
It is precisely because Kannadigas possess a broad-minded and harmonious nature that Kannada faces a threat!
ಕನ್ನಡಿಗರು ವಿಶಾಲತೆ, ಸಾಮರಸ್ಯ ಉಳ್ಳವರಾಗಿರುವುದರಿಂದಲೇ ಕನ್ನಡಕ್ಕೆ ಕಂಟಕ!
- ಡಾ. ಸತ್ಯಮೂರ್ತಿ ಗೂಗಿ, ಸಾಹಿತಿ, ಚಿಂತಕರು, ಬೆಂಗಳೂರು
(ಚರ್ಚೆ)
ಹುಬ್ಬಳ್ಳಿ: ಅ.19: ಹುಬ್ಬಳ್ಳಿಯ ಕೆಎಲ್ಇ ಟೆಕ್ ವಿಶ್ವವಿದ್ಯಾಲಯದಲ್ಲಿ ದಕ್ಷಿಣ ಭಾರತ ರಾಜ್ಯಗಳ ವಿಶ್ವವಿದ್ಯಾಲಯಗಳ ಮಹಿಳಾ ಬ್ಯಾಡ್ಮಿಂಟನ್ ಟೂರ್ನಮೆಂಟನ್ನು ಆಯೋಜಿಸಲಾಗಿತ್ತು. ಈ ಟೂರ್ನಮೆಂಟ್ ನಲ್ಲಿ ದಕ್ಷಿಣದ ಆರು ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು, ಪಾಂಡಿಚೇರಿ ಹಾಗೂ ಕರ್ನಾಟಕ ರಾಜ್ಯದ ನೂರಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಭಾಗವಹಿಸಿದ್ದರು.
500ಕ್ಕೂ ಹೆಚ್ಚು ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿಯರು ಮತ್ತು ಇನ್ನೂರಕ್ಕೂ ಹೆಚ್ಚು ತರಬೇತುದಾರರು ಉಪಸ್ಥಿತರಿಯಲ್ಲಿ ಅಕ್ಟೋಬರ್ 18 ರಿಂದ 21 ರವರೆಗೆ ನಡೆಯುವ ಟೂರ್ನಮೆಂಟನ್ನು ಭಾನುವಾರ ಬೆಳಗ್ಗೆ 9 ಗಂಟೆಗೆ ಕೆಎಲ್ಇ ಟೆಕ್ ಸಭಾಂಗಣದಲ್ಲಿ ಕುಲಪತಿ ಡಾ. ಪ್ರಕಾಶ್ ತೆವರಿ ಉದ್ಘಾಟಿಸಿದರು. ಆಂಗ್ಲ ಭಾಷೆಯಲ್ಲಿ ಉದ್ಘಾಟನಾ ಭಾಷಣ ಮಾಡಿ ಸ್ಪೋರ್ಟ್ಸ್ ಮ್ಯಾನ್ ಶಿಪ್ ಹಾಗೂ ಅದರ ಮಹತ್ವದ ಬಗ್ಗೆ ಮಾತನಾಡಿ, ತಂಡಗಳು ಗೆಲುವನ್ನು ತಂದು ಕೊಟ್ಟರೆ, ಸ್ಪೋರ್ಟ್ಸ್ ಮ್ಯಾನ್ ಶಿಪ್ ಇದು ಜೀವನದಲ್ಲಿ ಹೇಗೆ ಬದುಕಬೇಕೆಂಬ ಆತ್ಮವಿಶ್ವಾಸವನ್ನು ತಂದುಕೊಡುತ್ತದೆ ಎಂದು ಹೇಳಿದರು.
ಭಾಷೆಯ ವಿಚಾರದಲ್ಲಿ ಬೇರೆ ರಾಜ್ಯಗಳಿಗೂ ನಮ್ಮ ರಾಜ್ಯಕ್ಕೂ ಇರುವ ವ್ಯತ್ಯಾಸ: ನಾವು ನಮ್ಮ ಕರ್ನಾಟಕ ತಂಡದೊಂದಿಗೆ ತಮಿಳುನಾಡಿಗೆ ಕರ್ನಾಟಕ ತಂಡದೊಂದಿಗೆ ಈ ಹಿಂದೆ ಹೋಗಿದ್ದಾಗ ದಕ್ಷಿಣದ ಹಲವು ರಾಜ್ಯಗಳು ಭಾಗವಹಿಸಿದ್ದರೂ ಕೂಡ ಅವರದೇ ಭಾಷೆ ಕೇವಲ ತಮಿಳುನಲ್ಲಿಯೇ ಉದ್ಘಾಟನಾ ಭಾಷಣ ಹಾಗೂ ಮುಖ್ಯ ಅತಿಥಿಗಳು ಅಧ್ಯಕ್ಷರ ಭಾಷಣ ಎಲ್ಲವೂ ತಮಿಳಿನಲ್ಲಿಯೇ ಮಾತನಾಡಿದ್ದರು.
