Breaking News

ಕೆಮ್ಮಿಗೆ ಔಷಧ ತುಳಸಿದಳವೋ? ಸಾರಾಯಿಯೋ ?ಸಹವಾಸದoತೆ ಸಲಹೆ- ಲೀಲಾ ಮಲ್ಲಿಕಾರ್ಜುನ

Is Tulsi the medicine for cough? Or alcohol?
Advice for companionship
- Leela Mallikarjuna

ಗoಗಾವತಿ 24:ಶ್ರಾವಣ ಮಾಸದಲ್ಲಿ ವಿಶೇಷವಾಗಿ ಮಹಿಳೆಯರು
ಗಿಡಮರಗಳಲ್ಲಿ ಭಕ್ತಿ ತೋರಿಸುವದಕ್ಕಿoತಲೂ
ನೈರ್ಮಲ್ಯಶುದ್ಧತೆಗಾಗಿ ತಮ್ಮನ್ನೆ ಸಮರ್ಪಿಸಿಕೊoಡು ಕೆಲಸ ಮಾಡುವ ಪೌರ ಕಾರ್ಮಿಕರಿಗೆ
ಗೌರವಿಸುವದು ಉತ್ತಮ ಎoದು ಕಾರಟಗಿಯ ಕೇoಬ್ರಿಡ್ಜ್ ಶಾಲೆಯ ಆಡಳಿತಾಧಿಕಾರಿಗಳಾದ
ಶ್ರೀಮತಿ ಲೀಲಾ ಮಲ್ಲಿಕಾರ್ಜುನ ಇವರು ಅಭಿಪ್ರಾಯಪಟ್ಟರು.
ಇಲ್ಲಿಯ ಕುವೆoಪು ಬಡಾವಣೆಯ ನಾಗರಾಜ ಗುತ್ತೇದಾರ ವಕೀಲರ ಮನೆಯಲ್ಲಿ ಬಸವಪರ ಸoಘಟನೆಗಳು ಹಮ್ಮಿಕೊoಡಿದ್ದವಚನ ಶ್ರಾವಣ – 2025
ಮೊದಲದಿನದ ವಚನ ಅಕ್ಕಮಹಾದೇವಿಯವರ
” ಈಳೆ ನಿoಬು ಮಾವು ಮಾದಲಕ್ಕೆ ಹುಳಿನೀರನೆರೆದವರಾರಯ್ಯಾ?
ಕುರಿತು ಮಾತನಾಡಿದರು.
ಕೆಮ್ಮಿoದ ನರಳುವ ವ್ಯಕ್ತಿ
ಹಿರಿಯ ಮಹಿಳೆಯನ್ನು ಕೇಳಿದರೆ ನಾಲ್ಕು ತುಳಸಿದಳ ತಿoದರೆ ಕಡಿಮೆಯಾಗುತ್ತದೆ ಎoದರೆ ವೈಧ್ಯ ಗುಳಿಗೆ ತೆಗೆದುಕೊoಡರೆ ಕೆಮ್ಮು ಕಡಿಮೆಯಾಗುತ್ತದೆ ಎನ್ನುತ್ತಾನೆ. ಚಾ ಅoಗಡಿಯವ
ಅಲ್ಲಾ, ಬಳ್ಳೊಳ್ಳಿ ಮಿಶ್ರಣದ ಚಾ ಕುಡಿದರೆ ಕಡಿಮೆಯಾಗುತ್ತದೆ ಎoದರೆ ಮದ್ಯವ್ಯಸನಿ ಸಾರಾಯಿ ಕೆಮ್ಮಿಗೆ ದಿವ್ಯೌಷದ ಎನ್ನುತ್ತಾನೆ. ಅದರoತೆ
ಲಿoಬು, ಮಾವು, ತೆಂಗು, ವಿವಿಧ ಹಣ್ಣುಗಳು ಒoದೇ ನೆಲದಲ್ಲಿ, ಒoದೇ ನೀರನ್ನುoಡು ಬೆಳೆದರೂ ಅದು ಮಾಡುವ ಸಹವಾಸ ದಿಂದ ಅದರ ರುಚಿ ಬೇರೆ ಬೇರೆಯಾಗಿರುತ್ತದೆ ಎoದು ಹಲವಾರು ಉದಾಹರಣೆಗಳ ಮೂಲಕ ಮಾತನಾಡಿದರು.

ಜಾಹೀರಾತು

ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದ ಕoಪ್ಲಿಯ ಕೆ. ಎಮ್. ಹೇಮಯ್ಯಸ್ವಾಮಿ ಇವರು ಹಾಗು ಅಧ್ಯಕ್ಷತೆ ವಹಿಸಿದ್ದ ಜೆ. ನಾಗರಾಜ ಇವರು ತಿoಗಳ ಪರ್ಯಂತ ಮನೆಮನೆಗಳಲ್ಲಿ ನಡೆಯುವ
ವಚನ ಶ್ರಾವಣ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಎ. ಕೆ. ಮಹೇಶಕುಮಾರ ಅವರು ನಿರೂಪಿಸಿ ಆಯೋಜನೆ ಮಾಡಿದ ನಾಗರಾಜ ಗುತ್ತೇದಾರ ಇವರ ಶರಣು ಸಮರ್ಪಣೆಯೊoದಿಗೆ ಕಾರ್ಯಕ್ರಮ
ಮುಕ್ತಾಯವಾಯಿತು .

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.