Officers have a big role in the development of the constituency in the KDP meeting: M R Manjunath, MLA.
ವರದಿ : ಬಂಗಾರಪ್ಪ ಸಿ .
ಹನೂರು : ವಿಧಾನಸಭಾ ಕ್ಷೇತ್ರದ ಸರ್ವಾಂಗಣ ಅಭಿವೃದ್ದಿಗೆ ಅಧಿಕಾರಿಗಳ ಸಹಕಾರ ಅತ್ಯಗತ್ಯ ನಿಮ್ಮಗಳ ಶ್ರಮದ ಮೇಲೆ ಅಭಿವೃದ್ಧಿಯಾಗಬೇಕಿದೆ ,
ಸಮಯವನ್ನು ವ್ಯರ್ಥ ಮಾಡದೆ ಎಲ್ಲಾರು ಶ್ರಮಿಸೋಣವೆಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ನೂತನ ತಾಲ್ಲೂಕು ಕೇಂದ್ರ ಸೇರಿದಂತೆ ಅನೇಕ ಕಾಮಗಾರಿಗಳು ತುರ್ತಾಗಿ ಮಾಡಬೇಕಿದೆ ,ಸಮಯ ತೆಗೆದುಕೊಳ್ಳವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು. ತೋಟಗಾರಿಕೆಯ ಅಧಿಕಾರಿಗಳ ಜೊತೆಯಲ್ಲಿ ಮಾತನಾಡುತ್ತ
ರಾಷ್ಟ್ರೀಯ ತೋಟಗಾರಿಕೆಯ ಮಿಸನ್ ಯೋಜನೆಯಡಿಯಲ್ಲಿಯು ಸಹ ಅನುದಾನ ಬರುತ್ತದೆ ನಿಮ್ಮ ಇಲಾಖೆಯವರು ಕೇವಲ ದಾಖಲೆಯನ್ನು ಮಾತ್ರ ತೋರಿಸಲು ನಿಸ್ಸಿಮರು ಎಂದು ತಿಳಿಸಿದರು.
ಜಿ.ಪಂ. ಉಪ ಕಾರ್ಯದರ್ಶಿ ಹಾಗೂ ಆಡಳಿತ ಅಧಿಕಾರಿ ಲಕ್ಷ್ಮಿ ಮಾತನಾಡಿ ಶಾಸಕರು ಪ್ರಮುಖವಾಗಿ ಪ್ರಸ್ತಾಪಿಸಲಾಗಿರುವ ವಿಷಯಗಳು ಬಗ್ಗೆ ಅಧಿಕಾರಿಗಳು ಅತಿ ಜರೂರಾಗಿ ಕ್ರಮ ವಹಿಸಬೇಕು. ಇಲ್ಲಿ ಚರ್ಚಿಸಿದ ವಿಷಯಗಳು ಸರ್ಕಾರಕ್ಕೆ ವರದಿ ನೀಡಲಾಗುತ್ತದೆ. ಆಗಾಗಿ ಮುಂದಿನ ಸಭೆ ವರೆಗೂ ಸಾಧ್ಯವಾದಷ್ಟು ಸಮಸ್ಯೆಗಳು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ನಿಮ್ಮ ಯಾವುದೇ ಗೊಂದಲ ಸಮಸ್ಯೆಗಳಿದ್ದರೆ ನಮಗೆ ತಿಳಿಸಿ ನಾವು ಸದಾ ನಿಮ್ಮ ಸಹಕಾರಕ್ಕೆ ಇರುತ್ತೇವೆ ಎಂದರು.ಸಭೆಯಲ್ಲಿ ಜಲ ಜೀವನ್ ಮಿಷನ್ ಕಾಮಾಗಾರಿ ಅಪೂರ್ಣತೆ ಬಗ್ಗೆ ಆರೋಪಗಳು ಕೇಳಿ ಬಂದಿದ್ದು ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ,ಮುಂದಿನ ಸಭೆ ಒಳಗಡೆ ಇರುವ ಸಮಸ್ಯೆಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಜೆಇ ಪೂರ್ಣಿಮಾ ರವರಿಗೆ ಎಚ್ಚರಿಕೆ ನೀಡಿದರು.
