ಅಮೀನ್ ಪೀರ್ ಉರುಸ್-ಏ-ಶರೀಫ್ ಅಂಗವಾಗಿ ಭಕ್ತರಿಂದ ಅನ್ನ ಸಂತರ್ಪಣೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು


Devara Dasimayya – Jedara Dasimayya: Recent research provides the answer to historical confusion!




ಅಮೀನ್ ಪೀರ್ ಉರುಸ್-ಏ-ಶರೀಫ್ ಅಂಗವಾಗಿ ಭಕ್ತರಿಂದ ಅನ್ನ ಸಂತರ್ಪಣೆ

ಜಾಹೀರಾತು
ಜಾಹೀರಾತು


ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ಆಚರಣೆ; ನೂರಾರು ಭಕ್ತರಿಂದ ಪ್ರಸಾದ ಸ್ವೀಕಾರ


ಗಂಗಾವತಿ: ಆಂಧ್ರಪ್ರದೇಶದ ಕಡಪದಲ್ಲಿರುವ ಪ್ರಸಿದ್ಧ ಹಜರತ್ ಅಮೀನ್ ಪೀರ್ ದರ್ಗಾದ ಉರುಸ್-ಏ-ಶರೀಫ್ ಅಂಗವಾಗಿ ಗಂಗಾವತಿ ನಗರದಲ್ಲಿ ಭಕ್ತರ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಗಿತ್ತು.
ನಗರದ ಎಸ್.ಎಸ್.ಎಲ್.ಆರ್. ಹೋಟೆಲ್ ಸಮೀಪದ ಆವರಣದಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಅಮೀನ್ ಪೀರ್ ದರ್ಗಾದ ಭಕ್ತರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಂಗವಾಗಿ ಗುರುಗಳಾದ ಕಮಲ್ ಮುಸ್ತಫ ಆಫೀಸ್ ಅವರ ನೇತೃತ್ವದಲ್ಲಿ ವಿಶೇಷ ಫಾತೆಹಾ ಪ್ರಾರ್ಥನೆ ನೆರವೇರಿಸಲಾಯಿತು. ನಂತರ ಮಹಿಬೂಬ್ ಸುಭಾನಿ ಜಂಡಾ ಕಟ್ಟಕ್ಕೆ ತೆರಳಿ ವಿಶೇಷ ಫಾತೆಹಾ ಸಲ್ಲಿಸಲಾಯಿತು.
ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗಂಗಾವತಿ ನಗರದ ಸಾರ್ವಜನಿಕರು, ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸ್ನೇಹಿತರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ಅನ್ನ ಪ್ರಸಾದ ಸ್ವೀಕರಿಸಿದರು.
ಧರ್ಮ, ಭಕ್ತಿ ಹಾಗೂ ಸೇವಾ ಮನೋಭಾವದ ಪ್ರತೀಕವಾಗಿ ನಡೆದ ಈ ಅನ್ನ ಸಂತರ್ಪಣೆ ಕಾರ್ಯಕ್ರಮವು ಧಾರ್ಮಿಕ ಸೌಹಾರ್ದತೆ, ಸಹಬಾಳ್ವೆ ಮತ್ತು ಮಾನವೀಯತೆಯ ಸಂದೇಶ ಸಾರಿತು.
ಈ ಸಂದರ್ಭದಲ್ಲಿ ಅಮೀನ್ ಪೀರ್ ಸಾಹೇಬರ ಭಕ್ತರಾದ ಸೈಯದ್ ಭಾಷಾ, ಜಮಾಲ್, ನಜೀರ್, ಸುಭಾನ್, ಅಯ್ಯೂಬ್ ಶೇಕ್, ಮೆಹಬೂಬ್ ಪಾಷಾ, ರಮೇಶ್, ವಾಹಿದ್, ರಸೂಲ್, ಸದ್ದಾಮ್, ಸಾಧಿಕ್, ಬಾಷಾ, ಫ್ರೂಟ್ ಸಲೀಂ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.
ಕಲ್ಯಾಣಸಿರಿ ಕನ್ನಡ ವೆಬ್ ನ್ಯೂಸ್, ಗಂಗಾವತಿ

Total Views: 0
Share This Article
Leave a Comment