
Jeans fashion and tailoring training camp launched



ಜೀನ್ಸ್ ಫ್ಯಾಷನ್, ಹೊಲಿಗೆ ಉಚಿತ ತರಬೇತಿ ಶಿಬಿರಕ್ಕೆ ಚಾಲನೆ

ಮಹಿಳೆಯರಿಗೆ ಸ್ವಾವಲಂಬಿ ಜೀವನ ನೀಡುವುದು ಶಿಬಿರದ ಉದ್ದೇಶ:ರಾಮರೆಡ್ಡಿ ಪಾಟೀಲ್
ಗಂಗಾವತಿ.ನ.18: ಕೂಡ್ಲಿಗಿಯ ಸ್ನೇಹ ಸಂಸ್ಥೆ ಹಾಗೂ ವಡ್ಡರಹಟ್ಟಿ ಗ್ರಾಮ ಪಂಚಾಯತಿಯ ಸಹಯೋಗದಲ್ಲಿ ಮಹಿಳೆಯರಿಗೆ ಸ್ವಾವಲಂಬನೆ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಸದುದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮಕ್ಕೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಗ್ರಾ.ಪಂ ಆಡಳಿತಾಧಿಕಾರಿ ರಾಮರೆಡ್ಡಿ ಪಾಟೀಲ್ ಅವರು ಮಂಗಳವಾರದಂದು ಚಾಲನೆ ನೀಡಿದರು.
ಜೀನ್ಸ್ ಫ್ಯಾಷನ್ ಡಿಜೈನ್ ಮತ್ತು ಹೊಲಿಗೆ ಉಚಿತ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ರಾಮರೆಡ್ಡಿ ಪಾಟೀಲ್ ಅವರು, ಈ ಶಿಬಿರದ ಉದ್ದೇಶ ಮಹಿಳೆಯರಿಗೆ ಸ್ವಾವಲಂಬಿ ಜೀವನ ನೀಡುವುದರ ಜತೆಗೆ ಆರ್ಥಿಕ ಸದೃಢತೆ ಕಲ್ಪಿಸುವುದಾಗಿದೆ. ಎಲ್ಲಾ ಮಹಿಳೆಯರು ಈ ಶಿಬಿರದ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ಉದ್ಘಾಟನೆ
ವಡ್ಡರಹಟ್ಟಿ ಗ್ರಾಮ ಅಭಿವೃದ್ಧಿ ಅಧಿಕಾರಿ ಸುರೇಶ ಚಲುವಾದಿ ಮಾತನಾಡಿ, ಇದು ಸಂಪೂರ್ಣ “ಉಚಿತ ತರಬೇತಿ” ಶಿಬಿರವಾಗಿದ್ದು, ವಿಶೇಷವಾಗಿ ಗ್ರಾಮೀಣ ಮಹಿಳೆಯರಿಗೆ ಕೌಶಲ್ಯ ವೃದ್ಧಿಸುವ ಉದ್ದೇಶ ಹೊಂದಿದೆ. ಕುಟುಂಬ ನಿರ್ವಹಣೆಗೆ ಆರ್ಥಿಕ ಸದೃಢತೆ ಮುಖ್ಯ, ಆರ್ಥಿಕ ಸದೃಢತೆ ಸಾಧಿಸಲು ಇಂತಹ ಕೌಶಲ್ಯ ಶಿಬಿರಗಳು ಪ್ರೇರಕ ಎಂದರು.
ಈ ಶಿಬಿರದಲ್ಲಿ ಸ್ನೇಹ ಸಂಸ್ಥೆ ತರಬೇತಿ ಸಂಯೋಜಕಿ ಶ್ರೀಮತಿ ಪ್ರತಿಭಾ, ಹಿರೇಮಠ್,ತರಬೇತಿ ಶಿಕ್ಷಕಿ ಶ್ರೀಮತಿ ಲಕ್ಷ್ಮೀ, ಸಮುದಾಯ ಸಂಘಟಕರು ಶ್ರೀಮತಿ ಮಹಾದೇವಿ ಉಪಸ್ಥಿತರಿದ್ದು, ತರಬೇತಿಯ ಮಹತ್ವ ಮತ್ತು ಇದರ ಸದುಪಯೋಗ ಪಡೆದುಕೊಳ್ಳುವ ಕುರಿತು ಉಪಸ್ಥಿತರಿದ್ದ ಮಹಿಳೆಯರಿಗೆ ಮಾರ್ಗದರ್ಶನ ನೀಡಿದರು. ಶ್ರೀ ರಾಜೇಂದ್ರ ಹಿರೇಮಠ್ ದ್ವಿ ದ ಲೆಕ್ಕ ಸಹಾಯಕರು,ಗ್ರಾ.ಪಂ ಸಿಬ್ಬಂದಿ ಆಂಜನೇಯ, ರುದ್ರಸ್ವಾಮಿ ಬಿಲ್ ಕಲೆಕ್ಟರ್ ಮಹಿಳಾ ತರಬೇತಿದಾರರು ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು. ಹೊಲಿಗೆ ಯಂತ್ರಗಳು ಹಾಗೂ ತರಬೇತಿಗೆ ಬೇಕಾದ ಸೌಲಭ್ಯಗಳನ್ನು ಸ್ಥಳದಲ್ಲಿ ವ್ಯವಸ್ಥೆಗೊಳಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಇತರರಿದ್ದರು.


