Breaking News

ದಲಿತ ಯುವಕ ಯಮನೂರಪ್ಪನಿಗೆ ಹೇರ್ ಕಟ್ ಮಾಡದೇ ಕತ್ತರಿಯಿಂದ ಹೊಟ್ಟೆಗೆ ಇರಿದು ಕೊಲೆಗೈದಿರುವುದು: ಅಮಾನವೀಯ ಕೃತ್ಯಮಂಜುನಾಥ ಡಗ್ಗಿ

Dalit youth Yamanurappa stabbed to death without a haircut: an inhuman act
Manjunath Daggi

ಜಾಹೀರಾತು

ಗಂಗಾವತಿ: ಆಗಸ್ಟ್-೧೭ ರಂದು ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ದಲಿತ ಯುವಕ ಯಮನೂರಪ್ಪ ಬಂಡಿಹಾಳ ಎಂಬ ಯುವಕ ಹೇರ್ ಕಟಿಂಗ್‌ಗೆ ಹೋದಾಗ ಹೇರ್ ಕಟ್ ಮಾಡಲು ನಿರಾಕರಿಸಿ, ಯುವಕನ ಹೊಟ್ಟೆಗೆ ಕತ್ತರಿಯಿಂದ ಇರಿದು ಕೊಲೆ ಮಾಡಿರುವುದು ಅಮಾನವೀಯ ಕೃತ್ಯವಾಗಿದೆ ಎಂದು ಸಿ.ಐ.ಟಿ.ಯು ಗಂಗಾವತಿ ತಾಲೂಕು ಕಾರ್ಯದರ್ಶಿಯಾದ ನಿರುಪಾದಿ ಬೆಣಕಲ್ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಕ್ರೂರ ಪದ್ಧತಿ ಇಡೀ ಜಿಲ್ಲಾಧ್ಯಂತ ಸುಮಾರು ಹಳ್ಳಿಗಳಲ್ಲಿ ಜೀವಂತವಾಗಿದ್ದು, ಇದಕ್ಕೆ ಜಿಲ್ಲಾಡಳಿತ ಗ್ರಾಮಗಳಲ್ಲಿ ಜಾತಿ ನಿರ್ಮೂಲನೆ ಮತ್ತು ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ಪ್ರಚಾರ ಮಾಡುವುದರ ಮೂಲಕ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ತಹಶೀಲ್ದಾರರ ಮೂಲಕ ಜಿಲ್ಲಾಡಳಿತಕ್ಕೆ ಸಿ.ಐ.ಟಿ.ಯು ಒತ್ತಾಯಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿ.ಐ.ಟಿ.ಯು ನ ಮಹೆಬೂಬ, ಮಂಜುನಾಥ, ಬಾಳಪ್ಪ, ನಾಗರಾಜ ಯು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

ಗಂಗಾವತಿ:ನಗರದಲ್ಲಿರುವ ರಸ್ತೆಯಲ್ಲಿ  ಹಸುಗಳಿಂದ ಸಾರ್ವಜನಿಕರಿಗೆ ತೊಂದರೆ  ಗೋಶಾಲೆಗೆ ಕಳಿಸಿ ಎಂದುಒತ್ತಾಯಿಸಿ ಪೌರಾಯುಕ್ತರಿಗೆ ಮನವಿ

Gangavathi: Appeal to the civic commissioner demanding that cows be sent to a cowshed to …

Leave a Reply

Your email address will not be published. Required fields are marked *