ಗಿರಿಜನರಿಗೆ ನೀಡಲಾಗುತ್ತಿರುವ ಗುಣಮಟ್ಟದ ಪೌಷ್ಠಿಕ ಆಹಾರ ಮಾರಾಟ ಮಾಡುತ್ತಿರುವವರ ಜೊತೆಗೆ ಕೊಂಡುಕೊಳ್ಳುವವರ ವಿರುದ್ಧ ಕ್ರಮ ಜರುಗಿಸಿದರೆ ಈ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಬಹುದು ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಬೇಕು ಆಶ್ರಮ ಶಾಲೆಗಳಲ್ಲಿ ಮಕ್ಕಳು ಗೈರು ಆಗಲು ಕಾರಣ ಹುಡುಕಿ ಸಮಸ್ಯೆ ಮರು ಕಳುಹಿಸದಂತೆ ಕ್ರಮ ಕೈಗೊಳ್ಳಬೇಕು. ಎಂದು ಶಾಸಕ ಎಂ.ಆರ್ ಮಂಜುನಾಥ್ ಸಲಹೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಶಿಕ್ಷಕರ ಕೊರತೆ ಇದ್ದು 130 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಉಳಿದಂತೆ ಖಾಯಂ ಶಿಕ್ಷಕರು ಇಲ್ಲದ ಶಾಲೆಗಳಿಗೆ ಹತ್ತಿರ ಶಾಲೆಯ ಶಿಕ್ಷಕರನ್ನು ವಾರದಲ್ಲಿ ಮೂರು ದಿನ ಕರ್ತವ್ಯ ನಿರ್ವಹಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಬಿ.ಒ ಗುರುಲಿಂಗಯ್ಯ ಮಾಹಿತಿ ನೀಡಿದರು.
ತಾಲ್ಲೂಕಿನ ಕುರಟ್ಟಿ ಹೊಸೂರು ಕೂಡ್ಲುರು ರಾಮಾಪುರ ಶಾಲೆಗಳನ್ನು ಕೆ.ಪಿ.ಎಸ್. ಶಾಲೆಗಳಾಗಿ ಮೇಲ್ದರ್ಜೆಗೆ ಏರಿಸಲು ಪ್ರಸ್ತಾವಣೆ ಸಲ್ಲಿಸಲಾಗಿದೆ. ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತೋರಲು 10 ನೇ ತರಗತಿ ಜೊತೆಗೆ 8, 9 ನೇ ತರಗತಿಗಳಿಗೂ ಶಾಲೆ ಅವಧಿ ಬಳಿಕ ವಿಶೇಷ ತರಗತಿ ನಡೆಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮೊದಲು ನೀವು
ವಿಶೇಷ ಕ್ಲಾಸ್ ಟೀಚರುಗಳಾಗಬೇಕು:
ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದ ಜಿ.ಪಂ.ಆಡಳಿತ ಅಧಿಕಾರಿಗಳು ನಾನು 9 ವರ್ಷ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಶಾಲಾ ಅವಧಿ ಮುಗಿದ ಬಳಿಕ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಮಾಡುವುದಕ್ಕಿಂತ ಮಕ್ಕಳು ಯಾವ ಭಾಷೆಯಲ್ಲಿ ಹಿಂದುಳಿದಿದ್ದಾರೆ ಎಂಬುದನ್ನು ಅರಿತು ಆಯಾ ಶಿಕ್ಷಕರಿಗೆ ಹೆಚ್ಚಿನ ತರಬೇತಿ ನೀಡುವುದರಿಂದ ಉತ್ತಮ ಫಲಿತಾಂಶ ಬರುತ್ತದೆ ಎಂದು ಸಲಹೆ ನೀಡಿದರು.
