ಗುಂಡಮ್ಮ ಕ್ಯಾಂಪ್‌ನಲ್ಲಿ ಕಳ್ಳರ ಹಾವಳಿ ತಡೆಗೆ ಪೊಲೀಸ್ ಗಸ್ತು ಹೆಚ್ಚಿಸಿ: 25ನೇ ವಾರ್ಡ್ ನಿವಾಸಿಗಳ ಆಗ್ರಹ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Increase police patrols to curb the menace of thieves in Gundamma Camp: Demand by residents of Ward 25

ಗುಂಡಮ್ಮ ಕ್ಯಾಂಪ್‌ನಲ್ಲಿ ಕಳ್ಳರ ಹಾವಳಿ ತಡೆಗೆ ಪೊಲೀಸ್ ಗಸ್ತು ಹೆಚ್ಚಿಸಿ: 25ನೇ ವಾರ್ಡ್ ನಿವಾಸಿಗಳ ಆಗ್ರಹ

ಜಾಹೀರಾತು
ಜಾಹೀರಾತು


ಮನೆ, ಅಂಗಡಿಗಳಲ್ಲಿ ನಿರಂತರ ಕಳ್ಳತನ; ಸಾರ್ವಜನಿಕರಲ್ಲಿ ಆತಂಕ – ಪೊಲೀಸ್ ಠಾಣೆ

     ಗಂಗಾವತಿ,17: ನಗರದ 25   ನೇ ವಾರ್ಡ್ ವ್ಯಾಪ್ತಿಯ ಗುಂಡಮ್ಮ ಕ್ಯಾಂಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಮನೆ ಮತ್ತು ಅಂಗಡಿಗಳಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಕಳ್ಳತನ ತಡೆಗಟ್ಟಲು ತಕ್ಷಣ ಪರಿಣಾಮಕಾರಿ ಪೊಲೀಸ್ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಾರ್ಡ್ ನಿವಾಸಿಗಳು ಗಂಗಾವತಿ ನಗರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.


ಈ ಹಿಂದೆ ಕೂಡ ಇದೇ ಸಮಸ್ಯೆಯ ಕುರಿತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿ ರಾತ್ರಿ ಪೊಲೀಸ್ ಗಸ್ತು ಹೆಚ್ಚಿಸುವುದು, ಬೀಟ್ ಪೊಲೀಸ್ ವ್ಯವಸ್ಥೆ ಬಲಪಡಿಸುವುದು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಒತ್ತಾಯಿಸಲಾಗಿತ್ತು.

ಆದರೂ ಕಳ್ಳತನ ಪ್ರಕರಣಗಳು ಮರುಕಳಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ ಎಂದು ನಿವಾಸಿಗಳು ಮನವಿಯಲ್ಲಿ ತಿಳಿಸಿದ್ದಾರೆ.
ಗುಂಡಮ್ಮ ಕ್ಯಾಂಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿ ವೇಳೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಮನೆ ಮತ್ತು ಅಂಗಡಿಗಳ ಸುರಕ್ಷತೆ ಕುರಿತು ಜನರು ಭಯದಿಂದ ಬದುಕುವಂತಾಗಿದೆ. ಬಡ ಮತ್ತು ಮಧ್ಯಮ ವರ್ಗದ ಜನರು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣ ಹಾಗೂ ಆಸ್ತಿಪಾಸ್ತಿಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೂಡಲೇ ಸೂಕ್ಷ್ಮ ಪ್ರದೇಶಗಳಲ್ಲಿ ರಾತ್ರಿ ಪೊಲೀಸ್ ಗಸ್ತು ಹೆಚ್ಚಿಸಬೇಕು.

ಈ ಹಿಂದೆ ನಡೆದಿರುವ ಕಳ್ಳತನ ಪ್ರಕರಣಗಳನ್ನು ಮರುಪರಿಶೀಲಿಸಿ ಆರೋಪಿಗಳನ್ನು ಪತ್ತೆಹಚ್ಚಬೇಕು. ಪ್ರಮುಖ ರಸ್ತೆ, ವೃತ್ತಗಳು, ಮಾರುಕಟ್ಟೆ ಹಾಗೂ ಸರಕಾರಿ ಶಾಲಾ ಆವರಣ ಸೇರಿದಂತೆ ಅಗತ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳ ಓಡಾಟದ ಮೇಲೆ ನಿಗಾ ವಹಿಸಿ ವಿಶೇಷ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಈಸಂಧರ್ಭದಲ್ಲಿ. ಕೆ.ಸನ್ನಿಕ ಪಟೇಲ್,ಉಲ್ಲಾಸ.ಕೆ,ಏಜಾಜ್, ಶಾಮೀದ ಅಲಿ, ಹುಸೇನ್ ಬಾಫಾ ಲಾಟಿ,
ಏಜಾಜ್,ಅಮೀನ ಪೀರಾ, ಹೆಚ್ ಮಲ್ಲಿಕಾರ್ಜುನ ಹೊಸಕೇರಾ ಇದ್ದರು.

Total Views: 3
Share This Article
Leave a Comment