ಆದ್ವಿಕ್ ಸಂಸ್ಕಾರ ಭಾರತಿ ಕಂಪ್ಯೂಟರ್ ಶಿಕ್ಷಣ ಕೇಂದ್ರ ಹಾಗೂ ಸಾತ್ವಿಕ್ ಟ್ಯುಟೋರಿಯಲ್ಸ್ ಉದ್ಘಾಟನೆ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು
Inauguration of Advik Samskara Bharati Computer Education Centre and Satvik Tutorials

ಶಿಕ್ಷಣದ ಜೊತೆಗೆ ಕೌಶಲ್ಯ, ಆತ್ಮವಿಶ್ವಾಸ ಹಾಗೂ ಸಂಸ್ಕಾರ ಬೆಳೆಸುವುದು ಅಗತ್ಯ

ಜಾಹೀರಾತು

ಆದ್ವಿಕ್ ಸಂಸ್ಕಾರ ಭಾರತಿ ಕಂಪ್ಯೂಟರ್ ಶಿಕ್ಷಣ ಕೇಂದ್ರ ಹಾಗೂ ಸಾತ್ವಿಕ್ ಟ್ಯುಟೋರಿಯಲ್ಸ್ ಉದ್ಘಾಟನೆ

ಗಂಗಾವತಿ: ಆಧುನಿಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಆತ್ಮವಿಶ್ವಾಸ, ಶಿಸ್ತು ಹಾಗೂ ಉತ್ತಮ ಸಂಸ್ಕಾರ ಬೆಳೆಸುವ ಉದ್ದೇಶದಿಂದ ನಗರದ ಆದ್ವಿಕ್ ಸಂಸ್ಕಾರ ಭಾರತಿ ಕಂಪ್ಯೂಟರ್ ಶಿಕ್ಷಣ ಕೇಂದ್ರ ಹಾಗೂ ಸಂಸ್ಥೆಯ ಅಂಗ ಸಂಸ್ಥೆಯಾದ ಸಾತ್ವಿಕ್ ಟ್ಯುಟೋರಿಯಲ್ಸ್ ಉದ್ಘಾಟನಾ ಸಮಾರಂಭ ಅ.25ರಂದು ಬೆಳಗ್ಗೆ 10.30ಕ್ಕೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಪಂದನ ಸೌಹಾರ್ದ ಸಹಕಾರಿ ಬ್ಯಾಂಕ್, ಗಂಗಾವತಿಯ ಅಧ್ಯಕ್ಷ ನಾಗಲಿಂಗಪ್ಪ ಪತ್ತಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಕಲ್ಪ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ಎಂ., ವಿಭಾಗ ಪ್ರಚಾರಕ ವಿಠ್ಠಲ್ ಜಿ., ಉದ್ಯಮಿ ರಾಮಕೃಷ್ಣ ಕೆ. ಹಾಗೂ ಹಿರಿಯರಾದ ಜಕಣಾಚಾರಿ ಕಮ್ಮಾರ್ ಭಾಗವಹಿಸಿದ್ದರು. ಸಂಸ್ಥೆಯ ಸಂಸ್ಥಾಪಕ ಶಶಿಧರ ಕಮ್ಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂಶುಪಾಲ ಮಂಜುನಾಥ್ ಎಂ. ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪದವಿ ಹಾಗೂ ಪದವಿ ಪೂರ್ವ ಶಿಕ್ಷಣದ ಜೊತೆಗೆ ವಿವಿಧ ಕ್ಷೇತ್ರಗಳಿಗೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದರು. ಕಂಪ್ಯೂಟರ್ ಜ್ಞಾನ ಸೇರಿದಂತೆ ವೃತ್ತಿಪರ ಕೌಶಲ್ಯಗಳನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ನಾಗಲಿಂಗಪ್ಪ ಪತ್ತಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಪ್ರಮಾಣಪತ್ರಗಳಷ್ಟೇ ಸಾಕಾಗುವುದಿಲ್ಲ; ಜೀವನದ ಸವಾಲುಗಳನ್ನು ಎದುರಿಸಲು ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವಾಸವೂ ಅಗತ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟುಕೊಂಡು ನಿರಂತರ ಪ್ರಯತ್ನದ ಮೂಲಕ ಯಶಸ್ಸಿನತ್ತ ಸಾಗಬೇಕು ಎಂದು ಕಿವಿಮಾತು ಹೇಳಿದರು. ವಿಭಾಗ ಪ್ರಚಾರಕ ವಿಠ್ಠಲ್ ಜಿ. ಮಾತನಾಡಿ, “ಅಕ್ಷರ ಜ್ಞಾನ ಕಡಿಮೆಯಾಗಬಹುದು, ಆದರೆ ಸಂಸ್ಕಾರ ಕಡಿಮೆಯಾಗಬಾರದು” ಎಂಬ ಆಶಯದೊಂದಿಗೆ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ವಿಚಾರ, ಮೌಲ್ಯ ಹಾಗೂ ಸಂಸ್ಕಾರಗಳನ್ನು ಕಲಿಸಬೇಕು. ಶಿಕ್ಷಣದ ಉದ್ದೇಶ ಕೇವಲ ಉದ್ಯೋಗ ಪಡೆಯುವುದಲ್ಲ; ಉತ್ತಮ ವ್ಯಕ್ತಿತ್ವ ಹೊಂದಿದ ನಾಗರಿಕರನ್ನು ರೂಪಿಸುವುದೂ ಆಗಿದೆ ಎಂದು ಹೇಳಿದರು. 