On the occasion of Dhanurmasa, the 4th annual padayatra was organized by the members of the Hirejantakal Virupapura Arya Vaishya Samaj
ಗಂಗಾವತಿ: ನಗರದ ಹಿರೇಜಂತಕಲ್ ವಿರುಪಾಪುರ ಆರ್ಯವೈಶ್ಯ ಸಮಾಜ ಬಾಂಧವರಿಂದ ನವಲಿಯ ಶ್ರೀ ಭೋಗಾಪುರೇಶ್ವರ ದೇವಸ್ಥಾನಕ್ಕೆ 4ನೇ ವರ್ಷದ ಪಾದಯಾತ್ರೆಯನ್ನು ಸೋಮವಾರ ಬೆಳಿಗ್ಗೆ ಆರಂಭಿಸಿದರು. ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷ ಪೂಜೆ ನೆರವೇರಿಸಿ ಪಾದಯಾತ್ರೆ ನಡೆಸಿದ ಭಕ್ತಾದಿಗಳು. ಮಾರ್ಗ ಮಧ್ಯದಲ್ಲಿ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ದರ್ಶನ ಪಡೆದು ಪಾದಯಾತ್ರೆ ಮುಂದುವರಿಸಿದರು. ಈ ಸಂದರ್ಭದಲ್ಲಿ ದೇವರ ನಾಮಸ್ಮರಣೆ ಭಜನೆ ದಾರಿ ಉದ್ದಕ್ಕೂ ನಡೆಸಲಾಯಿತು. ಪುರೋಹಿತ ಗುರು ಭೀಮ ಭಟ್ ಜೋಶಿ ಮಾತನಾಡಿ. ಪಾದಯಾತ್ರೆ ಮೂಲಕ ಸಮಾಜದ ಸಂಘಟನೆ ಧಾರ್ಮಿಕ ಮನೋಭಾವನೆ ಹಾಗೂ ಗುಣಮಟ್ಟದ ಸಂಸ್ಕಾರಗಳನ್ನು ಬೆಳೆಸಿಕೊಳ್ಳಲು ಅತ್ಯಂತ ಸಹಕಾರಿಯಾಗಿದೆ. ಪ್ರತಿ ವರ್ಷ ಮಂತ್ರಾಲಯ ಮಠ. ವೆಂಕಟಗಿರಿಯ ಶ್ರೀ ವೆಂಕಟೇಶ್ವರ ದೇವಸ್ಥಾನ. ಸೇರಿದಂತೆ ನವಲಿಯ ಶ್ರೀ ಭೋಗಾಪುರೇಶ್ವರ ದೇವಸ್ಥಾನಕ್ಕೆ ಸಮಾಜದ ಅಧ್ಯಕ್ಷ ದರೋಜಿ ನಾಗರಾಜ ಶ್ರೇಷ್ಟಿ ನೇತ್ರದಲ್ಲಿ ಪಾದಯಾತ್ರೆ ಹಮ್ಮಿ ಕೊಳಲಾಗಿದೆ ಎಂದು ಹೇಳಿದರು.ಪಾದಯಾತ್ರೆಯಲ್ಲಿ ಆರ್ಯವೈಶ್ಯ ಸಮಾಜದ ಮುಖಂಡರಾದ ದರೋಜಿ ವೆಂಕಟೇಶ. ನವ ಬೃಂದಾವನ ಭಜನಾ ಮಂಡಳಿ ಅಧ್ಯಕ್ಷರಾದ ದರೋಜಿ ನರಸಿಂಹ ಶ್ರೇಷ್ಟಿ .ಬೆನ್ನೂರು ಪ್ರಹ್ಲಾದ. ಗುಡಿಕೋಟಿ ನಾಗರಾಜ. ವಿಜಯ. ಚಂದ್ರಶೇಖರ ಹಣವಾಳ. ಶಂಭುಲಿಂಗ. ಜಿ ಆರ್ ಎಸ್ ಸತ್ಯನಾರಾಯಣ. ಗುಂಡೂರು ಪ್ರಹ್ಲಾದ ಸೇರಿದಂತೆ ವಾಸವಿಯುವಜನ ಸಂಘದ ಸದಸ್ಯರು ವಾಸವಿ ಮಹಿಳಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.