ಡಿಜಿಟಲ್ ಯುಗದಲ್ಲಿ ಪತ್ರಿಕೆ ಬೇಕೆಲ್ಲವೇ? ವೇದಮೂರ್ತಿ ಶಿವಮೂರ್ತಿ ಸ್ವಾಮೀಜಿ ಕಳವಳ – ಭಕ್ತರಿಗೆ ಸಂದೇಶ

H.Mallikarjun
H.Mallikarjun - Kalyanasiri
1 Min Read

Are newspapers necessary in the digital age? Vedomurthi Shivamurthi Swamiji’s concern – message to devotees

ಡಿಜಿಟಲ್ ಯುಗದಲ್ಲಿ ಪತ್ರಿಕೆ ಬೇಕೆಲ್ಲವೇ? ವೇದಮೂರ್ತಿ ಶಿವಮೂರ್ತಿ ಸ್ವಾಮೀಜಿ ಕಳವಳ – ಭಕ್ತರಿಗೆ ಸಂದೇಶ

ಕನಕಗಿರಿ: ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲವೂ ಮೊಬೈಲ್ ನಲ್ಲಿ ಸಿಗುತ್ತಿರುವಾಗ ಪತ್ರಿಕೆಗಳು ಬೇಕೆಲ್ಲವೇ ಎಂಬ ಪ್ರಶ್ನೆ ಮೂಡುತ್ತಿದೆ. ಆದರೆ ಪತ್ರಿಕೆಗಳಿಲ್ಲದೆ ಸಮಾಜದ ನಿಜವಾದ ಸತ್ಯ ತಿಳಿಯಲು ಸಾಧ್ಯವಿಲ್ಲ ಎಂದು ವೇದಮೂರ್ತಿ ಶಿವಮೂರ್ತಿ ಸ್ವಾಮೀಜಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಜಿರಾಳು ಕೆರೆಯ vbg ರಾಮಜಿ ಅಡಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ, ಅವರು ಸ್ವಾಮೀಜಿಗಳು, “ಮೊಬೈಲ್ ನಲ್ಲಿ ಬರುವುದೆಲ್ಲಾ ಸುದ್ದಿಯಲ್ಲ, ಅದರಲ್ಲಿ ಸುಳ್ಳು ಹೆಚ್ಚು. ಆದರೆ ಪತ್ರಿಕೆಯಲ್ಲಿ ಬರುವ ಸುದ್ದಿ ನಾಲ್ಕು ಬಾರಿ ಪರಿಶೀಲನೆ ಆಗಿರುತ್ತದೆ. ಪತ್ರಕರ್ತರು ಗ್ರಾಮಗ್ರಾಮಕ್ಕೆ ಹೋಗಿ ಬರೆಯುವ ಸುದ್ದಿಗೆ ಅದರದ್ದೇ ಆದ ಮೌಲ್ಯವಿದೆ” ಎಂದು ಹೇಳಿದರು.
“ಭಕ್ತರು ದಿನಕ್ಕೆ 10 ನಿಮಿಷವಾದರೂ ಪತ್ರಿಕೆ ಓದಬೇಕು. ಮಕ್ಕಳಿಗೆ ಪತ್ರಿಕೆ ಓದುವ ಹವ್ಯಾಸ ಬೆಳೆಸಬೇಕು. ಡಿಜಿಟಲ್ ಜೊತೆಗೆ ಪತ್ರಿಕೆಯ ಸಂಸ್ಕೃತಿ ಉಳಿಯಬೇಕು” ಎಂದು ಸ್ವಾಮೀಜಿಗಳು ಭಕ್ತರಿಗೆ ಸಂದೇಶ ನೀಡಿದರು.

ಜಾಹೀರಾತು
Total Views: 1
ಜಾಹೀರಾತು
Share This Article