ಕಂದಾಯ ಇಲಾಖೆಯಲ್ಲಿ ಅನೇಕ ಸಮಸ್ಯೆಗಳಿದ್ದು ರೈತರು ನೇರವಾಗಿ ಹೋದರೆ ಕೆಲಸ ಆಗುತ್ತಿಲ್ಲ ದಲ್ಲಾಳಿಗಳ ಮೂಲಕ ಹೋದರೆ ಕಗಲಸ ಆಗುತ್ತದೆ. ಎಂಬ ಮಾತು ಸಾಮಾನ್ಯವಾಗಿದೆ ದಾಖಲೆಗಳನ್ನು ಪಡೆಯಬೇಕಾದರೆ ಹಣ ನೀಡಿದರೆ ಮಾತ್ರ ಸಿಗುತ್ತದೆ ಎಂಬ ಭಾವನೆ ಬಂದಿದೆ ಅನೇಕ ಗ್ರಾಮಗಳಲ್ಲಿ ಇನ್ನೂ ಪಿಂಚಣಿ ಸಮಸ್ಯೆ ಸೇರಿದಂತೆ ಇನ್ನಿತರೆ ಸಮಸ್ಯೆಗಳು ಕೇಳಿ ಬರುತ್ತಿದೆ ಗ್ರಾಮ ಲೆಕ್ಕಿಗರು ಏನೂ ಮಾಡುತ್ತಿದ್ದಾರೆ ಪಿಂಚಣಿ ಸೌಲಭ್ಯ ದೊರಕದೆ ಇರುವವರಿಗೆ ಪಿಂಚಣಿ ಸೌಲಭ್ಯ ಕೊಡಲು ಏಕೆ ಸಾಧ್ಯವಾಗುತ್ತಿಲ್ಲ. ಕಂದಾಯ ಇಲಾಖೆ ವಿ.ಎ. ಮತ್ತು ಆರ್.ಐ ಕಛೇರಿ ಸಿಬ್ಬಂದಿಗಳ ಸಭೆಯನ್ನು ಪ್ರತ್ಯೇಕವಾಗಿ ನಡೆಸುತ್ತೇನೆ ಎಂದು ಶಾಸಕರು ತಹಸೀಲ್ದಾರ್ ಅವರಿಗೆ ಸಮಯ ನಿಗಧಿ ಪಡಿಸುವಂತೆ ಸೂಚಿಸಿದರು.
ಹನೂರು ಪೊಲೀಸ್ ಇನ್ಸ್ಪೆಕ್ಟರ್ ಶಶಿಕುಮಾರ್ ನಮ್ಮ ಠಾಣೆಗೆ ಹೆಚ್ಚಾಗಿ ಜಮೀನಿನ ವ್ಯಾಜ್ಯಗಳ ಬಗ್ಗೆ ದೂರುಗಳು ಬರುತ್ತಿದೆ. ಆದರಿಂದ ಕ್ರಿಮಿನಲ್ ಕೇಸ್ ಗಳು ಅತಿ ಆಗುತ್ತಿವೆ. ಹಾಗೂ ಅಪಘಾತಗಳ ಬಗ್ಗೆ ಜನರಲ್ಲಿ ತಿಳುವಳಿಕೆ ನೀಡಲಾಗುತ್ತದೆ.ಕೆಲವೆಡೆ ಅಪಘಾತ ವಲಯ ಎಂದು ಗುರುತಿಸಲು ಅರಣ್ಯ ಇಲಾಖೆ ತೊಡಕಾಗಿದೆ. ಕಂದಾಯ ಇಲಾಖೆಯಲ್ಲಿ ಪೋಡಿ ಖಾರಾಬು ಇನ್ನಿತರ ಸರ್ಕಾರಿ ಜಮೀನುಗಳಿಗೆ ದಾಖಲೆ ನೀಡಿದ್ದಾರೆ. ಮತ್ತು ಮೂಲ ಪತ್ರಗಳು ಬೇರೆ ವ್ಯಕ್ತಿಗೆ ಸೇರಿದರೆ ಸ್ಥಳದಲ್ಲೆ ಮತ್ತೊಬ್ಬರು ಇರುವ ಪ್ರಕರಣಗಳು ಹೆಚ್ಚಾಗಿದೆ. ಇದರಿಂದ ಗಲಾಟೆಗಳು ಉಂಟಾಗಿ ಕ್ರಿಮಿನಲ್ ಪ್ರಕರಣ ದಾಖಲಾಗುತ್ತದೆ. ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಜಿ. ಪಂ. ಉಪ ಕಾರ್ಯದರ್ಶಿ ಲಕ್ಷ್ಮಿ . ತಹಸೀಲ್ದಾರ್ ಗುರುಪ್ರಸಾದ್ ತಾ. ಪಂ. ಇಓ ಉಮೇಶ್ ಎಡಿ ರವೀಂದ್ರ ರಮೇಶ್ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.