ ಸರಕಾರಿ ಕಾರ್ಯದರ್ಶಿಯವರಿಗೆ ರಾಜ್ಯದ ಮುಖ್ಯಮಂತ್ರಿಯವರ ಕಚೇರಿಯಿಂದ ಸೂಕ್ತ ಕ್ರಮಕೈಗೊಳ್ಳಲು ಆದೇಶಿಸಿದ ಪತ್ರ ರವಾನೆಯಾಗಿದೆ.

ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ ದಿನಾಂಕ:19/02/2026 ರಂದು ಸಲ್ಲಿಸಿರುವ ಮನವಿಯನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ತೆಗೆದು ಕೊಳ್ಳುವಂತೆ ಈ ಪತ್ರದಲ್ಲಿ ಸೂಚಿಸಲಾಗಿದೆ.ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಸದರಿಯವರಿಂದ ಮಾಹಿತಿಯನ್ನು ಪಡೆಯುವಂತೆ ಮುಖ್ಯ ಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಶ್ರೀ ಎಮ್.ಶಾಂತಪ್ಪ ,ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾತ್ರವಲ್ಲದೆ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಅವರಿಗೂ ಈ ಬಗ್ಗೆ ದಿನಾಂಕ: 07-02-2026 ರಂದು ಪತ್ರ ಬರೆದಿದ್ದ ಅಶೋಕಸ್ವಾಮಿ ಹೇರೂರ,ಈ ಪತ್ರಗಳಿಗೆ ನ್ಯಾಷನಲ್ ಹೈವೇ ಆಫ಼್ ಅಥಾರಿಟಿ ಆಫ಼್ ಇಂಡಿಯಾ,ಹೊಸಪೇಟೆ ಕಚೇರಿಯದಿನಾಂಕ:17-10-2019 ರ ಪತ್ರ,ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರ ಸಹಾಯಕ ಖಾಸಗಿ ಕಾರ್ಯದರ್ಶಿಯವರ ದಿನಾಂಕ:31-10-2019 ರ ಪತ್ರ,ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಹುಬ್ಬಳ್ಳಿ ಇವರ ದಿನಾಂಕ:16-11-2019 ರ ಪತ್ರ,ಕಾರ್ಯಪಾಲಕ ಅಭಿಯಂತರು,ಕರ್ನಾಟಕ ರಾಜ್ಯ.ಹೆದ್ದಾರಿ ಅಭಿವೃದ್ಧಿ ಯೋಜನಾ ವಿಭಾಗ,ಕೆ.ಎಸ್.ಎಚ್.ಪಿ.ಐ. ರಾಯಚೂರು ಇವರ ದಿನಾಂಕ 19-11-2019 ರ ಪತ್ರ,
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಕಲಬುರ್ಗಿ ಇವರ ದಿನಾಂಕ:25-11-2019 ರ ಪತ್ರ ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಕಾರ್ಯಾಲಯದ ದಿನಾಂಕ:25-11-2019 ರ ಪತ್ರಗಳನ್ನು ಉಲ್ಲೇಖಿಸಿದ್ದಾರೆ.
ಗಂಗಾವತಿ-ಕುಷ್ಟಗಿ ಮತ್ತು ತಾವರಗೇರಾ-ಕಲಬುರ್ಗಿ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ಉಬ್ಬುಗಳನ್ನು ಹೆಚ್ಚು ಸಂಖ್ಯೆಯಲ್ಲಿ ನಿರ್ಮಿಸಲಾಗಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.
