H.Mallikarjun
H.Mallikarjun - Kalyanasiri
1 Min Read

ಕರ್ನಾಟಕದ ಮಾಧ್ಯಮ ಪತ್ರಕರ್ತರ ಸಂಘ, ಬೆಂಗಳೂರು,ಗಂಗಾವತಿ

ಜಾಹೀರಾತು

-: ಆದೇಶ ಪತ್ರ :-

ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ, ರಾಜ್ಯ ಸಮಿತಿ ಸದಸ್ಯರಾದ ಶ್ರೀ ಹೆಚ್. ಮಲ್ಲಿಕಾರ್ಜುನ ಅವರು ಈ ಕೆಳಗಿನಂತೆ ಆದೇಶಿಸಿದ್ದಾರೆ.

ಕರ್ನಾಟಕದ ಮಾಧ್ಯಮ ಪತ್ರಕರ್ತರ ಸಂಘದ ವತಿಯಿಂದ ಕೊಪ್ಪಳ ಜಿಲ್ಲಾ ಸಂಚಾಲಕರನ್ನಾಗಿ ಉತ್ತರ ಕರ್ನಾಟಕ ನೈಜತೆಯ ತಿರುವು ಸಂಪಾದಕ ಕನಕಪ್ಪ ಕೆ ತಳವಾರ ಅವರನ್ನು ನೇಮಕ ಮಾಡಲಾಗಿದೆ.

ಕೊಪ್ಪಳ ಜಿಲ್ಲೆಯ ವ್ಯಾಪ್ತಿಯ ಆರು ತಾಲೂಕುಗಳಲ್ಲಿ ಸಂಘದ ಸದಸ್ಯರನ್ನು ನೇಮಕ ಮಾಡುವ ಹಾಗೂ ಸಂಘಟನೆಯನ್ನು ಬಲಪಡಿಸುವ ಜವಾಬ್ದಾರಿಯನ್ನು ಶ್ರೀ ಕನಕಪ್ಪ ಕೆ ತಳವಾರ ಅವರಿಗೆ ವಹಿಸಲಾಗಿದೆ.

  ಜಿಲ್ಲೆಯ ಎಲ್ಲಾ  ತಾಲುಕಗಳಲ್ಲಿ ಹುಸ ಸದಸ್ಯರನ್ನು ಮಾಡುವ ಇವರ ಮೊದಲ ಕರ್ತವ್ಯ.ಅದೇ ರೀತಿ, ಪ್ರತಿ ತಾಲೂಕಿನ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಅವರ ನೇಮಕಾತಿಗೆ ಸಂಬಂಧಿಸಿದ ವಿವರಗಳನ್ನು ಸಂಘದ ರಾಜ್ಯ ಸಮಿತಿಯ ಗಮನಕ್ಕೆ ತಂದು ಅನುಮೋದನೆ ಪಡೆದು ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇವರಿಗೆ ಅಧಿಕಾರ ನೀಡಲಾಗಿದೆ.

ಶ್ರೀ ಕನಕಪ್ಪ ಕೆ ತಳವಾರ ಅವರು ಸಂಘದ ನಿಯಮ, ನಿಯಮಾವಳಿ ಹಾಗೂ ರಾಜ್ಯ ಸಮಿತಿಯ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸಿ, ಕೊಪ್ಪಳ ಜಿಲ್ಲೆಯಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕೆಂದು ಈ ಮೂಲಕ ಸೂಚಿಸಲಾಗಿದೆ.

ಹೆಚ್.ಮಲ್ಲಿಕಾರ್ಜುನ

ರಾಜ್ಯಸಮಿತಿ ಸದಸ್ಯರು

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ಬೆಂಗಳೂರು, ಗಂಗಾವತಿ, ಪೋನ್-9880693723

Total Views: 0
ಜಾಹೀರಾತು
Share This Article