ಫೆ. 26 ಮತ್ತು 27 ರಂದು 2026 ನೇ ಸಾಲಿನ ರಸ್ತೆ ಸಂಚಾರ ಗಣತಿ
Road Traffic Census 2026 on Feb. 26 and 27
ಕೊಪ್ಪಳ ಫೆಬ್ರವರಿ 18, (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಓಡಾಡುವ ವಾಹನಗಳ ಗಣತಿಯನ್ನು ನಡೆಸಲಾಗುತ್ತಿದ್ದು, 2026 ನೇ ಸಾಲಿನ ರಸ್ತೆ ಸಂಚಾರ ಗಣತಿಯನ್ನು ಫೆಬ್ರವರಿ 26 ಮತ್ತು ಫೆ.27 ರಂದು ಬೆಳಿಗ್ಗೆ 6 ಗಂಟೆಯಿAದ 2 ದಿನಗಳ ಕಾಲ ನಡೆಯಲಿದೆ.
ಗಣತಿಗೆ ಈಶಾನ್ಯ ವಲಯದ ಕಲಬುರಗಿ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳ ಮೇಲೆ 370 ಗಣತಿ ಕೇಂದ್ರಗಳು ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ 692 ಗಣತಿ ಕೇಂದ್ರಗಳು ಸೇರಿದಂತೆ ಒಟ್ಟು 1062 ಗಣತಿ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ.
ಪ್ರತಿ ರಸ್ತೆಯ ಸಂಚಾರದ ಬೆಳವಣೆಗೆಯ ತೀವ್ರತೆಯನ್ನು ಅಳೆಯುವುದು, ಪ್ರಸ್ತುತದಲ್ಲಿ ಇರುವ ರಸ್ತೆಗಳನ್ನು ದುರಸ್ತಿ ಪಡಿಸುವಲ್ಲಿ ಹಾಗೂ ರಸ್ತೆಯನ್ನು ಇನ್ನು ಉತ್ತಮ ಪಡಿಸಲು ಸಹಾಯಕವಾಗುವುದು, ರಸ್ತೆಯ ಸಂಚಾರದ ಬೆಳವಣಿಗೆಯ ತೀವ್ರತೆಯನ್ನು ಗಮನಿಸಿ ರಸ್ತೆಯ ಅಗಲೀಕರಣಗೊಳಿಸುವುದು, ರಸ್ತೆಗಳನ್ನು ಮೇಲ್ದರ್ಜೆಗೇರಿಸುವಲ್ಲಿ ಈ ಗಣತಿಯ ವರದಿ ಪ್ರಮುಖವಾಗಿದೆ. ರಸ್ತೆಯ ಸಂಚಾರದ ಗಣತಿಯಿಂದ ವಾಹನ ಅಪಘಾತಗಳನ್ನು ತಡೆಯಲು ಕ್ರಮ ತೆಗೆದುಕೊಳ್ಳಲು ಅನುಕೂಲವಾಗುತ್ತದೆ. ರಸ್ತೆ ಸಂಚಾರ ಗಣತಿಯಿಂದ ಆ ರಸ್ತೆ ಮೇಲೆ ಯಾವ ರೀತಿ ವಾಹನ ಸಂಚಾರ ಅಧಿಕವಾಗುತ್ತಿದೆ ಎನ್ನುವುದನ್ನು ತಿಳಿಯುವುದರಿಂದ ಹಲವಾರು ರಸ್ತೆಗಳ ಅಭಿವೃದ್ಧಿ ಕಾರ್ಯಕ್ರಮವನ್ನು ಸರ್ಕಾರದ ಮಟ್ಟದಲ್ಲಿ ರೂಪಿಸಲು ಅನುಕುಲವಾಗುತ್ತದೆ ಎನ್ನುವುದು ಈ ಗಣತಿಯ ಮುಖ್ಯ ಉದ್ದೇಶವಾಗಿದೆ.
ಸಂಚಾರ ಗಣತಿಯನ್ನು ಯಶಸ್ವಿಯಾಗಿಸಲು ವಾಹನ ಚಾಲಕರು ಮತ್ತು ಸಾರ್ವಜನಿಕರು ತಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ ಸಹಕರಿಸಬೇಕು ಎಂದು ಕಲಬುರಗಿ ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡಗಳು (ಈಶಾನ್ಯ) ಮುಖ್ಯ ಇಂಜಿನಿಯರ್ ಶರಣಪ್ಪಾ ಸುಲಗಂಟೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