ಹಲವು ಗ್ರಾಮಗಳಲ್ಲಿ ಈ ಮೊದಲಿಗಿಂತಲೂ ರಸ್ತೆಯನ್ನು ಚಿಕ್ಕದಾಗಿಸಿ ನಿರ್ಮಿಸಲಾಗಿದೆ.ರಸ್ತೆ ನಿರ್ಮಿಸುವಾಗ ಕಟ್ಟಡಗಳನ್ನು ತೆರವುಗೊಳಿಸಿಕೊಂಡವರಿಗೆ ಕಡಿಮೆ ಮೊತ್ತದ ಹಣವನ್ನು ಪರಿಹಾರವಾಗಿ ನೀಡಲಾಗಿದೆ. ಆದರೆ, ಸ್ಥಳಾಂತರಿಸಬಲ್ಲ ಪಾನ್ ಶಾಪ್ ಗಳಂತಹ ಗೂಡಂಗಡಿಗಳಿಗೆ ಹೆಚ್ಚಿನ ಮೊತ್ತದ ಪರಿಹಾರ ನೀಡಲಾಗಿದೆ. ಆದರೆ ಗೂಡಂಗಡಿಯವರು ಸ್ಥಳಾಂತರಗೊಳ್ಳದೆ ತಮ್ಮ ಗೂಡಂಗಡಿಗಳನ್ನು ಅಲ್ಲಿಯೇ ಇರಿಸಿಕೊಂಡಿರುವುದರಿಂದ ಅವುಗಳ ಸುತ್ತಲೂ ಜನರು ಸೇರುವುದರಿಂದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.
ರಸ್ತೆಗಳ ಪಕ್ಕದಲ್ಲಿ ಎರಡೂ ಕಡೆ ಚರಂಡಿಗಳನ್ನು ನಿರ್ಮಿಸಲಾಗಿದ್ದು, ಆನಂತರ ಉಳಿದಿರುವ ಖಾಲಿ ಜಾಗೆಗಳಲ್ಲಿ ಅಂದರೆ ರಸ್ತೆಗಳ ಎರಡೂ ಪಕ್ಕದಲ್ಲಿ ಪಾದಚಾರಿಗಳಿಗೆ ಅನುಕೂಲವಾಗುವಂತೆ ಫುಟ್ ಪಾತ್ ಗಳನ್ನು ಎಲ್ಲಾ ಕಡೆಗಳಲ್ಲಿ ನಿರ್ಮಿಸಲು ಆದೇಶಿಸಬೇಕೇಂದು ಮನವಿ ಮಾಡಿದ್ದಾರೆ.
ಈ ಪತ್ರದ ಪ್ರತಿಗಳನ್ನು ಮುಖ್ಯ ಅಭಿಯಂತರರು, ಕೆ.ಆರ್.ಡಿ.ಸಿ.ಎಲ್., ಬೆಂಗಳೂರು,ಕಾರ್ಯನಿರ್ವಾಹಕ ಅಭಿಯಂತರರು, ಕೆ.ಆರ್.ಡಿ.ಸಿ.ಎಲ್. ಪ್ರೋಜೆಕ್ಟ ಆಫೀಸ್, ನಂ. 35, 3ನೇ ಮುಖ್ಯ ರಸ್ತೆ, ಡಾಲರ್ಸ್ ಕಾಲೋನಿ, ಬಸ್ಸ್ಟ್ಯಾಂಡ್ ಹಿಂದುಗಡೆ, ಗೋಕುಲ ರೋಡ್ (ಎರ್ಪೋರ್ಟ್ ರಸ್ತೆ) ಹುಬ್ಬಳ್ಳಿ -೫೮೦೦೩೦,ಕಾರ್ಯನಿರ್ವಾಹಕ ಅಭಿಯಂತರರು, ಕೆ.ಆರ್.ಡಿ.ಸಿ.ಎಲ್.ಯೋಜನಾ ಕಛೇರಿ, ಲೋಕೋಪಯೋಗಿ ಇಲಾಖೆ, ವಿಭಾಗ ಆವರಣ, ಹಳೇ ಜೇವರ್ಗಿ ರಸ್ತೆ, ಕಲ್ಬುರ್ಗಿ-೫೮೫೧೦೨,ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್.ಡಿ.ಸಿ.ಎಲ್. ಪ್ರೋಜೆಕ್ಟ ಆಫೀಸ್, ಸಂಪರ್ಕ ಸೌಧ, ಬಿ.