2025ರ ಮಾರ್ಚ್‌ನಲ್ಲಿ ಆರಂಭಗೊಂಡ ಆದ್ವಿಕ್ ಸಂಸ್ಕಾರ ಭಾರತಿ ಕಂಪ್ಯೂಟರ್ ಶಿಕ್ಷಣ ಕೇಂದ್ರವು ಒಂದೂವರೆ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ, ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಪಡೆದ ತರಬೇತಿ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕುರಿತು ತಮ್ಮ ಅನುಭವ ಹಂಚಿಕೊಂಡು ಸಂಸ್ಥೆಯ ಕಾರ್ಯವೈಖರಿಯನ್ನು ಮೆಚ್ಚಿಕೊಂಡರು. ಇದೇ ಸಂದರ್ಭದಲ್ಲಿ ಗಂಗಾವತಿ ನಗರದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವಂತೆ ‘ಸಾತ್ವಿಕ್ ಟ್ಯುಟೋರಿಯಲ್ಸ್’ ಆರಂಭಿಸಲಾಯಿತು. ಪಠ್ಯಕ್ರಮದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಉತ್ತಮ ಚಿಂತನೆ, ಮೌಲ್ಯಗಳು ಹಾಗೂ ಸಂಸ್ಕಾರ ಬೆಳೆಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ತಿಳಿಸಲಾಯಿತು. ಉದ್ಯೋಗ ಸಂದರ್ಶನ ಆಯೋಜನೆ ವಿದ್ಯಾರ್ಥಿಗಳು ಹಾಗೂ ಪದವೀಧರರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಖಾಸಗಿ ಕಂಪನಿಗಳ ಸಹಯೋಗದಲ್ಲಿ ಉದ್ಯೋಗ ಸಂದರ್ಶನವನ್ನೂ ಆಯೋಜಿಸಲಾಗಿತ್ತು. ವಿವಿಧ ಪದವೀಧರರು ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿ ಲಭ್ಯವಿದ್ದ ಉದ್ಯೋಗಾವಕಾಶದ ಸದುಪಯೋಗ ಪಡೆದುಕೊಂಡರು. ವಿದ್ಯಾರ್ಥಿಗಳಾದ ವಿದ್ಯಾವತಿ ಕುಲಕರ್ಣಿ ಹಾಗೂ ಸಂತೋಷ್ ಸೊಂಡೂರ್ ಅವರು ಸಂಸ್ಥೆಯ ಮೂಲ ಉದ್ದೇಶದ ಕುರಿತು ಮಾತನಾಡಿ, ಆಧುನಿಕ ಶಿಕ್ಷಣದ ಜೊತೆಗೆ ಪಠ್ಯಕ್ರಮ, ಕೌಶಲ್ಯ ಹಾಗೂ ಸಂಸ್ಕಾರವನ್ನು ನೀಡುತ್ತಿರುವ ಸಂಸ್ಥೆಯ ಪ್ರಯತ್ನವನ್ನು ಶ್ಲಾಘಿಸಿದರು. ಸಹ ಶಿಕ್ಷಕ ಮಾದಿನಾಳಪ್ಪ ಕಾರ್ಯಕ್ರಮ ನಿರೂಪಿಸಿದರು. ದುರ್ಗೇಶ್ ಹಾಗೂ ಮಲ್ಲೇಶ್ ಸ್ವಾಗತ ಭಾಷಣ ಹಾಗೂ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆದ ವಿದ್ಯಾರ್ಥಿಗಳಾದ ಲಕ್ಷ್ಮಿ, ರೇಖಾ ಉಪ್ಪಾರ್, ಬಸನಗೌಡ, ಮಧುಶ್ರೀ, ಕವಿತಾ, ಕಾವೇರಿ, ಫರ್ಜಾನ, ಮುಬಿನ ಹಾಗೂ ಮಹಮ್ಮದ್ ರಿಹಾನ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸರೋಜಾ ಜಕಣಾಚಾರ್ಯ, ಕಮಲಮ್ಮ ಪ್ರಭಾಕರ್ ಆಚಾರ್, ಉಮಾಶ್ರೀ, ವಿದ್ಯಾವತಿ, ಶ್ರೀನಿವಾಸ್, ಬಸನಗೌಡ, ರಾಘವೇಂದ್ರ, ಮೌನೇಶ್ ಕಮ್ಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಣದ ಜೊತೆಗೆ ಕೌಶಲ್ಯ, ಆತ್ಮವಿಶ್ವಾಸ ಹಾಗೂ ಸಂಸ್ಕಾರಕ್ಕೆ ಆದ್ಯತೆ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸಂಸ್ಥೆಯ ಪ್ರಯತ್ನಕ್ಕೆ ಕಾರ್ಯಕ್ರಮದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.”

Total Views: 0
ಜಾಹೀರಾತು
Share This Article
Leave a Comment