ಶರನ್ನವರಾತ್ರಿ ಐದನೇ ದಿನ ಸ್ಕಂದಮಾತಾ ದೇವಿ ಆರಾಧನೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Worship of Goddess Skandamata on the fifth day of Sharannavaratri

ಶರನ್ನವರಾತ್ರಿ ಐದನೇ ದಿನ ಸ್ಕಂದಮಾತಾ ದೇವಿ ಆರಾಧನೆ

ಬನ್ನಿ ಮಹಾಂಕಾಲಮ್ಮ ದೇವತೆ ಪೂಜೆ, ನಾಗದೇವತೆ ಪುನಃ ಪ್ರತಿಷ್ಠಾಪನೆ ಹಾಗೂ ಅನ್ನದಾಸೋಹ

ಬಳ್ಳಾರಿ, ಅ.15: ಶರನ್ನವರಾತ್ರಿ ಉತ್ಸವದ ಐದನೇ ದಿನವಾದ ಗುರುವಾರ ನಗರದ 24ನೇ ವಾರ್ಡ್‌ನ ಶಮಿ ಆರ್ಚರ್ಡ್ಸ್ ಲೇಔಟ್‌ನಲ್ಲಿರುವ ಸುಮಾರು 80 ವರ್ಷಗಳಷ್ಟು ಹಳೆಯ ಬನ್ನಿ ವೃಕ್ಷದ ಬಳಿ ಶ್ರೀ ಬನ್ನಿ ಮಹಾಂಕಾಲಮ್ಮ ದೇವತೆ ಪೂಜೆ ಹಾಗೂ ನಾಗದೇವತೆ ಪುನಃ ಪ್ರತಿಷ್ಠಾಪನಾ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.

ಜಾಹೀರಾತು

ಕಪ್ಪಗಲ್ ರಸ್ತೆ ಸಮೀಪ ಬೆಳಿಗ್ಗೆ 9.30ಕ್ಕೆ ನಡೆದ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಹಾಗೂ 24ನೇ ವಾರ್ಡ್‌ನ ಕಾರ್ಪೊರೇಟರ್ ಮೊತ್ಕೂರ್ ಶ್ರೀನಿವಾಸ್, 22ನೇ ವಾರ್ಡ್‌ನ ಕಾರ್ಪೊರೇಟರ್ ಬಿ. ಹನುಮಂತಪ್ಪ ಹಾಗೂ 1ನೇ ವಾರ್ಡ್‌ನ ಕಾರ್ಪೊರೇಟರ್ ಗುಡಿಗಂಟೆ ಹನುಮಂತ ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಭಾಗವಹಿಸಿದ್ದರು.

ಬಳ್ಳಾರಿ ನಗರ ಶ್ರೀ ಭಗೀರಥ ಉಪ್ಪಾರ ಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪಿ. ನಾಗೇಂದ್ರ, ಲಿಂಗರಡ್ಡಿ, ಮಧುಸೂದನ್ ರೆಡ್ಡಿ, ನಿವೃತ್ತ ಮಿಲಿಟರಿ ಸಿಬ್ಬಂದಿ ಹನುಮಂತ್ ರೆಡ್ಡಿ, ಕೆಇಬಿಯ ಲಕ್ಷ್ಮಿರೆಡ್ಡಿ, ಯು. ವೆಂಕಟೇಶ್, ಯು. ಹನುಮಂತಪ್ಪ, ಯು. ಕೃಷ್ಣಯ್ಯ, ಹೋಟೆಲ್ ಆನಂದ, ಯು. ಶಂಕ್ರಯ್ಯ, ಬಿಎಸ್‌ಎನ್‌ಎಲ್ ಆನಂದ್, ಕೆ. ನಾಗರಾಜ್, ರಮೇಶ್ ಯಾದವ್ ಸೇರಿದಂತೆ ಹಿರಿಯರು, ಮಹಿಳೆಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಶರನ್ನವರಾತ್ರಿ ಐದನೇ ದಿನ ಶ್ರೀ ಸ್ಕಂದಮಾತಾ ದೇವಿಯ ಆರಾಧನೆ ನೆರವೇರಿಸಲಾಯಿತು. ಧಾರ್ಮಿಕ ವಿಧಿವಿಧಾನಗಳ ಬಳಿಕ ಸಂಜೆ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಮಧ್ಯಾಹ್ನ 1 ಗಂಟೆಯಿಂದ ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ.

ಧಾರ್ಮಿಕ ಕಾರ್ಯಕ್ರಮ ಹಾಗೂ ಅನ್ನದಾಸೋಹದಲ್ಲಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

Total Views: 0
ಜಾಹೀರಾತು
Share This Article