Breaking News

ಶರಣಪ್ಪ ತೀರ್ಥಭಾವಿ ಕೆ.ಹೊಸಹಳ್ಳಿ ಇವರಿಗೆ ಕಾವ್ಯ ಶ್ರೀ ಸೇವಾ ಟ್ರಸ್ಟ್ ನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ

Sharanappa Theerthabhavi K. Hosahalli was awarded the State Level Best Teacher Award by Kavya Sri Seva Trust.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಕಾವ್ಯಾಶ್ರೀ ಸೇವಾ ಟ್ರಸ್ಟ್ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಮತ್ತು ಸಾಂಸ್ಕೃತಿಕ ಹಾಗೂ ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ
ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶರಣಪ್ಪ ತೀರ್ಥಭಾವಿ ಅವರ ಶಿಕ್ಷಣ,ಪರಿಸರ ಕಾಳಜಿ,ಹಾಗೂ ಸಾಮಾಜಿಕ ಸೇವೆ ಗುರುತಿಸಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.ಇವರ ಜೊತೆಗೆ ತಿಮ್ಮರಡ್ಡಿ ಬ್ಯಾಲಿಹಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮದ್ಯಕ್ಯಾಂಪ್ (ಸಿಂಧನೂರು) ಹಾಗೂ ಬಾಳಪ್ಪ ಗಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಡಗೋಳ (ಸಿಂಧನೂರು) ಇವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಿ.ಕೆ.ನಾರಾಯಣ ಸ್ವಾಮಿ ನಿಕಟ ಪೂರ್ವ ಅಧ್ಯಕ್ಷರು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ನಿಯಮಿತ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕರ್ನಾಟಕ ಸರ್ಕಾರ ಅವರು ವಹಿಸಿದ್ದರು.ಕಾವ್ಯ ಶ್ರೀ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಕಾವ್ಯಾ ಶ್ರೀ,ಮುಖ್ಯ ಅತಿಥಿಗಳಾಗಿ ಕೆ.ಪೂರ್ಣೀಮಾ ಶ್ರೀನಿವಾಸ ಮಾಜಿ ಶಾಸಕರು ಹಿರಿಯೂರು ವಿಧಾನಸಭಾ ಕ್ಷೇತ್ರ,ಸಿದ್ದಪ್ಪ ಪೂಜಾರ ಜಗಳೂರು ತಾಲೂಕ ಡಾ.ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷರು,ಶ್ರೀಮತಿ ನಂದಿನಿ ಕೆ ಕ್ಯಾತ ಯೂಟೂಬರ್ ಬೆಂಗಳೂರು,ಶ್ರೀ ಎನ್ ಆರ್ ರಾಯಭಾಗಿ ಡಾ.ರಾಜ್ ಸಂಜೆ ಮತ್ತು ಭರತ ನಾಟ್ಯ ಜಾನಪದ ನೃತ್ಯ ಕಲಾರತ್ನ ಪ್ರಶಸ್ತಿ,ಶ್ರೀ ತಿಮ್ಮೇಗೌಡ ಬಸವನಗುಡಿ ಜೇ.ಡಿ.ಎಸ್ ಮುಖಂಡರು ಮಾಜಿ ಬಿ.ಬಿ.ಎಂ.ಪಿ.ಸದಸ್ಯರು, ಅಯ್ಯಪ್ಪ ನಾಯಕ ಅಧ್ಯಕ್ಷರು ತಾಲೂಕ ಅತಿಥಿ ಶಿಕ್ಷಕರ ಸಂಘ ಸಿಂಧನೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *