ತುಪ್ಪ ಆರೋಗ್ಯಕ್ಕೆ ಒಳ್ಳೆಯದಾ?

H.Mallikarjun
H.Mallikarjun - Kalyanasiri
7 Min Read
ಜಾಹೀರಾತು

Is ghee good for health?

ತುಪ್ಪ ಆರೋಗ್ಯಕ್ಕೆ ಒಳ್ಳೆಯದಾ?

     ಖಂಡಿತ, ತುಪ್ಪ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಆದರೆ ಅದನ್ನು ಮಿತವಾಗಿ ಸೇವಿಸುವುದು ಮುಖ್ಯ. ತುಪ್ಪದ ಕೆಲವು ಮುಖ್ಯ ಪ್ರಯೋಜನಗಳು ಇಲ್ಲಿವೆ:ಆರೋಗ್ಯ ಪ್ರಯೋಜನಗಳು:* ಜೀರ್ಣಕ್ರಿಯೆಗೆ ಸಹಕಾರಿ: ತುಪ್ಪವು ಬ್ಯುಟರಿಕ್ ಆಮ್ಲವನ್ನು ಹೊಂದಿದ್ದು, ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.* ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ತುಪ್ಪದಲ್ಲಿ ವಿಟಮಿನ್ ಎ, ಡಿ, ಇ ಮತ್ತು ಕೆ ಸಮೃದ್ಧವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.* ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಕೆಲವು ಅಧ್ಯಯನಗಳ ಪ್ರಕಾರ, ಮಿತವಾದ ತುಪ್ಪ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡಲು ಮತ್ತು ಒಳ್ಳೆಯ ಕೊಲೆಸ್ಟ್ರಾಲ್ (HDL) ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.* ಮೂಳೆಗಳನ್ನು ಬಲಪಡಿಸುತ್ತದೆ: ತುಪ್ಪವು ವಿಟಮಿನ್ ಕೆ ಅನ್ನು ಹೊಂದಿದ್ದು, ಇದು ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.* ಚರ್ಮ ಮತ್ತು ಕೂದಲಿಗೆ ಉತ್ತಮ: ತುಪ್ಪವು ಚರ್ಮವನ್ನು ಮೃದುಗೊಳಿಸುತ್ತದೆ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.* ಉರಿಯೂತ ನಿವಾರಕ: ತುಪ್ಪದಲ್ಲಿರುವ ಬ್ಯುಟರಿಕ್ ಆಮ್ಲವು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.*

ಜಾಹೀರಾತು

ಶಕ್ತಿಯ ಮೂಲ: ತುಪ್ಪವು ಆರೋಗ್ಯಕರ ಕೊಬ್ಬಿನಿಂದ ಸಮೃದ್ಧವಾಗಿದ್ದು, ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.* ಮಾನಸಿಕ ಆರೋಗ್ಯ: ತುಪ್ಪವು ಮೆದುಳಿನ ಕಾರ್ಯವನ್ನು ಸುಧಾರಿಸಲು ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ಮಿತವಾಗಿ ಸೇವಿಸುವುದು ಮುಖ್ಯ:ತುಪ್ಪವು ಕೊಬ್ಬಿನಾಂಶವನ್ನು ಹೊಂದಿರುವ ಕಾರಣ, ಅದನ್ನು ಅತಿಯಾಗಿ ಸೇವಿಸುವುದರಿಂದ ಕೆಲವು ಅಡ್ಡ ಪರಿಣಾಮಗಳು ಉಂಟಾಗಬಹುದು:* ತೂಕ ಹೆಚ್ಚಳ: ತುಪ್ಪವು ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತದೆ, ಆದ್ದರಿಂದ ಅತಿಯಾದ ಸೇವನೆಯು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

