Unresponsive to members! Kavalur Gram Panchayat Development Officer: Allegations of members
ವರದಿ : ಪಂಚಯ್ಯ ಹಿರೇಮಠ
ಕೊಪ್ಪಳ : ತಾಲೂಕಿನ ಕವಲೂರು ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಸುಮಾರು ತಿಂಗಳುಗಳಿಂದ ಇಲ್ಲಿಯವರೆಗೆ ಗ್ರಾಮ ಪಂಚಾಯತಿ ಸಭೆ ನಡೆಸದೇ ನಿರ್ಲಕ್ಷಿಸಿ ಕುಂಟುನೆಪ ಹೇಳುತ್ತಾ ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ ಎಂದು ಕವಲೂರು ಗ್ರಾಮ ಪಂಚಾಯತಿ ಸದಸ್ಯರು ಆರೋಪಿಸಿ ತಾಲೂಕ ಕಾರ್ಯ ನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಕೊಪ್ಪಳ ತಾಲೂಕಿನ ಕವಲೂರು ಗ್ರಾಮ ಪಂಚಾಯತಿಯ ಸಭೆ ನಡೆಸಲು ಅಭಿವೃದ್ದಿ ಅಧಿಕಾರಿಗಳು ಹಿಂದೇಟು ಹಾಕುತ್ತಿರುವದನ್ನು ನೋಡಿದರೇ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೋಡುತ್ತದೆ ಎನ್ನುವುದು ಸದಸ್ಯರ ಆರೋಪವಾಗಿದ್ದು ಇದನ್ನು ಸದಸ್ಯರು ಖಂಡಿಸಿದರು.
ಈ ಕುರಿತು ಸದಸ್ಯರು ಮಾಧ್ಯಮದೊಂದಿಗೆ ಮಾತನಾಡಿ ನಾವು ಸಭೆಯಲ್ಲಿ ಗ್ರಾಮದ ಅಭಿವೃದ್ದಿ ಕುರಿತು ಹಲವಾರು ವಿಷಯಗಳ ಬಗ್ಗೆ ಚರ್ಚಿಸುವದಿದೇ, ಬಾಡಿ ಮೀಟಿಂಗ್ ಕರೆಯಿರಿ ಎಂದು ಹೇಳಿದರು ಸಭೆ ಕರೆಯುತ್ತಿಲ್ಲಾ, ಅಂದರೆ ಸದಸ್ಯರ ಮಾತಿಗೆ ಬೆಲೆಯೇ ಇಲ್ಲದಂತೆ ಪಿಡಿಒ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು ಇಲ್ಲಿಯವರೆಗೆ ಪಂಚಾಯತಿಯ ಯಾವ ಲೆಕ್ಕ ಪತ್ರದ ಬಗ್ಗೆಯು ಸದಸ್ಯರ ಗಮನಕ್ಕೆ ತಂದಿಲ್ಲಾ ಜೊತೆಗೆ ಪಂಚಾಯತಿಯ ಪಾಸ್ ಬುಕ್ ಬಗ್ಗೆಯು ಮಾಹಿತಿ ನೀಡುತ್ತಿಲ್ಲಾ ಎಂದು ಹೇಳಿದರು.
15ನೇ ಹಣಕಾಸು ಯೋಜನೆಯಲ್ಲಿ ಯಾವ ಕಾಮಗಾರಿಗಳನ್ನು ಕೈಗೊಂಡರು ಏನು ಎನ್ನುವ ಕುರಿತು ಮತ್ತು ಅದರ ಲೆಕ್ಕ ಪತ್ರದ ಮಾಹಿತಿ ನೀಡಿಲ್ಲಾ ಹಾಗೂ ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಸೋಲಾರ ಅಳವಡಿಕೆ ನಡೆಯುತ್ತಿದ್ದು ಎನ್ಓಸಿ ನೀಡಿ ಪ್ರಗತಿಗೆ ನಿಂತಿರುವುದು ಕುರಿತು ನಮಗೆ ಮಾಹಿತಿಯು ಇಲ್ಲಾ ಈ ರೀತಿಯಾಗಿ ಪಂಚಾಯತಿಯಲ್ಲಿ ಏಕ ಪಕ್ಷಿಯ ನಿರ್ಧಾರ ಮಾಡಿದರೇ ಗ್ರಾಮ ಪಂಚಾಯತಿಗೆ ಸದಸ್ಯರು ಯಾಕೇ ಬೇಕು,,? ಎಂದು ಪ್ರಶ್ನಿಸಿದರು. ಇದು ಇದೇ ರೀತಿಯಾಗಿ ಮುಂದೊರೆದಲ್ಲಿ ಅನಿವಾರ್ಯವಾಗಿ ಮೇಲಾಧಿಕಾರಿಗಳ ಗಮನಕ್ಕೆ ತರವ ಮೂಲಕ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಬೇಡಿಕೆಗಳು : ಕೂಡಲೇ ಗ್ರಾಮ ಪಂಚಾಯತಿ ಸಭೆ ಕರೆಯಬೇಕು. ಗ್ರಾಮ ಪಂಚಾಯತಿ 15 ನೇ ಹಣಕಾಸು ಯೋಜನೆ ಸಂಪೂರ್ಣ ಮಾಹಿತಿ ಒದಗಿಸಬೇಕು, ಸೋಲಾರ ಅಳವಡಿಕೆ ಕುರಿತು ಮಾಹಿತಿ ಒದಗಿಸಬೇಕು ಹಾಗೂ ಪ್ರತಿ ತಿಂಗಳು ಸದಸ್ಯರ ಸಭೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತಂತೆ ಕೊಪ್ಪಳ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಅನ್ನಪೂರ್ಣ, ಸದಸ್ಯರಾದ ಪ್ರದೀಪ ಕುಮಾರ, ಶರಣಪ್ಪ ಬ.ಯರಾಶಿ, ಶಾಂತವ್ವ ಇನ್ನೀತರರು ಇದ್ದರು.