
Vehicle plunges into Tungabhadra canal; driver escapes

ಯೋಗ ತರಬೇತುದಾರರ ಹುದ್ದೆಗೆ ಅರ್ಜಿ ಆಹ್ವಾನ: ಡಿಸೆಂಬರ್ 3 ಕೊನೆಯ ದಿನ
ಕೊಪ್ಪಳ, ನವೆಂಬರ್ 24 : ಎನ್.ಯು.ಹೆಚ್.ಎಂ ಹಾಗೂ ಪಿಎಂ ಅಭಿಮ್ ಕಾರ್ಯಕ್ರಮದಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಯೋಗ ತರಬೇತುದಾರರ ಸೇವೆಯನ್ನು ಗೌರವಧನ ಆಧಾರದ ಮೇಲೆ ಪಡೆದುಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕೊಪ್ಪಳ ಜಿಲ್ಲೆಯ 3 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 14 ನಮ್ಮ ಕ್ಲಿನಿಕ್ಗಳಿಗೆ ಯೋಗ ತರಬೇತುದಾರರ ಸೇವೆಯನ್ನು ಗೌರವಧನದ ಆಧಾರದ ಮೇಲೆ ಪಡೆದುಕೊಳ್ಳಲಾಗುತಿದ್ದು, ಎನ್.ಯು.ಹೆಚ್.ಎಂ ಕಾರ್ಯಕ್ರಮದಡಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪ್ರತಿ ಯೋಗ ಶಿಬಿರಕ್ಕೆ ರೂ. 250 ರಂತೆ ತಿಂಗಳಿಗೆ 4 ಶಿಬಿರಗಳಿಗೆ ರೂ. 1000 ಹಾಗೂ ಪಿಎಂ ಅಭಿಮ್ ಕಾರ್ಯಕ್ರಮದಡಿ ನಮ್ಮ ಕ್ಲಿನಿಕ್ಗಳಲ್ಲಿ ಪ್ರತಿ ಯೋಗ ಶಿಬಿರಕ್ಕೆ ರೂ. 250 ರಂತೆ ವಾರಕ್ಕೆ 2 ರಂತೆ ತಿಂಗಳಿಗೆ 8 ಶಿಬಿರಗಳಿಗೆ ರೂ. 2000 ಗೌರವಧನ ನಿಗದಿಪಡಿಸಿದೆ.
ಅರ್ಹ ಯೋಗ ತರಬೇತುದಾರರು ನವೆಂಬರ್ 24 ರಿಂದ ಡಿಸೆಂಬರ್ 3 ರವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಆರೋಗ್ಯ ಸಂಕೀರ್ಣ, ಹಳೇ ಜಿಲ್ಲಾ ಆಸ್ಪತ್ರೆ ಆವರಣ ಕೊಪ್ಪಳ ಇಲ್ಲಿ ಅರ್ಜಿಗಳನ್ನು ಸ್ವೀಕರಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಡಿಸೆಂಬರ್ 3 ಕೊನೆಯದಿವಾಗಿದ್ದು, ಅಭ್ಯರ್ಥಿಗಳು ಯೋಗ ತರಬೇತಿ ಕೇಂದ್ರಗಳಿಂದ ಪಡೆದ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರ್.ಸಿ.ಹೆಚ್ ಘಟಕ ಕೊಪ್ಪಳದಲ್ಲಿ ಕಛೇರಿಯ ಅವಧಿಯಲ್ಲಿ ಸಂಪರ್ಕಿಸುವAತೆ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