ಕೊಲೆಸ್ಟ್ರಾಲ್ ಮಟ್ಟ ಹೆಚ್ಚಳ: ಕೆಲವು ಜನರಲ್ಲಿ, ಅತಿಯಾದ ತುಪ್ಪ ಸೇವನೆಯು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು.* ಹೃದಯ ಸಂಬಂಧಿ ಸಮಸ್ಯೆಗಳು: ಅಧಿಕ ಕೊಲೆಸ್ಟ್ರಾಲ್ ಮಟ್ಟವು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು.ಯಾರು ತುಪ್ಪವನ್ನು ಮಿತವಾಗಿ ಸೇವಿಸಬೇಕು ಅಥವಾ ಸಬೇಕು?* ಅಧಿಕ ಕೊಲೆಸ್ಟ್ರಾಲ್ ಹೊಂದಿರುವವರು.* ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು.* ಬೊಜ್ಜು ಅಥವಾ ಅಧಿಕ ತೂಕ ಹೊಂದಿರುವವರು.* ಯಕೃತ್ತಿನ ಸಮಸ್ಯೆ ಇರುವವರು.* ಅಜೀರ್ಣ ಸಮಸ್ಯೆ ಇರುವವರು.ಸಾರಾಂಶ:ತುಪ್ಪವು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುವ ಒಂದು ಪೌಷ್ಟಿಕಾಂಶ ಭರಿತ ಆಹಾರ. ಆದರೆ, ಅದರ ಸೇವನೆಯ ಪ್ರಮಾಣದ ಬಗ್ಗೆ ಗಮನವಿರಬೇಕು. ಮಿತವಾಗಿ ಸೇವಿಸಿದರೆ ಅದು ಆರೋಗ್ಯಕ್ಕೆ ಒಳ್ಳೆಯದು, ಆದರೆ ಅತಿಯಾಗಿ ಸೇವಿಸಿದರೆ ಅನಾರೋಗ್ಯಕ್ಕೆ ಕಾರಣವಾಗಬಹುದು. ನಿಮ್ಮ ವೈಯಕ್ತಿಕ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತುಪ್ಪವನ್ನು ಸೇವಿಸುವುದು ಉತ್ತಮ. ಅಗತ್ಯವಿದ್ದಲ್ಲಿ ವೈದ್ಯರು ಅಥವಾ ಆಹಾರ ತಜ್ಞರ ಸಲಹೆಯನ್ನು ಪಡೆಯಿರಿ.

ಹೌದು, ಖಂಡಿತ ಒಳ್ಳೆಯದೇ. ಆದರೆ ತುಪ್ಪದಲ್ಲಿ ಮಿಂದು ಎದ್ದು ತಿನ್ನುವಷ್ಟು ಬೇಡ.ಗಾದೆ ನೀವು ಕೇಳಿರಬೇಕು, ” ಸಾಲ ಮಾಡಿಯಾದರು, ತುಪ್ಪ ತಿನ್ನು”. ಇದರಲ್ಲಿ ಒಳ್ಳೆಯದನ್ನು ಅಷ್ಟೇ ಕೇಳಿಸಿಕೊಳ್ಳೋಣ. ತುಪ್ಪ ಒಳ್ಳೆಯದು ಆದ್ದರಿಂದ ತಿನ್ನೋಣ. ಸಾಲ ಮಾಡುವ ಅವಶ್ಯಕತೆ ಬೇಡ.ಹಸುವಿನ ಅಥವಾ ಹೆಮ್ಮೆಯ ಆಹಾರ ಮೊದಲು ಹಾಲಾಗಿ ಪರಿವರ್ತನೆಯಾಗಿ ಹೊರಗೆ ಬರುತ್ತದೆ. ನಂತರ ಇದು ಮೊಸರಾಗುತ್ತದೆ.

ಮೊಸರಿನಿಂದ ಬೆಣ್ಣೆ ಬೇರ್ಪಡಿಸುತ್ತಾರೆ. ಅದನ್ನು ಸಂಸ್ಕರಿಸಿ ತುಪ್ಪ ಮಾಡುತ್ತಾರೆ. ಅದರಿಂದ ಅದು ನಮ್ಮ ದೇಹಕ್ಕೆ ಅತ್ಯಂತ ಅಮೋಘವಾದ ಆಹಾರದ ಅಂಶ.ಖಂಡಿತವಾಗಿ ಪ್ರತಿನಿತ್ಯ ಒಂದು ಚಮಚ ತುಪ್ಪ ಬಹಳ ಒಳ್ಳೆಯದು. ಕಲಿಸಿದ ಅನ್ನ, ರೊಟ್ಟಿ, ಚಪಾತಿ, ಮುದ್ದೆ, ಮುಂತಾದವುಗಳ ಜೊತೆ ತಿಂದರೆ ಬಹಳ ರುಚಿ ಜೊತೆಗೆ ಪಲ್ಯ ಸಾರು ಸಾಂಬಾರುಗಳಿಗೆ ಒಗ್ಗರಣೆ ಮೂಲಕವೂ ಬಳಸಬಹುದು.ಮನೆ

ಹೌದು, ತುಪ್ಪ (Ghee) ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಲಾಭಕರವಾಗಿದೆ, ಆದರೆ ಮೊತ್ತಮೊದಲಿಗೆ, ಸಮತೋಲನದಲ್ಲಿಯೇ ಸೇವಿಸುವುದು ಮುಖ್ಯ.  ತುಪ್ಪದ ಆರೋಗ್ಯಲಾಭಗಳು:ಹೃದಯ ಆರೋಗ್ಯಕ್ಕೆ ಒಳ್ಳೆಯದು

ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ತುಪ್ಪವು ಹೈ ಡೆನ್ಸಿಟಿ ಲಿಪೋಪ್ರೋಟೀನ್ (HDL – ಒಳ್ಳೆಯ ಕೊಲೆಸ್ಟ್ರಾಲ್) ಹೆಚ್ಚಿಸುತ್ತದೆ. ಆದರೆ ಹೆಚ್ಚು ಸೇವಿಸಿದರೆ Low Density Lipoprotein (LDL – ಕೆಟ್ಟ ಕೊಲೆಸ್ಟ್ರಾಲ್) ಹೆಚ್ಚಿಸಬಹುದು.ಮೆದುಳಿಗೆ ಬಲ ನೀಡುತ್ತದೆ  ತುಪ್ಪದಲ್ಲಿರುವ ಒಮೇಗಾ-3 ಫ್ಯಾಟಿ ಆಮ್ಲಗಳು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಆಯುರ್ವೇದದಲ್ಲಿ ತುಪ್ಪವನ್ನು ಸ್ಮರಣಾಶಕ್ತಿ (Memory) ಮತ್ತು ಒತ್ತಡ ನಿಯಂತ್ರಣಕ್ಕೆ ಸಹಾಯಕರವೆಂದು ಹೇಳಲಾಗಿದೆ.ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ  ತುಪ್ಪವು ಬ್ಯೂಟಿರಿಕ್

ತುಪ್ಪದಲ್ಲಿ ವಿಟಮಿನ್ ಎ.ಕೆ.ಇ ..ಗಳು ನಮ್ಮಗೆ ಹೇರಳವಾಗಿ ಸಿಗುತ್ತದೆ. ಮತ್ತು ಮೆದುಳಿನ ಬೆಳವಣಿಗೆಗೂ ತುಂಬಾ ಸಹಾಯವಾಗುತ್ತಾದೆ. ತುಪ್ಪದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಹೌದು, ತುಪ್ಪ (Ghee) ಆರೋಗ್ಯಕ್ಕೆ ಒಳ್ಳೆಯದಾಗಬಹುದು – ಆದರೆ ಅತಿಯಾದ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ. ಇದು ಹಲವಾರು ರೀತಿಯಲ್ಲಿ ಉಪಯುಕ್ತ:ತುಪ್ಪದ ಆರೋಗ್ಯ ಲಾಭಗಳು:ಹೃದಯ ಆರೋಗ್ಯ: ತುಪ್ಪದಲ್ಲಿ ಆಮೆಗಾ-3 ಫ್ಯಾಟಿ ಆಸಿಡ್‌ಗಳು ಇರುತ್ತವೆ – ಇದು ಹೃದಯಕ್ಕೆ ಲಾಭಕಾರಿ. ಆದರೆ ಅತಿ ಸೇವನೆ ಮಾಡಿದರೆ ಕೊಲೆಸ್ಟರಾಲ್ ಹೆಚ್ಚಬಹುದು.ಜೀರ್ಣಕ್ರಿಯೆ: ತುಪ್ಪ ಜೀರ್ಣಶಕ್ತಿಗೆ ಸಹಾಯ ಮಾಡುತ್ತದೆ. ಇದು ಆಹಾರದ ಹೀರಿಕೆಯನ್ನು ಸುಲಭ ಮಾಡುತ್ತದೆ.ಮಾನಸಿಕ ಶಕ್ತಿ: ತುಪ್ಪವು ಮಿದುಳಿಗೆ ಪೋಷಕ, ಕಂಠ ಮತ್ತು ಮನಸ್ಸಿಗೆ ಶಾಂತಿ ನೀಡುತ್ತದೆ.ಅಂಟಿ–ಇನ್‌ಫ್ಲಮೇಟರಿ: ಆಯುರ್ವೇದದಲ್ಲಿ ತುಪ್ಪವನ್ನು ಶಮನ ಶಕ್ತಿಯುಳ್ಳದ್ದು ಎಂದು ಪರಿಗಣಿಸಲಾಗುತ್ತದೆ.ಚರ್ಮ ಮತ್ತು ಕೂದಲಿಗೆ: ಒಳಗೆ ತೆಗೆದುಕೊಂಡಾಗ ಮತ್ತು ಹೊರಗೆ ಬಳಿಸಿದಾಗ ಎರಡಕ್ಕೂ ಪೋಷಕ.ಆದರೆ ಎಚ್ಚರಿಕೆ ಬೇಕಾದ

