ಕೊಪ್ಪಳ ವಿವಿ: ಸಂಯೋಜನಾ ಅರ್ಜಿ ಆಹ್ವಾನ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Koppal University: Invitation to join applications
ಕೊಪ್ಪಳ ವಿವಿ: ಸಂಯೋಜನಾ ಅರ್ಜಿ ಆಹ್ವಾನ

ಕೊಪ್ಪಳ ನವೆಂಬರ್ 11, (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕೊಪ್ಪಳ ವಿಶ್ವವಿದ್ಯಾನಿಲಯದ ವ್ಯಾಪ್ತಿಯ 2026- 27ನೇ ಶೈಕ್ಷಣಿಕ ಸಾಲಿಗೆ ಹೊಸದಾಗಿ ಕಲಾ, ವಿಜ್ಞಾನ, ವಾಣಿಜ್ಯ, ಆಡಳಿತ ನಿರ್ವಹಣೆ, ಶಿಕ್ಷಣ ಪದವಿ ಹಾಗೂ ಇನ್ನಿತರ ಸಾಂಪ್ರದಾಯಿಕ ಕೋರ್ಸ್ಗಳನ್ನು ಪ್ರಾರಂಭಿಸಲು ಮತ್ತು ರಾಜ್ಯ ಸರ್ಕಾರದ ಅಥವಾ ವಿಶ್ವವಿದ್ಯಾನಿಲಯದ ಅನುದಾನದ ಅಪೇಕ್ಷೆ ಇಲ್ಲದೆ ಕಾಲೇಜುಗಳನ್ನು ನಡೆಸಲು ಆರ್ಥಿಕ ಸಾಮರ್ಥ್ಯವುಳ್ಳ ನೋಂದಾಯಿತ ಸೊಸೈಟಿ, ಸಾರ್ವಜನಿಕ ಟ್ರಸ್ಟ್, ಸಂಸ್ಥೆಗಳಿAದ ನವೀನ ಸಂಯೋಜನೆಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರಸ್ತುತ ವಿಶ್ವವಿದ್ಯಾನಿಲಯದ ಸಂಯೋಜನೆ ಹೊಂದಿರುವ ಎಲ್ಲಾ ಸಂಯೋಜಿತ ಕಾಲೇಜುಗಳಿಂದಲೂ ಸಹ
2026-27ನೇ ಶೈಕ್ಷಣಿಕ ಸಾಲಿಗಾಗಿ ತಮ್ಮ ಕಾಲೇಜುಗಳ ಸ್ನಾತಕ ಹಾಗೂ ಸ್ನಾತಕೋತ್ತರ ಕೋರ್ಸುಗಳ ಪ್ರವೇಶ ಮಿತಿ ಹೆಚ್ಚಳ ಅಥವಾ ಹೊಸ ಕೋರ್ಸ್ಗಳ ವಿಷಯ ಸಮೂಹ ಸೇರ್ಪಡೆ ಅಥವಾ ಕಾಲೇಜು ಹೆಸರು ಬದಲಾವಣೆ ಅಥವಾ ಕಾಲೇಜಿನ ಸ್ಥಳ ಬದಲಾವಣೆ ಅಥವಾ ಕಾಲೇಜಿನ ಆಡಳಿತ ಮಂಡಳಿಯ ವರ್ಗಾವಣೆ, ಮುಂದುವರಿಕೆ ಸಂಯೋಜನೆ, ಶಾಶ್ವತ ಸಂಯೋಜನೆ, ಶಾಶ್ವತ ಸಂಯೋಜನೆ ಪರಿವೀಕ್ಷಣೆ, ಶಾಶ್ವತ ಸಂಯೋಜನೆ ನವೀಕರಣ ಸಂಯೋಜನೆಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆನ್‌ಲೈನ್ ಮೂಲಕ ದಂಡ ರಹಿತವಾಗಿ ಸಂಯೋಜನಾ ಅರ್ಜಿ ಸಲ್ಲಿಸಲು ನವೆಂಬರ್ 20 ಕೊನೆಯ ದಿನವಾಗಿದೆ. ರೂ.20,000/- ಗಳ ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ನವೆಂಬರ್ 26 ಕೊನೆಯ ದಿನವಾಗಿದೆ. ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಮುದ್ರಿತ ಪ್ರತಿ ಪಡೆದು ಶುಲ್ಕ ಪಾವತಿಸಿದ ರಸೀದಿಯೊಂದಿಗೆ ಮತ್ತು ಸಂಪೂರ್ಣ ದಾಖಲೆಗಳೆಲ್ಲವುಗಳನ್ನೂ ಬೈಂಡಿAಗ್ ಅಥವಾ ಸ್ಪೆöÊರಲ್ ಬೈಂಡಿAಗ್ ಮಾಡಿಸಿ ಎರಡು ಪ್ರತಿಗಳನ್ನು ಕುಲಸಚಿವರ ಕಛೇರಿ, ಕೊಪ್ಪಳ ವಿಶ್ವವಿದ್ಯಾಲಯ, 3ನೇ ಮಹಡಿ, ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯದ ಆವರಣ, ತಳಕಲ್-583238 ಇವರಿಗೆ ನ.26 ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಲು ಸೂಚಿಸಲಾಗಿದೆ. ಸಂಯೋಜನಾ ಶುಲ್ಕಗಳ ವಿವರ ಹಾಗೂ ಸಂಯೋಜನೆಗೆ ಅರ್ಜಿಗಳನ್ನು ಸಲ್ಲಿಸಲು ಹಾಗೂ ಸಂಬAಧಿಸಿದ ಇನ್ನಿತರ ಮಾಹಿತಿಯನ್ನು ವಿಶ್ವವಿದ್ಯಾಲಯದ ಜಾಲತಾಣ www.koppaluniversity.ac.in ದಲ್ಲಿ ಪಡೆಯಬಹುದು ಎಂದು ವಿಶ್ವವಿದ್ಯಾಲಯದ ಪ್ರಭಾರಿ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Total Views: 0
Share This Article