Venerable Dr. Siddarama Sharanu Beldala honored and congratulated him on his election as the President of Akhil Bharat Vachana Sahitya Parishad Conference:
ಹತ್ತು ವರ್ಷದ ನಂತರ ಕರ್ನಾಟಕ ರಾಜ್ಯದ ಚಿತ್ರದುರ್ಗದಲ್ಲಿ ಜನೆವರಿ 18-19 ರಂದು ಸಮ್ಮೇಳನ ಜರುಗುತ್ತಿದೆ , ಇಂತಹ ಮಹತ್ವದ ವಚನ ಸಾಹಿತ್ಯ ಪರಿಷತ್ತು ಸಮ್ಮೇಳನದ ಸರ್ವಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ.ಬೆಲ್ದಾಳ ಶರಣರು ವಚನ ಸಾಹಿತ್ಯಗಾಗಿ ತಮ್ಮ ಜೀವನ ಮೂಡುಪಾಗಿ ಇಟ್ಟಿದ್ದಾರೆ, ನೂರಾರು ಪುಸ್ತಕಗಳು ಬರೆದು ಪ್ರಕಟಿಸಿದ್ದಾರೆ. ತಮ್ಮ ಜೀವನದಲ್ಲಿ ಸಂಪೂರ್ಣ ಬಸವ ತತ್ವ ಸಿದ್ದಾಂತ ಅಳವಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. 12ನೆ ಶತಮಾನದಲ್ಲಿ ಬಸವಾದಿ ಶರಣರು ಜಾತಿ ಲಿಂಗ ವರ್ಣ ವರ್ಗ ಭೇದ ಸಮಾನತೆಗಾಗಿ ಜಾರಿಗೆ ತಂದ ತತ್ವ ಸಿದ್ದಾಂತಗಳ ಅಡಿಯಲ್ಲಿ 21ನೆ ಶತಮಾನದಲ್ಲಿ ದಲಿತ ಕುಟುಂಬದಲ್ಲಿ ಹುಟ್ಟಿ ಬಸವಾದಿ ಶರಣರ ತತ್ವ ಸಿದ್ದಾಂತ, ಆಚರಣೆ, ಲಾಂಛನ ಅಳವಡಿಸಿಕೊಂಡು ಲಿಂಗಾಯತ ಧರ್ಮ ಪ್ರಚಾರ ಮಾಡುತ್ತಾ ಇಡೀ ಸಮಾಜಕ್ಕೆ ಬಸವ ತತ್ವ ಸಿದ್ದಾಂತ ಎಲ್ಲರಿಗೂ ಮುಟ್ಟಬೇಕು ಎಂದು ಪ್ರಚಾರ ಮಾಡುತ್ತಾರೆ.
ಪೂಜ್ಯ ಡಾ ಸಿದ್ದರಾಮ ಶರಣರು ಬೆಲ್ದಾಳ ಅವರಿಗೆ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲು ಕಾರಣೀಭೂತರಾದ ಸುತ್ತೂರು ಪೂಜ್ಯ ಡಾ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಮತ್ತು ತೋಂಟದಾರ್ಯ ಮಠದ ಪೂಜ್ಯ ಡಾ ಸಿದ್ಧರಾಮ ಸ್ವಾಮೀಜಿ , ಪರಿಷತ್ತು ಅಧ್ಯಕ್ಷ ಶರಣ ಡಾ ಸಿ ಸೋಮಶೇಖರ ಮತ್ತು ಪದಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸುತ್ತೇವೆ. ಸಮ್ಮೇಳನ ಯಶಸ್ವಿ ಆಗಿ ಜರುಗಲಿ ಎಂದು ಆಶಿಸುತ್ತೇವೆ.
ಫೋಟೋದಲ್ಲಿ ಶ್ರೀ ಶ್ರೀಕಾಂತ ಸ್ವಾಮಿ, ಶ್ರೀ ರೇವಣಪ್ಪ ಮುಲ್ಗೆ, ಶ್ರೀ ಗಂಗಾಧರ ದೇವರು, ಶ್ರೀ ಜಗದೀಶ್ ಬಿರಾದಾರ, ಶ್ರೀ ಶಿವಕುಮಾರ ಬೆಲ್ದಾಳ.