ಉದ್ಘಾಟನಾ ಸಂದರ್ಭ ಹಾಗೂ ಕೊನೆಯಲ್ಲಿ ನಾಡಗೀತೆಯನ್ನು ಮಾತ್ರ ಹಾಡಿ ಕೇವಲ ಅವರ ನಾಡ ಧ್ವಜಕ್ಕೆ ಮಾತ್ರವೇ ಗೌರವವನ್ನು ಸೂಚಿಸಿ, ಆದರೆ ಅಖಂಡ ಭಾರತದ ರಾಷ್ಟ್ರಧ್ವಜಕ್ಕೆ ಗೌರವವನ್ನು ನೀಡದೆ ಕೇವಲ ಅವರ ನಾಡಗೀತೆಗೆ ಗೌರವವನ್ನು ಸೂಚಿಸಿದ್ದರ ನೋಡಿದರೆ, ಅವರ ನಾಡಗೀತೆ,ನಾಡ ದ್ವಜ, ನಾಡ ಭಾಷೆಗೆ ಮಾತ್ರ ಗೌರವವನ್ನು ಸೂಚಿಸಿ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಹಾಗೂ ಇನ್ನುಳಿದ ಭಾಷೆಗಳನ್ನು ಕಡೆಗಣಿಸಲಾಗಿತ್ತು.
ಆದರೆ ನಮ್ಮ ಕರ್ನಾಟಕದಲ್ಲಿ ಮಾತ್ರ ನಾವು ತಮಿಳುರಿಗೆ ವಿರುದ್ಧ | ಕನ್ನಡಿಗರು ಹೇಗೆ ತಮಿಳರಿಗೆ ತದ್ವಿರುದ್ಧ:
- ಕನ್ನಡದಲ್ಲಿ ಭಾಷಣ ಮಾಡುವ ಬದಲು ಆಂಗ್ಲ ಭಾಷೆಯಲ್ಲಿ ಭಾಷಣ ಮಾಡುವುದು, ಇದರ ಉದ್ದೇಶ ಪ್ರತಿಯೊಬ್ಬರಿಗೂ ನಾವು ಹಾಗೂ ನಮ್ಮ ವಿಚಾರಗಳು ಅರ್ಥವಾಗುವಂತೆ ನಡೆದುಕೊಳ್ಳಲು ಆಂಗ್ಲ ಮಾಧ್ಯಮವನ್ನು ಸಂವಹನ ಭಾಷೆಯಾಗಿ ಬಳಸುವುದು ಬಹುಶಃ ಇದನ್ನು ಭಾಷೆಯ ವೈಶಾಲ್ಯತೆ ಮತ್ತು ಸಾಮರಸ್ಯ ಎಂದು ಅರ್ಥೈಸಿಕೊಳ್ಳಬಹುದು.
- ನಾಡಗೀತೆಯನ್ನು ಹಾಡದೆ ಕೇವಲ ರಾಷ್ಟ್ರಗೀತೆಯನ್ನು ಹಾಡಿ ರಾಷ್ಟ್ರಧ್ವಜಕ್ಕೆ ಗೌರವವನ್ನು ಸೂಚಿಸುವುದು ಇದು ಬಹುಶಃ ನಮ್ಮ ನಾಡ ಪ್ರೇಮವನ್ನು ಮರೆತು, ರಾಷ್ಟ್ರ ಪ್ರೇಮವನ್ನು ಉತ್ತೇಜಿಸುವುದು ಈ ಕ್ರಮ ಎಲ್ಲಾ ರಾಜ್ಯಗಳನ್ನು ಗೌರವಿಸಿದ್ದಂತಾಗುತ್ತದೆ ಸರಿ. ಆದರೆ ನಮ್ಮ ನಾಡಗೀತೆಯನ್ನು ನಾವು ಹಾಡದಿರುವುದರಿಂದ ನಮ್ಮತನವನ್ನು ನಾವು ಮರೆತಂತೆ ಎಂದು ಭಾವಿಸ ಬೇಕಾಗುತ್ತದೆ.
