ಗೋಕಾಕದ ಕುಖ್ಯಾತ ರೌಡಿ ಗೂಂಡಾ ಕಾಯ್ದೆಯಡಿ ಬಂಧನ: ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ

H.Mallikarjun
H.Mallikarjun - Kalyanasiri
1 Min Read
Notorious rowdy from Gokak arrested under the Goonda Act: Major operation by Belagavi police.

ಗೋಕಾಕದ ಕುಖ್ಯಾತ ರೌಡಿ ಗೂಂಡಾ ಕಾಯ್ದೆಯಡಿ ಬಂಧನ: ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ

ಜಾಹೀರಾತು

ವರದಿ:   Ishwar Dhavaleshwar

ಗೋಕಾಕ: ಪಟ್ಟಣದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಕುಖ್ಯಾತ ರೌಡಿ ವಿಶಾಲ ತಾಯಿ ಸರೋಜಾ ಮೇಸ್ತ್ರಿ (29) ನನ್ನು ಗೋಕಾಕ ಶಹರ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ.

ಆರೋಪಿ ಮೇಲೆ 10 ಗಂಭೀರ ಪ್ರಕರಣ:

ಆದಿಜಾಂಬವ ನಗರದ ನಿವಾಸಿಯಾದ ಈತನ ಮೇಲೆ ಗೋಕಾಕ ಶಹರ ಠಾಣೆಯಲ್ಲಿ 01-ಕೊಲೆ ಪ್ರಕರಣ, 03-ಕೊಲೆಗೆ ಯತ್ನ, 01-ಆಯುಧ ಕಾಯ್ದೆ, 01-ಸರ್ಕಾರಿ ನೌಕರರ ಮೇಲೆ ಹಲ್ಲೆ ಮತ್ತು 03-ಇತರೆ ಪ್ರಕರಣಗಳು ಹಾಗೂ ಗೋಕಾಕ ಗ್ರಾಮೀಣ ಠಾಣೆಯಲ್ಲಿ 01-ಆಯುಧ ಕಾಯ್ದೆ ಸೇರಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ಈತನ ಸಮಾಜ ಘಾತುಕ ಕೃತ್ಯಗಳನ್ನು ನಿಯಂತ್ರಿಸಲು 2020 ರಲ್ಲಿಯೇ ರೌಡಿಶೀಟ್ ತೆರೆಯಲಾಗಿತ್ತು.

ಬೆಳಗಾವಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನ:

ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ರಾಮರಾಜನ್ (ಭಾ.ಪೊ.ಸೇ) ಹಾಗೂ ಗೋಕಾಕ ಉಪವಿಭಾಗದ ಡಿವೈಎಸ್ಪಿ ಶ್ರೀ ರಾಮಗೊಂಡ ಬಿ ಬಸರಗಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಆರೋಪಿಯ ವಿರುದ್ಧ ಸ್ಥಾನ ಭದ್ರತೆಯ (Detention) ಆದೇಶ ಹೊರಡಿಸಿ, ಅತ್ಯಂತ ಯಶಸ್ವಿಯಾಗಿ ಬಂಧಿಸಲಾಗಿದೆ. ಪ್ರಸ್ತುತ ಆರೋಪಿಯನ್ನು ದಿನಾಂಕ: 27-07-2026 ರಿಂದ ಒಂದು ವರ್ಷದ ಅವಧಿಯವರೆಗೆ ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.

ಈ ಸಂದರ್ಭದಲ್ಲಿ ಗೋಕಾಕ ಡಿವೈಎಸ್ಪಿ ಶ್ರೀ ರವಿ ಡಿ ನಾಯ್ಕ, ಪ್ರಭಾರ ಸಿಪಿಐ ಗೋಕಾಕ ಶ್ರೀಶೈಲ್ ಬ್ಯಾಕೋಡ, ಪಿಎಸ್ಐ (ಕಾ&ಸು) ಶ್ರೀ ಕಿರಣ ಮೋಹಿತೆ, ಗೋಕಾಕ ಶಹರ ಠಾಣೆ ಮತ್ತು ಸಿಬ್ಬಂದಿಗಳಾದ ಶಾನೂರ ಹುನೂರ, ಕೆ.ಎನ್.ಇಳಿಗೇರ, ಮಂಜುನಾಥ ಹುಚಗೌಡರ ಇದ್ದರು. ಅಲ್ಲದೆ ಇತನ ಸಹಚರರ ಮೇಲೆ ಕೂಡ ತೀವ್ರ ನಿಗಾ ವಹಿಸಿದ್ದು ಇರುತ್ತದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Total Views: 0
ಜಾಹೀರಾತು
Share This Article