Breaking News

ಮುಡಾ ಹಗರಣ ತನಿಖೆ – ಮೂರು ಪಕ್ಷದ ನಾಯಕರಿಗೆ ಭಯ ?

Muda Scam Investigation – Three Party Leaders Are Afraid?

ಜಾಹೀರಾತು

ಮೈಸೂರು: ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಸಿಕ್ಕಿದ ಕೂಡಲೇ ಇತ್ತ ಮೂಡಾ ಹಗರಣದ ತನಿಖೆಯೂ ಚುರುಕು ಪಡೆದಿದೆ. ವಿಚಾರಣೆಯ ಚುರುಕಿಗೆ ಸಿದ್ದರಾಮಯ್ಯ ಹೆದರಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಮೈಸೂರಲ್ಲಿ ಬಹಳಷ್ಟು ರಾಜಕಾರಣಿಗಳಿಗೆ ನಡುಕ ಶುರುವಾಗಿದೆ.

ಮೂಡಾ ಹಗರಣದ ಕೇಂದ್ರ ಬಿಂದುವೇ ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಂಚಿಕೆ ಆಗಿರುವ ೫೦:೫೦ ಅನುಪಾತದ ಸೈಟ್‌ಗಳು. ಮೇಲ್ನೋಟಕ್ಕೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪರ‍್ವತಿ ಅವರಿಗೆ ಬಂದಿರುವ ೧೪ ಸೈಟ್‌ಗಳ ವಿಚಾರ ಮಾತ್ರ ಹೆಚ್ಚು ರ‍್ಚೆಯಲ್ಲಿದೆ. ಆದರೆ ಇದೇ ಅನುಪಾತದಲ್ಲಿ ೨೦೧೮ರಿಂದ ಇಲ್ಲಿಯವರೆಗೂ ಮಂಜೂರಾಗಿರುವ ಸೈಟ್‌ಗಳ ಸಂಖ್ಯೆ ಸಾವಿರ ದಾಟುತ್ತಿದೆ. ಅಲ್ಲಿಗೆ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್‌ನ ಎಲ್ಲಾ ಮುಖಂಡರು, ಜನಪ್ರತಿನಿಧಿಗಳು ಇದರಲ್ಲಿ ಪಾಲುದಾರರಾಗಿರುವುದು ಸ್ಪಷ್ಟವಾಗಿದೆ. ಇದನ್ನೂ ಓದಿ: ತಂದೆ ಮಾಡದ ತಪ್ಪಿಗೆ ಈ ರೀತಿ ಆರೋಪಕ್ಕೆ ಗುರಿಯಾಗಿದ್ದು ಬೇಸರ ತರಿಸಿದೆ: ಯತೀಂದ್ರ ಭಾವುಕ

ಸಿಎಂ ಅವರ ಕುಟುಂಬಕ್ಕೆ ೫೦:೫೦ ಅನುಪಾತದಲ್ಲಿ ಸೈಟ್ ಸಿಕ್ಕಿರುವಾಗ ತಮಗೆ ಬಂದಿರುವ ಸೈಟ್‌ಗಳಿಗೆ ಯಾವ ತೊಂದರೆಯೂ ಇಲ್ಲ ಎಂದು ಬಹಳಷ್ಟು ಜನ ಅಂದುಕೊಂಡಿದ್ದರು. ಆದರೆ ತನಿಖೆ ಸಾಗುತ್ತಿರುವ ರೀತಿ ನೋಡಿದರೆ ಇವತ್ತಲ್ಲ ನಾಳೆ ಎಲ್ಲರ ಬಂಡವಾಳಗಳು ಬಯಲಾಗಲಿದೆ.

ತನಿಖೆಯಲ್ಲಿ ಯಾರು ಯಾರು ಪ್ರಭಾವದ ಮೇಲೆ ಸೈಟ್ ಪಡೆದಿದ್ದಾರೆ. ಯಾರ ಹೆಸರಲ್ಲಿ ಯಾರು ಬೇನಾಮಿ ಆಗಿದ್ದಾರೆ ಎನ್ನುವುದು ಸ್ಪಷ್ಟವಾಗಿ ಬಿಟ್ಟರೆ ಎಲ್ಲಿ ರ‍್ಯಾದೆ ಮೂರು ಪಾಲಾಗುತ್ತೆ ಎನ್ನುವ ಭಯ ೫೦:೫೦ ಅನುಪಾತದ ಅಡಿ ಸೈಟ್ ಪಡೆದವರಲ್ಲಿ ಶುರುವಾಗಿದೆ. ರ‍್ಯಾದೆ ಜೊತೆ ಸೈಟ್‌ಗಳು ಜಪ್ತಿ ಆದರೆ ಕಥೆ ಏನು ಎನ್ನುವುದು ಬಹಳಷ್ಟು ಜನರ ಆತಂಕಕ್ಕೆ ಕಾರಣವಾಗಿದೆ.

ಒಟ್ಟಾರೆ ಮೂಡಾ ಹಗರದ ತನಿಖೆ ಜೋರಾಗುತ್ತಿದ್ದಂತೆ ಹಲವರಲ್ಲಿ ಭಯವಂತ ಶುರುವಾಗಿದೆ. ಈ ತನಿಖೆಯ ಮೂಲಕ ಮೂಡಾ ಸ್ವಚ್ಛವಾದರೆ ಸಾಕು ಎನ್ನುತ್ತಿದ್ದಾರೆ ಮೈಸೂರಿನ ಪ್ರಜ್ಞಾವಂತ ಜನರು.

About Mallikarjun

Check Also

ಕೃಷ್ಣಾಪೂರ ಡಗ್ಗಿ ಅಂಗನವಾಡಿಕೇಂದ್ರದಲ್ಲಿಪೋಷಣಾಭಿಯಾನ,ಉಡಿತುಂಬುವ ಕಾರ್ಯಕ್ಕೆ ಚಾಲನೆ

Krishnapura Daggi Anganwadi Center launched nutrition drive ಪೋಷಣಾಭಿಯಾನದ ಪರಿಣಾಮ ಅಪೌಷ್ಠಿಕತೆ ದೂರವಾಗುತ್ತಿದೆ:ಇಒ ಲಕ್ಷ್ಮಿದೇವಿ*ಕೃಷ್ಣಾಪೂರ ಡಗ್ಗಿ ಅಂಗನವಾಡಿ ಕೇಂದ್ರದಲ್ಲಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.