- ನನಗೆ ಈ ಒಂದು ವಿಚಾರ ಜ್ಞಾಪಕಕ್ಕೆ ಬರುತ್ತದೆ ನಾವು ಕನ್ನಡಿಗರು ವಿಶಾಲ ಮನಸ್ಸಿನವರು, ವಿಶಾಲ ಹೃದಯದವರು ಎಂಬ ಮಾತು ಅಕ್ಷರ ನಿಜವಾದಂತಾಗಿ ನಮ್ಮ ಈ ಒಂದು ವಿಶಾಲತೆಯನ್ನೇ ಬೇರೆ ರಾಜ್ಯದವರು ದುರುಪಯೋಗಪಡಿಸಿಕೊಂಡು ಅವರ ಭಾಷೆಯನ್ನು ನಮ್ಮ ಮೇಲೆ ಹೇರತೊಡಗುತ್ತಿದ್ದಾರೆ ಇದಕ್ಕೆ ಪುಷ್ಟಿಕರಿಸುವಂತೆ ನಮ್ಮ ಭಾಷೆಯನ್ನು ನಾವು ಇತರರಿಗೆ ಕಲಿಸುವ ಬದಲು ಅವರ ಭಾಷೆಯಲ್ಲೇ ನಾವು ಅವರನ್ನು ಮಾತನಾಡಿಸಿ ನಮ್ಮ ನಾಡಿನಲ್ಲಿ ಅವರಿಗೆ ಅನುಕೂಲ ಮಾಡಿಕೊಡುತ್ತಿರುವುದು ಎಷ್ಟು ಸಮಂಜಸ ಎಂದು ಯೋಚಿಸಬೇಕಾಗುತ್ತದೆ.
ಕೊನೆಯಲ್ಲಿ ಒಟ್ಟಾರೆಯಾಗಿ ಭಾಷೆಯ ವಿಚಾರದಲ್ಲಿ ನಾವು ಹೊಂದಿರುವ ವಿಶಾಲತೆ ಹಾಗೂ ಉದಾರ ಮನಸ್ಥಿತಿಗಳೇ, ನಮ್ಮ ಕನ್ನಡವನ್ನು ನಾವೇ ಹಿಂದುಳಿಯಲು ಹಾಗೂ ಬೇರೆ ರಾಜ್ಯದ ಜನರು ಅವರ ಭಾಷೆಯನ್ನು ನಮ್ಮ ಜನರ ಮೇಲೆ ಹೇರಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತಿದೆ.
ಈ ನಿಟ್ಟಿನಲ್ಲಿ ಯೋಚಿಸಿದಾಗ ಹಿರಿಯ ಸಾಹಿತಿ ಡಾ. ಬೈರಮಂಗಲ ರಾಮೇಗೌಡರ ಮಾತಾದ “ಕನ್ನಡಿಗರು ಕನ್ನಡತನವನ್ನು ಹೀಗೆ ಬಿಟ್ಟು ಕೊಡುತ್ತಿದ್ದರೆ.. ಇನ್ನು ಕೇವಲ ಕೆಲವೇ ವರ್ಷಗಳಲ್ಲಿ ಕನ್ನಡ ಭಾಷೆಯ ನಾಡು ‘ಹಿಂದಿ ಮಯ’ ಅಥವಾ ಅನ್ಯ ಭಾಷಿಗರ ನಾಡಾಗುವುದರಲ್ಲಿ ಸಂಶಯವಿಲ್ಲ . ಎಂಬ ಮಾತನ್ನು ತಮ್ಮೆಲ್ಲರ ಗಮನಕ್ಕೆ ತರುತ್ತಾ.. ಹಸಿರಾಗಲಿ ಕನ್ನಡ, ಉಸಿರಾಗಲಿ ಕನ್ನಡ, ಎಂದೆಂದಿಗೂ ನಾವು ಕನ್ನಡಿಗರಾಗೇ ಇರೋಣ ಎಂದು ಆಶಿಸುತ್ತಾ.. ಜೈ ಹಿಂದ್ ಜೈ ಕರ್ನಾಟಕ ಮಾತೆ.




