Breaking News

ಗೋರ್ಕಲ್ ಗ್ರಾಮದಲ್ಲಿ ಅಂತರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿಯಲ್ಲಿ ಕ್ಷೇತ್ರೋತ್ಸವ

Field Festival under International Food Security Project in Gorkal village

ಜಾಹೀರಾತು
IMG 20240928 WA0092

ಮಾನ್ವಿ: ತಾಲೂಕಿನ ಗೋರ್ಕಲ್ ಗ್ರಾಮದಲ್ಲಿನ ರೈತ ಪರಮೇಶಪ್ಪ ರವರ ಜಮೀನಿನಲ್ಲಿ ತಾಲೂಕು ಕೃಷಿ ಇಲಾಖೆ ಹಾಗೂ ಕುರ್ಡಿ ರೈತ ಸಂಪರ್ಕ ಕೇಂದ್ರ ವತಿಯಿಂದ ೨೦೨೪-೨೫ ನೇ ಸಾಲಿನ ಅಂತರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿಯಲ್ಲಿ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಕುರ್ಡಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಡಾ.ಶಿವಶಂಕರ್ ಮಾತನಾಡಿ ರೈತರು ಸುಧಾರಿತ ಕೃಷಿಯನ್ನು ಕೈಗೊಂಡಾಗ ಮಾತ್ರ ಕೃಷಿ ವೆಚ್ಚದಲ್ಲಿ ಉಳಿತಾಯವಾಗುವುದಕ್ಕೆ ಸಾಧ್ಯ ಕಡಿಮೆ ಖರ್ಚಿನಲ್ಲಿ ರೈತರು ಅಧಿಕಾ ಇಳುವರಿಯನ್ನು ಪಡೆದು ಕೃಷಿಯನ್ನು ಲಾಭದಯಾಕವನ್ನಾಗಿಸಿಕೊಳ್ಳುವುದಕ್ಕೆ ರೈತರು ಬಿತ್ತನೆಗೆ ಪೂರ್ವದಲ್ಲಿ ಬಿತ್ತನೆ ಬೀಜಗಳನ್ನು ಟ್ರೆöÊಕೋಡರ್ಮ ಜೈವೀಕ ಶಿಲೀಂದ್ರ ನಾಶಕವನ್ನು ಬಳಸಿ ಬಿಜೋಪಚಾರ ಮಾಡಿದಲ್ಲಿ ಬೆಳೆಗೆ ರೋಗಭಾದೆ ಬರದಂತೆ ತಡೆಯಬಹುದು. ಬೆಳೆಗಳಿಗೆ ಬೇವು ಆಧಾರಿತ ಕೀಟಾನಾಶಕಗಳನ್ನು ಪ್ರಾರಂಭದಲ್ಲಿಯೇ ಬಳಸಿದಲ್ಲಿ ಕಡಿಮೆ ಕರ್ಚಿನಲ್ಲಿ ಕೀಟಗಳನ್ನು ಸಮಗ್ರವಾಗಿ ಹತೋಟಿ ಮಾಡಬಹುದು ಭೂಮಿ ಸಿದ್ದತೆ ಮಾಡಿಕೊಳ್ಳುವ ಸಮಯದಲ್ಲಿ ಅಗತ್ಯ ಪ್ರಮಾಣದಲ್ಲಿ ಕೋಟಿಗೆ ಗೋಬ್ಬರ,ಎರೆಹುಳಗೋಬ್ಬರ ,ಸೀಮೆ ಗೋಬ್ಬರ, ಜೈವಿಕ ಗೋಬ್ಬರಗಳನ್ನು ನೀಡಿದಲ್ಲಿ ಭೂಮಿಯ ಫಲವತ್ತತೆ ಹೆಚ್ಚಿ ಸಸಿಗಳಿಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ದೊರೆಯುತ್ತವೆ. ರೈತರು ಬೆಳೆ ಪ್ರಾರಂಭದ ಹಂತದಿಂದಲು ಕೃಷಿ ಅಧಿಕಾರಿಗಳಿಂದ ಕೃಷಿ ಬಗ್ಗೆ ಮಾಹಿತಿ ಪಡೆದು ಕೃಷಿ ಇಲಾಖೆಯಿಂದ ದೊರೆಯುವ ಬಿತ್ತನೆ ಬೀಜ,ಔಷಾಧಿಗಳನ್ನು ಸಹಾಯಧಾನದಲ್ಲಿ ಪಡೆದುಕೊಂಡು ಬಳಸಿದಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿಯನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತರಿಗೆ ವಿವಿಧ ಬೀತ್ತನೆ ಬೀಜಗಳನ್ನು ಬಿಜೋಪಚಾರ ಮಾಡುವ ಕುರಿತು ಹಾಗೂ ಹತ್ತಿ,ಸಜ್ಜೆ,ತೋಗರಿ,ಬೆಳೆಗಳಲ್ಲಿರೋಗ,ಕೀಟಗಳ ಹತ್ತೋಟಿ ಹಾಗೂ ರಸಗೋಬ್ಬರಗಳ ಬಳಕೆ ಹಾಗೂ ಕೋಯ್ಲು ಮಾಡುವ ಸಮಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಮಾಹಿತಿ ನೀಡಲಾಯಿತು.
ರೈತರಿಗೆ ಕೃಷಿ ಇಲಾಖೆ ವತಿಯಿಂದ ಟ್ರೆöÊಕೋಡರ್ಮ ಜೈವೀಕ ಶಿಲೀಂದ್ರ ನಾಶಕ,ಬೇವು ಅಧಾರಿತ ಕೀಟನಾಶಕ,ಸೂಕ್ಷö್ಮ ಪೋಷಕಾಂಶಗಳ ಔಷಾಧಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರೈತರಾದ ಬಸವರಾಜಗಟ್ಟು,ನರಸಿಂಹಲು ಛಲವಾದಿ,ಮೆಹಬೂಬ್ ಬೇಗ್,ಜೈನುದಿನ್, ಮೌಲಸಾಬ್,ಮಲ್ಲೇಶ,ರಾಜ,ಗೂಳೆಪ್ಪ,ನರಸಪ್ಪ ಸೇರಿದಂತೆ ಇನ್ನಿತರರು ಇದ್ದರು.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.