Breaking News

ಮಳೆ ಮಲ್ಲಪ್ಪನ ಗುಡ್ಡದ ಮೇಲೆ ಮಳೆಗಾಗಿ ಕಂಬಳಿ ಬೀಸಿದ ಯಾದವರು

The Yadas who spread a blanket for rain on Mallappa’s hill

ಜಾಹೀರಾತು

ಕೂಡ್ಲಿಗಿ: ತಾಲೂಕಿನ ರೈತರು ತಮ್ಮ ಜಮೀನಿನಗಳಲ್ಲಿ ಮುಂಗಾರು ಬಿತ್ತನೆ ಪೂರೈಸಿ ರೈತನ ಬದುಕಿಗೆ ನಾಡಿಗೆ ಬೇಕಾಗುವ ದವಸ ಧಾನ್ಯಗಳನ್ನು ಬಿತ್ತನೆ ಮುಗಿಸಿ ಎರಡು ತಿಂಗಳಾಗಿದ್ದು, ಇತ್ತೀಚಿನ ದಿನಗಳಲ್ಲಿ ಫಸಲಿಗೆ ಬರುವ ಸಂದರ್ಭದಲ್ಲಿ ಮಳೆರಾಯ ಮುನಿಸಿ, ಮುಗಲೇರಿಕೊಂಡು ರೈತನ ಬೆಳೆಗಳಿಗೆ ಮಳೆ ಬಾರದೆ ಮುನಿಸಿಕೊಂಡ ಮಳೆರಾಯನನ್ನು ಕರೆ ತರಲು, ಹಳ್ಳಿಯ ಸಮುದಾಯದ ವಿಭಿನ್ನಗಳ ವಿಶಿಷ್ಟ ಪೂಜೆ ಪುನಸ್ಕಾರಗಳನ್ನು ದಿನಕ್ಕೊಂದು ಆಚಾರಗಳಲ್ಲಿ ಮಾಡುತ್ತಿದ್ದರು ಮಳೆ ಬಾರದಿರುವುದು ರೈತನ ಬದುಕು ಸಂಕಷ್ಟಮಯವಾಗಿ ಕಂಗಾಲುಗೊಂಡ ರೈತ ಆತಂಕದಲ್ಲಿ ಮಳೆರಾಯನಿಗಾಗಿ ವಿಭಿನ್ನ ವಿಶಿಷ್ಟ ಸಂಪ್ರದಾಯದ ಪೂಜೆಗೆ ಮುಂದಾಗಿದ್ದು, ಮಿಂಚೇರಿ ಗುಡ್ಡದ ಮಳೆ ಮಲ್ಲಪ್ಪನ ದೇವರಿಗೆ ಶಿವಪುರ ಗೊಲ್ಲರಟ್ಟಿಯ ಯಾದವ ಸಮುದಾಯದ ಜನರು ಮಳೆರಾಯನ ಬರುವಿಕೆಗಾಗಿ, ಪೂಜೆಗೆ ಮುಂದಾಗಿದ್ದು ಸುತ್ತಮುತ್ತಲಿನ ಹಳ್ಳಿಯ ಜನರು ಗೊಲ್ಲರ ಸಮುದಾಯದ ಯಜಮಾನರಿಗೆ ನಿಮ್ಮ ಸಮುದಾಯದವರು ಮಳೆ ಮಲ್ಲಪನ ದೇವರಿಗೆ ಪೂಜೆ ಮಾಡಿ ಕಂಬಳಿ ಬಿಸಿ ಮಳೆ ಕರೆದರೆ ಮಳೆ ಧರೆಗಿಳಿಯುತ್ತದೆ ಎಂದು ದಿನಾಲೂ ಹೇಳುತ್ತಿದ್ದು ಅವರಿಗೂ ಕೂಡ ಮಳೆ ಬಾರದೆ ಇರುವುದರಿಂದ ಪೂಜೆ ಮಾಡಬೇಕು ಎಂಬುವ ನಂಬಿಕೆಯಲ್ಲಿ ಶಿವಪುರ ಗೊಲ್ಲರಟ್ಟಿಯ ಯಜಮಾನರು ಗ್ರಾಮಸ್ಥರು ಸೇರಿ ಪೂಜೆಗೆ ಸಿದ್ದರಾಗಿ ಹೇಗಲಿಗೆ ಕಂಬಳಿ ಹಾಕಿ ಮಿಂಚೇರಿ ಗುಡ್ಡದಲ್ಲಿರುವ ಮಳೆಮಲ್ಲಪ್ಪನ ದೇವಸ್ಥಾನದ ಕಡೆಗೆ ಶಿವಪುರ ಗೊಲ್ಲರಟ್ಟಿ ಗ್ರಾಮಸ್ಥರು ಹೊರಟೇಬಿಟ್ಟರು ಕೋರಿ ಹುಡುಗರಿಬ್ಬರನ್ನ ಗ್ರಾಮಸ್ಥರು ಕರದೈಯದು ಮಿಂಚೇರಿ ಗುಡ್ಡದ ಮಳೆಮಲ್ಲಪ್ಪನ ದೇವಸ್ಥಾನದ ಮುಂದೆ ಪೂಜೆ ಪುನಸ್ಕಾರಗಳನ್ನು ಪ್ರಾರಂಭಿಸಿ ಅನ್ನದಾಸೋಹಕ್ಕೆ ಗೋಧಿ ಹುಗ್ಗಿ ಅನ್ನ ಸಾಂಬಾರ್ ಸಿದ್ಧಪಡಿಸಿ ಮಿಂಚಿರಿ ಗುಡ್ಡದ ಮೇಲೆ ಕಂಬಳಿ, ಗದ್ದಿಗೆ ಹಾಸಿ ಇಬ್ಬರ ಕೋರಿ ಮಕ್ಕಳನ್ನ ಕುಂದಿರಿಸಿ ಪೂಜೆ ಪ್ರಾರಂಭಿಸಿ, ಭಕ್ತಿ ಪೂರ್ವಕವಾಗಿ ಮಳೆರಾಯನನ್ನ ಬರಮಾಡಿಕೊಳ್ಳಲು ಪ್ರಾರ್ಥಿಸಿ ಪೂಜೆ ಪೂರೈಸಿದ ನಂತರ ಮಿಂಚೇರಿ ಗುಡ್ಡದ ತುದಿಗೆ ಹೋಗಿ ಗದ್ದಿಗೆ ಆಸಿದ ಕಂಬಳಿಯನ್ನು ತೆಗೆದುಕೊಂಡು ಮಳೆ ಮಲ್ಲಪ್ಪ ನನ್ನ ನೆನೆದುಕೊಂಡು ಕಂಬಳಿ ಬಿಸಿ ಮಳೆ ಕರೆದರು ಆ ಸಮುದಾಯದಲ್ಲಿ ಈ ಪೂಜೆ ಪೂರೈಸಿ ಕಂಬಳಿ ಬೀಸಿದರೆ ಮಳೆ ಬರುತ್ತದೆ ಎಂಬುವ ಬಹು ಜ್ಞಾನದ ನಂಬಿಕೆಯಿಂದ ಗ್ರಾಮಸ್ಥರೆಲ್ಲರೂ ಪೂಜೆ ಪೂರೈಸಿದರು . ರೈತರು. ಮಳೆಗಾಗಿ ಅನ್ನದಾತ ಬದುಕಿಗಾಗಿ ನೂರಾರು ಆಚರಣೆಗಳನ್ನು ನೂರಾರು ಆಚಾರ ವಿಚಾರಗಳ ಅನೇಕ ದೇವಾ ದೇವತೆಗಳ ಸಂಪ್ರದಾಯ ಪೂಜೆಗಳನ್ನು ಗ್ರಾಮೀಣ ಪ್ರದೇಶದ ಹಳ್ಳಿಗಳ ನಡುಗಟ್ಟಿನ ಪದ್ಧತಿಗಳನ್ನು ಆಚರಿಸುತ್ತಿದ್ದರು. ಮಳೆ ಬಾರದಿರುವುದು ರೈತನ ಬೆನ್ನೆಲುಬು ಮುರಿಯಲು ಪ್ರಾರಂಭವಾಗುತ್ತಿದೆ. ರೈತನ ಬೆನ್ನೆಲುಬು ಮುರಿದರೆ ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತದೆ. ಅತಿ ಶೀಘ್ರದಲ್ಲಿಯೇ ಮಳೆಯ ಅವಶ್ಯಕತೆ ಪ್ರತಿಬೆಳೆಗೆ ಇರುವುದೆರಿಂದ ಮಳೆರಾಯ ಭೂಮಿಗೆ ಇಳಿದು ರೈತನೆ ಕಣ್ಣೀರು ಒರೆಸಿ, ಭೂದೇವಿಯ ಉಡಿ ತುಂಬ ಗಂಗೆ ಮಾತೆಯ ಮಡಿಲು ತುಂಬುವ ಮಳೆರಾಯ ಭೂಮಿಗಿಳಿಯಲಿ ಎಂಬುವುದು ನಮ್ಮ ಆಶಯ ಗ್ರಾಮಸ್ಥರೆಲ್ಲರೂ ಪೂಜೆ ಸಲ್ಲಿಸಿದರು ಗ್ರಾಮದ ಮುಖಂಡರಾದ ಬುಗುಡಿ ದೊಡ್ಡಪ್ಪ, ಬೋರಪ್ಪ ಬಿ, ಶಿವು, ಗೌಡ್ರ ಯರಪ್ಪ, ಬಿ ಯರಪ್ಪ, ತಿಮ್ಮಪ್ಪ, ರಾಮಪ್ಪ ಹಾಗೂ ಹಟ್ಟಿಯ ಯಜಮಾನರು ಗ್ರಾಮಸ್ಥರು, ಯುವಕರು ಪೂಜೆಯಲ್ಲಿ ಭಾಗವಹಿಸಿದ್ದರು

About Mallikarjun

Check Also

ಕುಕನೂರು ವ್ಯಾಪ್ತಿಯಲ್ಲಿ ರವಿವಾರ ವಿದ್ಯುತ್ ವ್ಯತಯ,,

Power outage in Kukanur area on Sunday. ಕುಕನೂರು : ದಿನಾಂಕ: 22.12.2024 ರ ಭಾನುವಾರ ದಂದು ಕುಕನೂರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.