
ಬಾವಿಗೆ ಬಿದ್ದ ಹಂದಿಯನ್ನು ರಕ್ಷಿಸಿ ಕಾಡಿಗೆ ಬಿಟ್ಟ ಅಗ್ನಿಶಾಮಕ ಸಿಬ್ಬಂದಿಗಳು.
Firefighters rescued a pig that had fallen into a well and released it into the forest.

ವರದಿ: ಬಂಗಾರಪ್ಪ. ಸಿ.
ಹನೂರು ಅಗ್ನಿಶಾಮಕ ಠಾಣೆ.ರಕ್ಷಣಾ ಕರೆ ಸಂಖ್ಯೆ:01/2026 ದಿ, 22/02/2026 ರಂದು ಸಮಯ 09-59 ರಲ್ಲಿ ಶ್ರೀ ಲಿಂಗರಾಜು ಎಂಬುವವರು ಕರೆ ಮಾಡಿ ಹನೂರು ತಾಲ್ಲೂಕು, ವೈಶ್ಯಂಪಾಳ್ಯ ಗ್ರಾಮದಲ್ಲಿ 30*30 ಅಡಿ ಉದ್ದ ಅಗಲದ 70 ಅಡಿ ಆಳದ 5 ಅಡಿ ನೀರು ತುಂಬಿದ್ದ ಬಾವಿಗೆ 01 ಹಂದಿ ಬಿದ್ದಿದೆ ಎಂದು ತಿಳಿಸಿರುತ್ತಾರೆ KA 42 G 430 ಜಲವಾಹನದಲ್ಲಿ LF-696 ,04 ಸಿಬ್ಬಂದಿಯೊಂದಿಗೆ ತೆರಳಿ ಹಂದಿಯನ್ನು ಬಾವಿಯಿಂದ ಮಲೆತ್ತಿ ರಕ್ಷಿಸಿ , ಅರಣ್ಯ ಇಲಾಖೆ ಸಿಬ್ಬಂದಿಗಳ ಸಮ್ಮುಖದಲ್ಲಿ ಬಯಲು ಪ್ರದೇಶಕ್ಕೆ ಬಿಟ್ಟು ಘಟನೆಯ ವಿವರ ಮಾಹಿತಿ ಪಡೆದು 13-00 ಗಂಟೆಗೆ ಠಾಣೆಗೆ ಮರಳಿ ಬಂದಿರುತ್ತಾರೆ .
ಇದೇ ಸಂದರ್ಭದಲ್ಲಿ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್ ಮತ್ತು ಸಿಬ್ಬಂದಿಯವರಾದ ಪೆರಿಯ ನಾಯಗಂ ಮಹೇಶ್ ಕುಮಾರ್ ಹರ್ಷ ಲೋಕೇಶ್,ಅರಣ್ಯ ಇಲಾಖೆ ಸಿಬ್ಬಂದಿ ಚಿನ್ನಸ್ವಾಮಿ ಲಾಯಪ್ಪ ನಿಂಗರಾಜ್ ನಂದೀಶ್ ಅಭಿ ಕೃಷ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.




