Street traders take advantage of PM scheme: Kalesh
ವರದಿ : ಪಂಚಯ್ಯ ಹಿರೇಮಠ,,,
ಕೊಪ್ಪಳ : ಬೀದಿ ಬದಿ ವ್ಯಾಪಾರಸ್ಥರಿಗೆ ದೀನ ದಯಾಳು ಯೋಜನೆಯಡಿಯಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು ಪ್ರತಿಯೋಬ್ಬ ವ್ಯಾಪಾರಸ್ಥರು ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ವ್ಯಾಪಾರ, ಉದ್ಯೋಗಗಳನ್ನು ಉನ್ನತಿಕರಿಸಲು ಮುಂದಾಗಬೇಕು ಎಂದು ಜಿಲ್ಲಾ ಕೌಶಲ್ಯಭಿವೃದ್ದಿ ಅಭಿಯಾನ ವ್ಯವಸ್ಥಾಪಕ ಅಹ್ಮದ್ ಹುಸೇನ್ ಹೇಳಿದರು.
ಗುರುವಾರದಂದು ಪಟ್ಟಣ ಪಂಚಾಯತಿಯಲ್ಲಿ ಜಿಲ್ಲಾಳಿತ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಕೊಪ್ಪಳ ಇವರ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.
ವ್ಯಾಪಾರಸ್ಥರಿಗೆ ಸ್ವನಿಧಿಯಿಂದ ವಿವಿಧ ಯೋಜನೆಗಳಾದ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ, ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ, ಒಂದು ರಾಷ್ಟ್ರ ಒಂದು ಪಡಿತರ ಚೀಟಿ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ, ಬಿ ಓ ಸಿ ಡಬ್ಲ್ಯೂ, ಪ್ರಧಾನ ಮಂತ್ರಿ ಜನನಿ ಸುರಕ್ಷಾ ಯೋಜನೆ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಗಳನ್ನು ವ್ಯಾಪಾರಸ್ಥರ ಕಲ್ಯಾಣಕ್ಕೆ ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ಬ್ಯಾಂಕ್ ಖಾತೆ, ಆಧಾರ, ಚುನಾವಣಾ ಗುರುತಿನ ಚೀಟಿ, ರೇಷನ್ ಕಾರ್ಡ್ ವಿವಿಧ ಉದ್ಯೋಗಕ್ಕೆ ಸಂಬಂಧಿಸಿದ ದಾಖಲಾತಿ ನೀಡಿ ಮೊದಲ ಕಂತು 10ಸಾವಿರ, ಎರಡನೇ ಕಂತು 20 ಸಾವಿರ, ಮೂರನೇ ಕಂತು 50ಸಾವಿರ ಪಡೆಯಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ ಪಟ್ಟಣ ಪಂಚಾಯತಿಯನ್ನು ಸಂಪರ್ಕಿಸಿ ಎಂದು ತಿಳಿಸಿದರು.
ನಂತರದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ ಮಾತನಾಡಿ ಬೀದಿ ಬದಿ ವ್ಯಾಪಾರಸ್ಥರು ತಮ್ಮ ವ್ಯಾಪಾರ ವಹಿವಾಟನ್ನು ಉನ್ನತಿಕರಿಸಲು ಪಿಎಂ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆದು ಉದ್ಯೋಗಗಳನ್ನು ಉನ್ನತಿಕರಿಸಿಕೊಳ್ಳುವ ಮೂಲಕ ಸ್ವನಿಧಿ ಸಮೃದ್ದಿ ಶಿಬಿರದಿಂದ ಯೋಜನೆ ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಲಲಿತಮ್ಮ ಯಡಿಯಾಪೂರ, ಉಪಾಧ್ಯಕ್ಷ ಪ್ರಶಾಂತ ಆರುಬೆರಳಿನ, ಪಟ್ಟಣ ಪಂಚಾಯತಿ ಸದಸ್ಯಾರದ ಗಗನ ನೋಟಗಾರ, ಶಿವರಾಜ ಯಲ್ಲಪ್ಪಗೌಡ್ರ, ಮುಖ್ಯಾಧಿಕಾರಿ ರವಿಂದ್ರ ಬಾಗಲಕೋಟ, ಸಮುದಾಯ ಸಂಘಟನಾಧಿಕಾರಿ ಶಿವಕುಮಾರ ಕಟ್ಟಿಮನಿ ಹಾಗೂ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಕಲ್ಲಪ್ಪ ಮರಡಿ ಸೇರಿದಂತೆ ನೂರಾರು ವ್ಯಾಪಾರಸ್ಥರು ಹಾಜರಿದ್ದರು.ವರದಿ : ಪಂಚಯ್ಯ ಹಿರೇಮಠ,,,