Breaking News

ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಮಹಿಳಾ ಒಕ್ಕೂಟ


The women’s union took the authorities to task

ಜಾಹೀರಾತು

( ಉತ್ತಮ ರಸ್ತೆಗಳಿಗೆ ಯಲಬುರ್ಗಾ ಕ್ಷೇತ್ರ ಮಾದರಿ : ಶಮೀನಾ ಬಾನು )

ವರದಿ : ಪಂಚಯ್ಯ ಹಿರೇಮಠ,,

ಕೊಪ್ಪಳ : ಕೊಪ್ಪಳ ತಾಲ್ಲೂಕಿನ ಕವಲೂರನಲ್ಲಿ ಮಂಗಳವಾರದಂದು ನಡೆದ ಪ್ರತಿಭಟನೆಗೆ ಪಿಡಬ್ಲ್ಯೂಡಿ ಇಲಾಖೆ ವೆಂಕಟೇಶ ಆಗಮಿಸಿ ಪ್ರತಿಭಟನಾ ನಿರತರಿಗೆ ತಿಳಿಸಿ ಮಾತನಾಡಿ ಶೀಘ್ರದಲ್ಲಿಯೇ ಪ್ರತಿಯೊಂದು ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿ ಕೇಲವೇ ದಿನಗಳಲ್ಲಿ ರಸ್ತೆ ದುರಸ್ಥಿಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ದಿ ನಿಗಮದ ಅನುದಾನದಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಿಸಲು ಮುಂದಾಗುತ್ತೇವೆ ಎಂದು ಮನವೊಲಿಸಿದರು ಜಗ್ಗದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಬರುವವರೆಗೆ ಹೋರಾಟ ನಿರಂತರ ಎಂದು ತಿಳಿಸಿದರು.

ನಂತರದಲ್ಲಿ ಒಕ್ಕೂಟದ ಸದಸ್ಯೆ ಶಮೀನಾಭಾನು ಮಕಾಂದರ ಮಾತನಾಡಿ ಅಲ್ಲ ಸರ್ ನಮ್ಮ ಪಕ್ಕದ ಯಲಬುರ್ಗಾ ಕ್ಷೇತ್ರಕ್ಕೆ ಅನುದಾನ ಬರುತ್ತೆ, ನಮ್ಮ ಕ್ಷೇತ್ರಕ್ಕೆ 15ವರ್ಷಗಳಿಂದ ಅನುದಾನವೇ ಬಂದಿಲ್ಲವೇ ಎಂದು ಪ್ರಶ್ನೀಸಿದರು.

ಯಲಬುರ್ಗಾ ಕ್ಷೇತ್ರದ ಶಾಸಕರಾದ ರಾಯರಡ್ಡಿಯವರು ಅವರ ಕ್ಷೇತ್ರದ ರಸ್ತೆಗಳನ್ನು ಎಷ್ಟು ಅಭಿವೃದ್ಧಿ ಮಾಡಿದ್ದಾರೆ ನೋಡಿ ಎಂದರು. ಯಲಬುರ್ಗಾ ಕ್ಷೇತ್ರದ ಪ್ರತಿಯೊಂದು ಗ್ರಾಮದ ರಸ್ತೆಗಳು ರಾಜ್ಯಕ್ಕೆ ಮಾದರಿ ಗ್ರಾಮದ ರಸ್ತೆಗಳಾಗಿವೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಕೊಪ್ಪಳ ತಾಲೂಕ ದಂಡಾಧಿಕಾರಿ ವಿಠಲ ಚೌಗಲ್ ಆಗಮಿಸಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ ಬನ್ನಿಕೊಪ್ಪ ರಸ್ತೆಗೆ ಅನುದಾನ ಬಂದಿದ್ದು ಶೀಘ್ರದಲ್ಲಿಯೇ ರಸ್ತೆ ಸುಧಾರಣೆ ಮಾಡಿಕೊಡುತ್ತೇವೆ.

ಜೊತೆಗೆ ವಿವಿಧ ರಸ್ತೆಗಳಿಗೆ ಈಗಿರುವ ತಗ್ಗು, ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಕೊಡುತ್ತೇವೆ. ಅನುದಾನ ಬಂದ ನಂತರ ಇನ್ನೇರಡು ತಿಂಗಳಲ್ಲಿ ವಿವಿಧ ರಸ್ತೆಗಳನ್ನು ದುರಸ್ಥಿ ಮಾಡಿಕೊಡುತ್ತೇವೆ ಎಂದು ಹೇಳಿ ಗ್ರಾಮದ ಮುಖಂಡರಾದ ಪ್ರದೀಪಗೌಡ ಇವರ ಮೂಲಕ ಭರವಸೆ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ತಿಳಿಸಿದರು. ನಂತರದಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.

ಈ ಸಂದರ್ಭದಲ್ಲಿ ಗಂಗಮ್ಮ ಸಿಂದೋಗಿ, ಶೋಭಾ ಬಿಳಗಿ, ರೇಣುಕಾ ಜೋಗಿನ, ರತ್ನಾ ಗುಟಗನೂರ, ಶೋಭಾ ಅಲ್ಲಿಪುರ, ಶಿಲ್ಪಾ ಗುಡಿ, ನೇತ್ರಾ ಗೌರವಾಡ,ಸವಿತಾ ತಳಕಲ್, ಶೈಲಾ ಬಬಲಿ ಹಾಗೂ ಹಿರಿಯರು ಮುಖಂಡರು ಮಹಿಳಾ ಪದಾಧಿಕಾರಿಗಳು ಇದ್ದರು.

About Mallikarjun

Check Also

ಎರಡು ತಿಂಗಳ ಅನಾಥ ಮಗುವನ್ನು ರಕ್ಷಿಸಿ ನಿಯಮಾನುಸಾರ ಇಲಾಖೆಗೆ ಒಪ್ಪಿಸಿದ ಕಾರುಣ್ಯಾಶ್ರಮ.

Karunyashram rescued a two-month-old orphan and handed it over to the department as per rules. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.