ತುಪ್ಪವು ಆರೋಗ್ಯಕ್ಕೆ ಒಳ್ಳೆಯದು ಮತ್ತು ಕೆಟ್ಟದು ಎರಡೂ ಆಗಿರಬಹುದು, ಅದು ಸೇವಿಸುವ ಪ್ರಮಾಣ ಮತ್ತು ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ.ತುಪ್ಪದ ಆರೋಗ್ಯ ಪ್ರಯೋಜನಗಳು:* ಪೋಷಕಾಂಶಗಳಿಂದ ಸಮೃದ್ಧ: ತುಪ್ಪವು ವಿಟಮಿನ್ ಎ, ಡಿ, ಇ ಮತ್ತು ಕೆ ಯಂತಹ ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳನ್ನು ಹೊಂದಿದೆ. ಇದು ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳನ್ನು ಸಹ ಒಳಗೊಂಡಿದೆ.* ಜೀರ್ಣಕ್ರಿಯೆಗೆ ಸಹಕಾರಿ: ತುಪ್ಪದಲ್ಲಿ ಬ್ಯುಟರಿಕ್ ಆಮ್ಲವಿದೆ, ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.* ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ತುಪ್ಪವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಗುಣಗಳನ್ನು ಹೊಂದಿದೆ.* ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಮಿತವಾದ ಪ್ರಮಾಣದಲ್ಲಿ ಸೇವಿಸಿದರೆ,

ಹೌದು.. ತುಪ್ಪ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಆಹಾರಕ್ಕೆ ರುಚಿ ಕೊಡುವ ತುಪ್ಪದಿಂದ ನಿಮ್ಮ ಜೀರ್ಣ ಶಕ್ತಿ ವೃದ್ಧಿಸುವುದು.. ಅತ್ಯುತ್ತಮ ಪೋಷಕಾಂಶಗಳಿದ್ದು ರೋಗನಿರೋಧಕ ಶಕ್ತಿ ಹೆಚ್ಚಿಸಿ.. ಶರೀರಕ್ಕೆ, ವೈರಸ್ ಹಾಗೂ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ.. ಶುಗರ್ ಹಾಗೂ ಕ್ಯಾನ್ಸರ್ ಬರದಂತೆ ಬಹಳಷ್ಟು ತಡೆಗಟ್ಟುತ್ತದೆ.

ಮಲಬದ್ಧತೆ ಮತ್ತು ಮೂಳೆಗಳ ಸವೆತವೂ ಕಡಿಮೆಯಾಗುವುದು.. ಚರ್ಮದ ಬಣ್ಣ ಹಾಗೂ ಕಾಂತಿ ಹೆಚ್ಚುವುದು.. ಕಣ್ಣಿನ ಕೆಳಗಿನ ಕಪ್ಪು ವರ್ತುಲಕ್ಕೆ ಆಗಾಗ ತುಪ್ಪದ ಲೇಪನ ಮಾಡಿ, ತುಪ್ಪವನ್ನು ನಿಯಮಿತವಾಗಿ ಆಹಾರದಲ್ಲಿ,ಉಪಯೋಗಿಸಬೇಕು. ಅತಿಯಾದ್ರೆ ಅಮೃತ ಕೂಡಾ ವಿಷವಾಗುವುದು..

ಹೌದು , ನಿಮ್ಮ ದಿನನಿತ್ಯದ ಆಹಾರದಲ್ಲಿ ಒಂದು ಚಮಚ ತುಪ್ಪವನ್ನು ಸೇವಿಸುವುದರಿಂದ ನೀನು ದಿನವಿಡಿ ಚಟುವಟಿಕೆ ಇಂದ ಇರುವಿರಿ . ನಮ್ಮ ಆಯುರ್ವೇದದಲ್ಲಿ ತುಪ್ಪದ ಬಗೆಗೆ ಒಂದು ಔಷಧ ಗುಣ ಇರುವುದು ತಿಳಿದು ಬಂದಿದೆ.