ಐ.ಪಿ ಪ್ರಿಮಿಸಸ್, ಸರ್ವೆ ನಂ. 08, (ಓರಾಯನ್ ಮಾಲ್ ಎದುರಿಗೆ) ಡಾ| ರಾಜ್ ಕುಮಾರ ರಸ್ತೆ, ರಾಜಾಜಿ ನಗರ, ಮೊದಲನೆ ಹಂತ,ಬೆಂಗಳೂರು- ೫೬೦೦೧೦,ಕಾರ್ಯನಿರ್ವಾಯಕ ಅಭಿಯಂತರರು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ, ವಿಭಾಗ, ಕೊಪ್ಪಳ, ಕಾರ್ಯನಿರ್ವಾಯಕ ಅಭಿಯಂತರರು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ, ವಿಭಾಗ, ರಾಯಚೂರು,ಸಹಾಯಕ ಕಾರ್ಯನಿರ್ವಾಯಕ ಅಭಿಯಂತರರು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ, ಉಪ ವಿಭಾಗ, ಕುಷ್ಟಗಿ ಮತ್ತು ಗಂಗಾವತಿ,ಕಾರ್ಯಪಾಲಕ ಇಂಜಿನೀಯರ, ಕೆ.ಆರ್.ಡಿ.ಸಿ.ಎಲ್. ಯೋಜನಾ ಕಛೇರಿ, ನಂ. 311/1-ಸಿ, 4ನೇ ಅಡ್ಡ ರಸ್ತೆ, ಸೋನಿಯಾ ನಗರ, ಡ್ಯಾಮ್ ರಸ್ತೆ, ಹೊಸಪೇಟೆ-೫೮೩೨೦೧,ಕಾರ್ಯಪಾಲಕ ಅಭಿಯಂತರರು, ಕರ್ನಾಟಕ ರಾಜ್ಯ ಹೆದ್ದಾರಿ ಯೋಜನಾ ವಿಭಾಗ, ರಾಯಚೂರು,ವಿಭಾಗೀಯ ಆಯುಕ್ತರು ಕಲಬುರ್ಗಿ,ಜಿಲ್ಲಾಧಿಕಾರಿಗಳು ಕೊಪ್ಪಳ, ರಾಯಚೂರು, ಕಲಬುರ್ಗಿ ಇವರುಗಳಿಗೆ ಕಳುಹಿಸಿ ಸೂಕ್ತ ಕ್ರಮ ಕೈಕೊಂಡು ಮಾಹಿತಿ ನೀಡಲು ವಿನಂತಿಸಿದ್ದಾರೆ.
ತಮ್ಮ ಈ ದೂರಿನ ಪತ್ರಗಳನ್ನು ಅಧ್ಯಕ್ಷರು/ಕಾರ್ಯದರ್ಶಿಗಳು,ಕಲ್ಯಾಣ ಕರ್ನಾಟಕ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ, ಕಲಬುರ್ಗಿ ಇವರಿಗೆ ಮಾಹಿತಿ ಹಾಗೂ ಸೂಕ್ತ ಕ್ರಮಕ್ಕೆ ಕಳುಹಿಸಿ,ಈ ರಾಜ್ಯ ಹೆದ್ದಾರಿಗಳಲ್ಲಿರುವ ಸಾವಿರಾರು ರೋಡ ಹಂಪ್ಸ್ ಗಳನ್ನು ತೆರುವುಗೊಳಿಸುವ ನಿಟ್ಟಿನಲ್ಲಿ ತಮ್ಮ ಸಂಸ್ಥೆಯಿಂದ ಬರೆಯಲಾಗಿರುವ ಮನವಿ ಪತ್ರಕ್ಕೆ ಬೆಂಬಲ ನೀಡಬೇಕೆಂದು ಅಶೋಕಸ್ವಾಮಿ ಹೇರೂರ ಕೋರಿದ್ದಾರೆ.
