ಭಕ್ತರ ಪ್ರೀತಿ, ಹಿರಿಯರ ಮನವಿಗೆ ಮಣಿದ ಕಲ್ಲಯ್ಯ ಅಜ್ಜನವರು

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Kallayya Ajja yielded to the affection of devotees and the requests of elders.

ಭಕ್ತರ ಪ್ರೀತಿ, ಹಿರಿಯರ ಮನವಿಗೆ ಮಣಿದ ಕಲ್ಲಯ್ಯ ಅಜ್ಜನವರು!

ಜಾಹೀರಾತು

!ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಮರಳಿದ ಪೀಠಾಧಿಕಾರಿಗಳು

ಗಂಗಾವತಿ, ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಕಾರಿ ಪೂಜ್ಯ ಶ್ರೀ ಕಲ್ಲಯ್ಯ ಅಜ್ಜನವರು ಮತ್ತೆ ಆಶ್ರಮಕ್ಕೆ ಮರಳಿದ್ದಾರೆ. ಅಂತರಾಷ್ಟ್ರೀಯ ಖ್ಯಾತಿಯ ಹಿಂದೂಸ್ತಾನಿ ಸಂಗೀತ ಕಲಾವಿದ ಪದ್ಮಶ್ರೀ ಪಂ. ಎಂ. ವೆಂಕಟೇಶ್ ಕುಮಾರ್ ಹಾಗೂ ಗದುಗಿನ ರಾಜಗುರು ಶ್ರೀ ಗುರುಸ್ವಾಮಿಗಳು ಸೇರಿದಂತೆ ಆಶ್ರಮದ ಹಿರಿಯರು ಮತ್ತು ಭಕ್ತರ ಮನವಿಗೆ ಸ್ಪಂದಿಸಿ ಶ್ರೀಗಳು ಈ ನಿರ್ಧಾರ ಕೈಗೊಂಡಿದ್ದಾರೆ.
ಕೆಲ ತಿಂಗಳುಗಳಿಂದ ಗಂಗಾವತಿಯ ಶಾಖಾ ಆಶ್ರಮದಲ್ಲಿ ಮೌನವ್ರತ ಆಚರಿಸುತ್ತಿದ್ದ ಶ್ರೀಗಳನ್ನು ಮನವೊಲಿಸುವಲ್ಲಿ ಹಿರಿಯರು ಮತ್ತು ಭಕ್ತರು ಯಶಸ್ವಿಯಾಗಿದ್ದಾರೆ. ನೂರಾರು ಶಿಷ್ಯರು ಹಾಗೂ ಭಕ್ತರು ಗೌರವಪೂರ್ವಕವಾಗಿ ಶ್ರೀಗಳನ್ನು ಗದುಗಿನ ಪುಣ್ಯಾಶ್ರಮಕ್ಕೆ ಬೀಳ್ಕೊಟ್ಟರು.
ಶ್ರೀಗಳು ಆಶ್ರಮಕ್ಕೆ ಮರಳಿದ ಹಿನ್ನೆಲೆಯಲ್ಲಿ ಭಕ್ತವಲಯದಲ್ಲಿ ಸಂತಸ ಮನೆಮಾಡಿದೆ.

Total Views: 0
ಜಾಹೀರಾತು
Share This Article