Breaking News
ಬಿಜೆಪಿ ಕಾರ್ಯಾಲಯದಲ್ಲಿ ಮಹಾತ್ಮ ಗಾಂಧಿಯವರ  ಜಯಂತಿ, ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ  ಜಯಂತಿ ಆಚರಣೆ
Mahatma Gandhi's birth anniversary and Lal Bahadur Shastri's birth anniversary celebrations at BJP office

 

ಗಂಗಾವತಿ:ಇಂದು  ಬಿಜೆಪಿ ಕಾರ್ಯಾಲಯದಲ್ಲಿ ಮಹಾತ್ಮ ಗಾಂಧಿಯವರ 156 ನೇ ಜಯಂತಿ, ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 121 ನೇ ಜಯಂತಿಯನ್ನು ಮಹನೀಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡುವದರ ಮೂಲಕ ಆಚರಿಸಲಾಯಿತು.
ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿಯವರು ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿದ್ದ ಮಹಾತ್ಮ ಗಾಂಧಿಯವರು ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ನಡೆದವರು ಹಾಗೂ ದೇಶೀಯ ಉತ್ಪನ್ನಗಳನ್ನು ಬಳಸುವ, ಸ್ವಚ್ಛತೆಯ ಪರಿಕಲ್ಪನೆಯನ್ನು ನೀಡಿದವರು, ಹಾಗೂ ಖಾದಿ ಬಟ್ಟೆಗಳನ್ನು ಬಳಸಲು ಕರೆ ನೀಡಿದವರು ಹಾಗೆಯೇ ಸ್ವತಂತ್ರ ದೇಶದ ಎರಡನೇ ಪ್ರಧಾನ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಸಾನ್ ಎಂದು ಹೇಳಿ ದೇಶದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದವರು ಎಂದು ಹೇಳಿ ನುಡಿನಮನ ಸಲ್ಲಿಸಿದರು .
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಅರಿಕೇರಿ, ನಗರ ಮಂಡಲ ಅಧ್ಯಕ್ಷರಾದ ಚಂದ್ರಶೇಖರ ಹಿರೂರು, ಗ್ರಾಮೀಣ ಮಂಡಲ ಅಧ್ಯಕ್ಷರಾದ ದುರುಗಪ್ಪ ಆಗೋಲಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರ್ಜುನ ರಾಯ್ಕರ್, ಪ್ರಮುಖರಾದ ವೀರೇಶ ಬಲಕುಂದಿ, ರಮೇಶ ಹಾದಿಮನಿ, ಶಿವಪ್ರಕಾಶ ಅಕ್ಕಿ, ಶ್ರೀಮತಿ ಸೌಭಾಗ್ಯ, ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಇತರರು ಉಪಸ್ಥಿತರಿದ್ದರು.

ಜಾಹೀರಾತು
https://youtu.be/54mDmaz0YxQ?si=IlxLl6zRdn1CsS_E
ಜಾಹೀರಾತು

Leave a Reply

Your email address will not be published. Required fields are marked *