ತುಪ್ಪಾ ತಿನ್ನುವುದರಿಂದ ನಮ್ಮ ದೇಹದ ಬೇಡದೆ ಇರುವ ಕೊಬ್ಬಿನ ಅಂಶ ತೆಗೆಯಲು ಇದು ಉಪಾಯವಾಗಿದೆ .ಹಾಗೂ ನಮ್ಮ ಚರ್ಮದ ಮತ್ತೆ ಕೂದಲು ಆರೋಗ್ಯವನ್ನು ಹೆಚ್ಚಿಸುತ್ತದೆ .

ಖಂಡಿತ ಒಳ್ಳೇದು. ಆದ್ರೆ, ಊಟ ದೇಸಿ ಊಟ ಆಗಿರ್ಬೇಕು. ಹಿರಿಯರು ಬಳಸುತಿದ್ದ ಆಹಾರ ಕ್ರಮ ಇರ್ಬೇಕು. ಆಗ ಮಾತ್ರ ತುಪ್ಪ ಮೆಡಿಸಿನ್ ಆಗಿ ವರ್ಕ್ ಮಾಡುತ್ತೆ. ಈಗಿನ ಆಹಾರ ಕ್ರಮ, ಹೊರಗಿನ ಊಟ, ಪಾರ್ಸೆಲ್, ಫಾಸ್ಟ್ ಫುಡ್.. ಇತ್ಯಾದಿಗಳನ್ನೂ ತಿಂದು , ತುಪ್ಪನೂ ತಿಂತೀನಿ ತಿಂದ್ರೆ, ಡಾಕ್ಟರ್ ಸಲಹೆ ಕೇಳಲೇಬೇಕು.

ತುಪ್ಪದಲ್ಲಿರುವ ಒಮೇಗಾ 3 ದೇಹದಲ್ಲಿರುವ ಕೆಟ್ಟ ಕೊಲೆಷ್ಟೋರಲ ಮಟ್ಟವನ್ನು ಕಡಿಮೆ ಮಾಡುತ್ತೆ. ಒಳ್ಳೆಯ ಕೊಲೆಷ್ಟೋರಲ್ ಮಟ್ಟವನ್ನು ಹೆಚ್ಚು ಮಾಡುತ್ತೆ.ಹೃದ್ರೂಗ ಗಳ ಅಪಾಯ ವನ್ನು ಕಡಿಮೆ ಮಾಡುತ್ತೆ.ತುಪ್ಪದಲ್ಲಿ ಲಿಯೋನಿಕ್ ಆಮ್ಲ ಇದ್ದು ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ.ಮೂಳೆ ಬಲಪಡಿಸುತ್ತೆ.ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತೆ.ಚರ್ಮ ದ ಹೊಳಪು ಹೆಚ್ಚಿಸುತ್ತೆ.ಮೆದುಳಿಗೆ ಒಳ್ಳೆಯದು.ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ.ತೂಕಾನೂ ಕಡಿಮೆ ಮಾಡಿಸುತ್ತೆ.(ಗೂಗಲ್ ಸರ್ಚ್).

ಮೊದಲು ಒಂದು ಪ್ರಶ್ನೆ ಕೇಳೋಣ.ತುಪ್ಪ ಹಸು ಖುಷಿಯಿಂದ ಕೊಟ್ಟ ಹಾಲಾ?
ಬಲವಂತದ ಗರ್ಭಧಾರಣೆ, ಕರುವನ್ನು ಬೇರ್ಪಡಿಸುವುದು,
ನೋವಿನಲ್ಲಿ ಹಾಲು ಹಿಂಡುವ ವ್ಯವಸ್ಥೆಯ ಫಲ ಅದು.
ಇದಕ್ಕೆ ಆರೋಗ್ಯ ಅಂತ ಕರೆಯಬಹುದಾ?ಒಂದು ಜೀವದ ಕಣ್ಣೀರಿನ ಮೇಲೆ
ನಮ್ಮ ಆರೋಗ್ಯ ನಿಲ್ಲಬಹುದು ಅಂದ್ರೆ
ಅದು ಆರೋಗ್ಯ ಅಲ್ಲ, ಅಹಂಕಾರದ ಸಮಾಧಾನ.ದೇಹಕ್ಕೆ ಪೋಷಣೆ ಸಸ್ಯಗಳಿಂದ ಸಿಗುತ್ತೆ.
ಆದರೆ ಮನಸ್ಸಿಗೆ ಶುದ್ಧತೆ ಎಲ್ಲಿಂದ?
ಹಿಂಸೆಯಿಂದನಾ?ಹತ್ಯೆಯ ಮೇಲೆ ಕಟ್ಟಿದ ಆರೋಗ್ಯ
ಒಂದು ದಿನ ದೇಹದಲ್ಲೇ ಅಲ್ಲ,
ಮನಸ್ಸಲ್ಲೂ ರೋಗವಾಗಿ ಕಾಣಿಸುತ್ತದೆ.ನಿಜವಾದ ಆರೋಗ್ಯ
ಕರುಣೆಯಿಂದ ಆರಂಭವಾಗುತ್ತದೆ. 🌿

ತುಪ್ಪ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಮೂಳೆಯ ಆರೋಗ್ಯವನ್ನು ಸಹ ಇದು ಉತ್ತೇಜಿಸುತ್ತದೆ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ದೃಷ್ಟಿ ಮತ್ತು ನರವ್ಯೂಹಕ್ಕೂ ಸಹ ಇದು ಒಳ್ಳೆಯದು.ತುಪ್ಪವು ಒಮೇಗಾ ತ್ರೀ ಸಮೃದ್ಧ ಮೂಲವಾಗಿದೆ ಇದು ಕೊಬ್ಬಿನಾಂಶಗಳು ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿದೆ ಇವೆಲ್ಲವೂ ಜೀವಕೋಶದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಸಮೃದ್ಧ ಕೊಬ್ಬಿನ ಆಮ್ಲವು ಕೂದಲನ್ನು ಪೋಷಿಸುತ್ತದೆ ಮತ್ತು ಅದನ್ನು ಮೃದು ಹೊಳೆಯುವ ಮತ್ತು ಆರೋಗ್ಯಕರವಾಗಿರಿಸುತ್ತದೆ. ಇದರಿಂದ ತಲೆ ಹೊಟ್ಟು ಮತ್ತು ತುರಿಕೆ ಸಮಸ್ಯೆಯಿಂದ ನಿಮ್ಮನ್ನು ರಕ್ಷಿಸುತ್ತದೆ.ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳಿಗೆ ಸೀರಮ್ ಆಗಿ ಕಾರ್ಯನಿರ್ವಹಿಸುತ್ತದೆ.

ದೇಸಿ ಹಸುವಿನ ತುಪ್ಪ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಗುಡ್ ಕೊಲೆಸ್ಟ್ರಾಲ್ ನಮ್ಮ ದೇಹದಲ್ಲಿರುವ ಬ್ಯಾಡ್ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುತ್ತದೆ ದಿನಕ್ಕೆ ಎರಡರಿಂದ ಮೂರು ಸ್ಪೂನ್ ತುಪ್ಪ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಕೇವಲ ಮನೆಯಲ್ಲಿ ಮಾಡಿದ ತುಪ್ಪ, ದೇಸಿ ಹಸುವಿಂದಾದರೆ ತೀರ ಒಳ್ಳೆಯದು ಡೈರಿ ತುಪ್ಪ ಅಡುಗೆಗೆ. ತಿನಿಸುಗಳಲ್ಲಿ ಬಳಸುತ್ತಾರೆ ಆದರೂ ಸರಿ ಅಲ್ಲ..ಒಂದು ಚಮಚ ತುಪ್ಪದಲ್ಲಿ 100 ಕ್ಯಾಲೊರಿ ಇರುತ್ತದೆ ಹಿತ ಮಿತವಾಗಿ ಬಳಸಬೇಕು,ದಿನಾಲೂ ತಿನ್ನುವುದರಿಂದ ವಿಟಮಿನ್ A D K E ಸಿಗುತ್ತದೆ,ಕೆಲವು ಅಧ್ಯಯನದ ಪ್ರಕಾರ ಇದು ತೂಕವನ್ನು ಕಡಿಮೆಯಾಗುತ್ತದೆ ಆದರೆ ನನಗೆ ತಿಳಿದಂತೆ ದೇಸಿ ಹಸುವಿನದ್ದು ಹೆಚ್ಚಿನ ಪ್ರಮಾಣ ಇರಬೇಕು ಕಾರಣ ಜರ್ಸಿ ಮತ್ತು ಎಮ್ಮೆಯ ತುಪ್ಪ ಗಟ್ಟಿಯಾಗಿರುತ್ತದೆ ಕುಸ್ತಿ ಪಟುಗಳಿಗೆ ಉತ್ತಮ,ಬುದ್ಧಿಗೆ ಹಸುವಿನ ತುಪ್ಪವೇ ಶ್ರೇಷ್ಠ…

Total Views: 0
ಜಾಹೀರಾತು
Share This Article